ಭಟ್ಕಳ: 2020ರ ಜನವರಿಯಲ್ಲಿ ಯಾಸೀನ್ ಇರಾನ್ ತೆರಳಿದ್ದು, ಸರಕು ಹಡಗಿನಲ್ಲಿ ಸಮುದ್ರಯಾನಗಾರನಾಗಿ ಕೆಲಸಕ್ಕೆ ಸೇರಿದ. ಹಡಗು ಮಾಲೀಕರ ಜತೆ ವಾಗ್ವಾದ ಹಾಗೂ ಕೋವಿಡ್ನ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಕಳೆದ ಆರು ತಿಂಗಳಿಂದ ಭಟ್ಕಳ ನಿವಾಸಿ ಯಾಸೀನ್ ಷಾ ಚಬಹಾರ್ನ ಬಂದರಿನಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಒಂದೂವರೆ ವರ್ಷಗಳಿಂದ ಹಡಗು ಮಾಲೀಕರು ಹಾಗೂ ಇರಾನ್ಗೆ ಆತನನ್ನು ಕರೆತಂದ ಏಜೆನ್ಸಿ ಸಂಪರ್ಕವಿಲ್ಲದ ಕಾರಣ ಯಾಸೀನ್ ಭಟ್ಕಳಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ.
ಸಾಂಕ್ರಾಮಿಕ ಪರಿಸ್ಥಿತಿ ಸುಧಾರಿಸಿದ ನಂತರ ಇತರ ಸರಕು ಹಡಗುಗಳ ಚಾಲನೆ ಪುನರಾರಂಭಗೊಂಡಿದ್ದರೂ ಹಡಗು ಆಂಕರ್‌ನಿಂದ ಹೊರ ಬಂದಿಲ್ಲ. ಕೈಯಲ್ಲಿ ಯಾವುದೇ ವೀಸಾ ಇಲ್ಲ, ಒಂದು ವರ್ಷ ಸಂಬಳವನ್ನೂ ನೀಡದ ಕಾರಣ, ಯಾಸೀನ್ ಸಂಕಷ್ಟಕ್ಕೆ ಸಿಲುಕಿದ್ದಾನೆ.
ನಾನು ಪದವಿ ಪಡೆಯಲು ಮತ್ತು ಇರಾನ್ ತಲುಪಲು ಸುಮಾರು 6 ಲಕ್ಷ ರೂ. ಸಾಲ ಮಾಡಿದ್ದೇನೆ. ಸಮುದ್ರಗಾರನಾಗಿ ಕೆಲಸಕ್ಕೆ ಸೇರುವುದಕ್ಕೆ ಏಜೆನ್ಸಿವೊಂದಕ್ಕೆ 200 ಡಾಲರ್ ಪಾವತಿಸಿದ್ದೇನೆ.
ಆದರೆ, ನಾನು ಇರಾನ್ಗೆ ಬಂದಾಗ ಏಜೆನ್ಸಿ ತನ್ನ ವರಸೆ ಬದಲಾಯಿಸಿತು. ಒಪ್ಪಂದವು ಪರ್ಶಿಯನ್ ಭಾಷೆಯಲ್ಲಿ ಇರುವುದರಿಂದ ಇಲ್ಲಿಗೆ ಬರುವ ಬಹುತೇಕ ಭಾರತೀಯರನ್ನು ಮೋಸಗೊಳಿಸಲಾಗುತ್ತದೆ. ನನಗೆ ಸ್ವಲ್ಪ ಪರ್ಶಿಯನ್ ಭಾಷೆ ತಿಳಿದಿದ್ದರಿಂದ ನಾನು ಒಪ್ಪಂದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೆ. ನನಗೆ 150 ಡಾಲರ್ ಸಂಬಳ ನಿಗದಿಪಡಿಸಲಾಗಿದ್ದು, ಹಣದ ಅವಶ್ಯಕತೆ ಇದ್ದಿದ್ದರಿಂದ ನಾನು ಈ ಕೆಲಸಕ್ಕೆ ಒಪ್ಪಿಕೊಂಡೆ. ಆದರೆ, ಒಂದು ವರ್ಷವಾದರೂ ಸಂಸ್ಥೆ ನನಗೆ ಸಂಬಳ ನೀಡಿಲ್ಲ ಎಂದು ಯಾಸೀನ್ ಶಾ ತಿಳಿಸಿದ್ದಾರೆ.
