ETV Bharat / state

ಚುನಾವಣೆ ಯಶಸ್ವಿಯಾಗಿ ನಡೆಸಲು ಭಟ್ಕಳದಲ್ಲಿ ಸಕಲ ಸಿದ್ಧತೆ - Assistant Commissioner Bharat S

ಭಟ್ಕಳ ತಾಲೂಕಿನಲ್ಲಿ ಒಟ್ಟು 16 ಗ್ರಾಮ ಪಂಚಾಯಿತಿಗಳ 261 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 672 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ ಎಂದು ಸಹಾಯಕ ಆಯುಕ್ತ ಭರತ್ ಎಸ್. ತಿಳಿಸಿದ್ದಾರೆ.

bharat-s
ಭರತ್ ಎಸ್
author img

By

Published : Dec 21, 2020, 4:06 PM IST

ಭಟ್ಕಳ: ತಾಲೂಕಿನಲ್ಲಿ ಹಾಗೂ ಹೊನ್ನಾವರದಲ್ಲಿ ಡಿ. 22ರಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಮತದಾನ ಯಶಸ್ವಿಯಾಗಿ ನಡೆಸಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಆಯುಕ್ತ ಭರತ್ ಎಸ್. ತಿಳಿಸಿದ್ದಾರೆ.

ಭರತ್ ಎಸ್.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಒಟ್ಟು 16 ಗ್ರಾಮ ಪಂಚಾಯಿತಿಗಳ 261 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 672 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ಈಗಾಗಲೇ 20 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಮಡಿಕೇರಿ, ಕೋಟದಮಕ್ಕಿ ಹಾಗೂ ತಲಗೋಡ ಕ್ಷೇತ್ರಕ್ಕೆ ನಾಮಪತ್ರ ಬಂದಿಲ್ಲವಾದ್ದರಿಂದ ಮತದಾನ ನಡೆಯುತ್ತಿಲ್ಲ. ಉಳಿದಂತೆ ಎಲ್ಲಾ ಕ್ಷೇತ್ರಗಳಿಗೆ ಡಿ. 22ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯತನಕ ಮತದಾನ ನಡೆಯಲಿದ್ದು, ಮತದಾನ ಮಾಡುವವರು ಕಡ್ಡಾಯವಾಗಿ ಮಾಸ್ಕ್​ ಧರಿಸಿರಬೇಕು ಎಂದರು.

ಓದಿ: ನಾನು ಬಾದಾಮಿ ಶಾಸಕ, ಬೇರೆ ಕ್ಷೇತ್ರಗಳ ಆಯ್ಕೆ ಈಗ ಅಪ್ರಸ್ತುತ: ಸಿದ್ದರಾಮಯ್ಯ

ಒಟ್ಟು 16 ಚುನಾವಣಾಧಿಕಾರಿಗಳು, 20 ಸಹಾಯಕ ಚುನಾವಣಾಧಿಕಾರಿಗಳು, 8 ಸೆಕ್ಟರ್ ಅಧಿಕಾರಿಗಳು, 2 ಫ್ಲೈಯಿಂಗ್ ಸ್ಕ್ವಾಡ್ ನೇಮಕ ಮಾಡಲಾಗಿದ್ದು, ಒಟ್ಟು 600 ಸಿಬ್ಬಂದಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. 150 ಕೋವಿಡ್ ಹೆಲ್ಪ್ ಡೆಸ್ಕ್ ಮಾಡಲಾಗಿದ್ದು, 150 ಆಶಾ ಕಾರ್ಯಕರ್ತೆಯರು, 104 ಅಂಗನವಾಡಿ ಕಾರ್ಯಕರ್ತೆಯರು, 237 ಭದ್ರತಾ ಸಿಬ್ಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು. ತಾಲೂಕಿನಲ್ಲಿ ಒಟ್ಟು 93255 ಮತದಾರರಿದ್ದು, 47332 ಪುರುಷರು, 45923 ಮಹಿಳಾ ಮತದಾರರು ಹಾಗೂ 34 ಸೇವಾ ಮತದಾರರಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.