ETV Bharat / state

ಔಷಧಿ ನೀಡುವುದಾಗಿ ಲಕ್ಷಾಂತರ ರೂ. ವಂಚನೆ: ಆರೋಪಿಗೆ 3 ವರ್ಷ ಜೈಲು ಶಿಕ್ಷೆ - ಕಾರವಾರ ನಗರ ಪೊಲೀಸ್​ ಠಾಣೆ

ಆಯುರ್ವೇದಿಕ್ ಔಷಧಿ ನೀಡುವುದಾಗಿ ಹೇಳಿ ನಂಬಿಸಿ ಲಕ್ಷಾಂತರ ರೂ. ವಂಚನೆ ಮಾಡಿದ್ದ ವ್ಯಕ್ತಿಗೆ 3 ವರ್ಷ ಜೈಲು ಹಾಗೂ 20 ಸಾವಿರ ದಂಡ ವಿಧಿಸಿ ಕೋರ್ಟ್​ ಆದೇಶ ನೀಡಿದೆ.

ಆರೋಪಿಗೆ 3 ವರ್ಷ ಜೈಲು ಶಿಕ್ಷೆ
ಆರೋಪಿಗೆ 3 ವರ್ಷ ಜೈಲು ಶಿಕ್ಷೆ
author img

By

Published : Sep 22, 2020, 10:22 AM IST

ಕಾರವಾರ: ಕೈ ನಡಗುವುದನ್ನು ಸರಿಪಡಿಸಲು ಆಯುರ್ವೇದಿಕ್ ಔಷಧಿ ನೀಡುವುದಾಗಿ ಹೇಳಿ 2.34 ಲಕ್ಷ ರೂಪಾಯಿ ವಂಚಿಸಿದ್ದ ಆರೋಪಿಯೋರ್ವನಿಗೆ ಕಾರವಾರದ ಸಿಜೆಎಂ ನ್ಯಾಯಾಲಯ 3 ವರ್ಷ ಜೈಲು ಹಾಗೂ 20 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.

ಬೆಂಗಳೂರಿನ ಯಶವಂತಪುರ ಮೂಲದ ಹರೀಶ್ ಶಿಕ್ಷೆಗೊಳಗಾದ ಆರೋಪಿ. ಈತ 2016ರ ಸೆಪ್ಟೆಂಬರ್ 13ರಂದು ಹುಬ್ಬಳ್ಳಿಯ ಶ್ರೀಕಾಂತ್ ದೇಶಪಾಂಡೆ ಎಂಬುವವರು ಕಾರವಾರದ ಹೊಟೆಲ್​ವೊಂದರಲ್ಲಿ ಟೀ ಕುಡಿಯುವಾಗ ಕೈ ನಡುಗುವುದನ್ನು ಗಮನಿಸಿ ಕಾರವಾರದಲ್ಲಿರುವ ಆಯುರ್ವೇದಿಕ್ ಔಷಧಿ ಅಂಗಡಿಯಿಂದ ಔಷಧಿ ನೀಡುವುದಾಗಿ ನಂಬಿಸಿದ್ದರು. ಬಳಿಕ ಮೊದಲು 4 ಸಾವಿರ ಮುಂಗಡ ಪಡೆದು ಬಳಿಕ 2.30 ಲಕ್ಷ ಹಣವನ್ನು ಆರ್​ಟಿಜಿಎಸ್ ಮಾಡಿಸಿಕೊಂಡು ನಾಪತ್ತೆಯಾಗಿದ್ದರು‌.

ಆದರೆ ಈ ಬಗ್ಗೆ ಕಾರವಾರ ನಗರ ಠಾಣೆಯಲ್ಲಿ ದೂರು ದಾಖಲಾಗಿ ಪೊಲೀಸ್ ಉಪ ನಿರೀಕ್ಷಕರಾಗಿದ್ದ ಭಗವಂತ ಕಾಳೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದರಂತೆ ಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎನ್.ಎಂ.ರಮೇಶ್, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 3 ವರ್ಷ ಜೈಲು ಹಾಗೂ 20 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ 2.34 ಲಕ್ಷ ಹಣವನ್ನು ಶ್ರೀಕಾಂತ್​ ಪತ್ನಿಗೆ ಮರಳಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಮಹಾದೇವ ಗಡದ ವಾದ ಮಂಡಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.