ಭಟ್ಕಳ: ವಿಡಿಯೋ ಗೇಮ್, ಮೊಬೈಲ್ ಗೇಮ್ಗಳ ಗುಂಗಿನಲ್ಲಿ ಮೈದಾನಕ್ಕೆ ಇಳಿದು ಆಡುವ ಮಕ್ಕಳ ಸಂಖ್ಯೆಯೇ ಹೆಚ್ಚುತ್ತಿರುವ ಈ ಕಾಲದಲ್ಲಿ ಸಾಹಸಮಯ ಆಟಗಳನ್ನು ಆಡುವವರು ಅತಿ ವಿರಳ. ಆದರೆ, ಇಲ್ಲೊಬ್ಬ ಬಾಲಕಿ ಸುಮಾರು 47 ನಿಮಿಷಗಳ ಕಾಲ ನೀರಿಗಿಳಿದು ಜಲಪ್ರಪಂಚ ವೀಕ್ಷಿಸಿದ್ದಾಳೆ.
![A small girl did scuba diving for more than 47 minutes](https://etvbharatimages.akamaized.net/etvbharat/prod-images/kn-bkl-01-girl-achievement-of-scuba-diving-kac10002_01032020213454_0103f_1583078694_560.jpg)
6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪುಟ್ಟ ಬಾಲಕಿ ಋತು, ಶ್ರೀಧರ ಕುಟಾಕರ್ ಎಂಬುವರ ಪುತ್ರಿ. ಉತ್ತರ ಕನ್ನಡ ಜಿಲ್ಲಾಡಳಿತ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ ನೇತ್ರಾಣಿ ನಡುಗಡ್ಡೆಯಲ್ಲಿ ಆಯೋಜನೆ ಮಾಡಿದ್ದ ಸ್ಕೂಬಾ ಉತ್ಸವದಲ್ಲಿ ಪಾಲ್ಗೊಂಡ ಈಕೆ, ಸಮುದ್ರದ ಆಳಕ್ಕೆ ಇಳಿದು ಸುಮಾರು 47 ನಿಮಿಷಗಳ ಕಾಲ ನೀರಿನಲ್ಲೇ ಇದ್ದು ಅಲ್ಲಿ ಜಲಚರಗಳನ್ನ ವೀಕ್ಷಿಸುವ ಮೂಲಕ ಸಾಹಸ ಮೆರೆದಿದ್ದಾಳೆ.
ಸ್ಕೂಬಾ ಡೈವಿಂಗ್ ಮಾಡೋದಕ್ಕೆ ದೊಡ್ಡವರೇ ಭಯ ಪಡುವಾಗ ಈ ಪುಟ್ಟ ಬಾಲಕಿಯ ಸಾಹಸಕ್ಕೆ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.