ETV Bharat / state

ಪೊಲೀಸ್ ಇನ್ಸ್​​ಪೆಕ್ಟರ್ ಧಮ್ಕಿ ಆರೋಪ: ಶಾಲೆಗೆ ಹೋಗುವುದಕ್ಕೂ ಹೆದರುತ್ತಿರುವ ಬಾಲಕಿ - mundagod Police inspector threat to girl

ಪೊಲೀಸ್ ಇನ್ಸ್​​ಪೆಕ್ಟರ್ ಧಮ್ಕಿಗೆ ಹೆದರಿದ 13 ವರ್ಷದ ಬಾಲಕಿ ಶಾಲೆಗೆ ಹೋಗದೇ, ಭಯಭೀತಳಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

allegation-of-police-inspector-threat-to-girl
ಪೊಲೀಸ್ ಇನ್ಸ್​​ಪೆಕ್ಟರ್ ಧಮ್ಕಿ ಆರೋಪ: ಶಾಲೆಗೆ ಹೋಗುವುದಕ್ಕೂ ಹೆದರುತ್ತಿರುವ ಬಾಲಕಿ
author img

By

Published : Jun 11, 2022, 5:54 PM IST

Updated : Jun 11, 2022, 7:43 PM IST

ಕಾರವಾರ: ಪೊಲೀಸ್ ಇನ್ಸ್​​ಪೆಕ್ಟರ್ ಧಮ್ಕಿಗೆ ಹೆದರಿದ 13 ವರ್ಷದ ಬಾಲಕಿಯೋರ್ವಳು ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದು ಕುಳಿತ ಘಟನೆ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ನಡೆದಿದೆ. ಮುಂಡಗೋಡ ಪೊಲೀಸ್ ಠಾಣೆ ಇನ್ಸ್​​ಪೆಕ್ಟರ್ ಸಿದ್ದಪ್ಪ ಸಿಮಾನಿ‌ ಬಾಲಕಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗ್ತಿದೆ.

ಜೂನ್​​ 5ರಂದು ಹೊಲದ ವಿಷಯವಾಗಿ ಸುಭಾನ್‌ಸಾಬ್‌ ನಬಿಸಾಬ್ ಹುಲಗುರ ಹಾಗೂ ಮುಂಡಗೋಡ ಠಾಣೆ ಇನ್ಸ್​​ಪೆಕ್ಟರ್ ಸಿದ್ದಪ್ಪ ಸಿಮಾನಿ‌ ನಡುವೆ ಜೋರಾದ ಮಾತುಕತೆ ನಡೆದಿದೆ. ಇದನ್ನು ದೂರದಿಂದಲೇ ನೋಡುತ್ತಿದ್ದ ಬಾಲಕಿ ಮೊಬೈಲ್ ತೆಗೆದು ವಿಡಿಯೋ ಮಾಡುತ್ತಿದ್ದಳು. ಆದರೆ ಇದನ್ನು ಕಂಡ ಇನ್ಸ್​​ಪೆಕ್ಟರ್, ಬಾಲಕಿಯಿಂದ ಮೊಬೈಲ್ ಕಸಿದುಕೊಂಡು ವಿಡಿಯೋ ಯಾಕೆ ಮಾಡುತ್ತಿದ್ದೀಯಾ? ಬಹಳ ಹುಷಾರಿದ್ದಿ, ನಿನ್ನ ಚರ್ಮ ಸುಲಿಯುತ್ತೇನೆ ಎಂದು ಧಮ್ಕಿ ಹಾಕಿ, ನೀವು ಎಲ್ಲರೂ ಪೊಲೀಸ್ ಠಾಣೆಗೆ ಬರಬೇಕೆಂದು ಹೇಳಿದ್ದರಂತೆ.

ಪೊಲೀಸ್ ಇನ್ಸ್​​ಪೆಕ್ಟರ್ ಧಮ್ಕಿ ಆರೋಪ

ಇದರಿಂದ ಭಯಭೀತಳಾಗಿ ಇದುವರೆಗೂ ಚೇತರಿಸಿಕೊಳ್ಳದ ಬಾಲಕಿ ಮಾನಸಿಕವಾಗಿ ಅದೇ ಚಿತ್ರಣವನ್ನು ತಲೆಯಲ್ಲಿಟ್ಟುಕೊಂಡಿದ್ದಾಳೆ‌. ಅಲ್ಲದೆ, ಶಾಲೆಗೆ ಹೋಗುವುದನ್ನೂ ನಿಲ್ಲಿಸಿದ್ದು, ಇದರಿಂದ ಮನೆಯವರೂ ಆತಂಕಗೊಂಡಿದ್ದಾರೆ.‌ ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಾಲಕಿಯ ತಂದೆ ಅಮಹಾನ್ ಅಬ್ದುಲ್‌ಸಾಬ್ ತಡಸ್​​ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಯುವಕನ ಮೇಲೆ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ: ರಕ್ಷಣೆಗೆ ಮುಂದಾಗದ ಜನ!

Last Updated : Jun 11, 2022, 7:43 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.