ಕಳೆದ ಆರು ತಿಂಗಳಿನಿಂದ ನನಗೆ ಹಡಗು ಮಾಲೀಕರು ಮತ್ತು ಏಜೆನ್ಸಿಯಿಂದ ಯಾವುದೇ ಪಡಿತರ ಅಥವಾ ಸಹಾಯ ನೀಡಲಿಲ್ಲ. ಬಂದರಿನಲ್ಲಿ ಡಾಕ್ ಮಾಡಲಾದ ಇತರ ಹಡಗುಗಳಿಂದ ನಾನು ಊಟ ಪಡೆದು ತಿನ್ನುತ್ತಿದ್ದೇನೆ. ಕಂಪನಿಯು ಆರು ತಿಂಗಳ ಹಿಂದೆ ಭಾರತಕ್ಕೆ ವಿಮಾನ ಟಿಕೆಟ್ ನೀಡಿತ್ತಾದರೂ ಕಂಪನಿ ಇಡೀ ವರ್ಷ ನನ್ನ ವೇತನವನ್ನು ನೀಡಲು ನಿರಾಕರಿಸಿತು.
ಅನೇಕ ಭಾರತೀಯ ಹುಡುಗರನ್ನು ಈ ರೀತಿ ಮೋಸಗೊಳಿಸಲಾಗುತ್ತಿರುವುದರಿಂದ ನಾನು ಇಲ್ಲೇ ಉಳಿಯಲು ಮತ್ತು ಹೋರಾಡಲು ನಿರ್ಧರಿಸಿದೆ. ತಮಿಳುನಾಡಿನ ವ್ಯಕ್ತಿಯೊಬ್ಬರು ಏರ್ ಟಿಕೆಟ್ ತೆಗೆದುಕೊಂಡು ಪಾವತಿಸದ ವೇತನದ ಬಗ್ಗೆ ಚಿಂತಿಸದೇ ಇರಾನ್ ತೊರೆದರು. ಸಮುದ್ರಯಾನಗಾರರ ದುಃಸ್ಥಿತಿಯನ್ನು ವಿವರಿಸಿರುವ ಯಾಸೀನ್, ಭಾರತೀಯ ದೂತಾವಾಸ ಮತ್ತು ಇತರ ಸಂಸ್ಥೆಗಳನ್ನು ನಾನು ಸಂಪರ್ಕಿಸಿದ್ದೇನೆ, ”ಎಂದು ತಿಳಿಸಿದ್ದಾರೆ.
ಈ ಬಗ್ಗೆ ಈ ಟಿವಿ ಭಾರತ್ಗೆ ಮಾಹಿತಿ ನೀಡಿದ ಏಮ್ ಇಂಡಿಯಾ ಫೋರಂ ಸ್ಥಾಪಕ ಅಧ್ಯಕ್ಷ. ಶಿರಾಲಿ ಶೇಕ್ ಮುಜಾಫರ್, ಭಾರತ ಮತ್ತು ವಿದೇಶದ ಹಲವಾರು ಸಂಸ್ಥೆಗಳು ಯಾಸೀನ್‌ಗೆ ಸಹಾಯ ಮಾಡಲು ಪ್ರಯತ್ನಿಸುತ್ತಿವೆ. ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆ. ಆದರೆ ಇಲ್ಲಿಯವರೆಗೆ ಇದು ಸಹಾಯಕವಾಗಲಿಲ್ಲ. ಹಡಗು ಕಂಪನಿ ಮಾಲೀಕರನ್ನು ಸಂಪರ್ಕಿಸಲು ಅಧಿಕಾರಿಗಳು ನಮ್ಮನ್ನು ಕೇಳಿದ್ದಾರೆ.
ಕಂಪನಿಯು ಮೂವರು ಪಾಲುದಾರರನ್ನು ಹೊಂದಿದೆ. ಇದರಿಂದಾಗಿ ಯಾಸೀನ್ ಸೇರಿದಂತೆ ಅನೇಕ ಕಡಲ ತೀರದವರಿಗೆ ವೇತನ ನೀಡಲಾಗುವುದಿಲ್ಲ. ನಾವು ರಾಯಭಾರ ಕಚೇರಿಗೆ ಏಜೆಂಟರು ಮತ್ತು ಹಡಗು ಮಾಲೀಕರ ವಿವರಗಳು ಮತ್ತು ಸಂಪರ್ಕ ಸಂಖ್ಯೆಗಳನ್ನು ಸಹ ಒದಗಿಸಿದ್ದೇವೆ. ಹಡಗಿನಲ್ಲೇ ಸಿಕ್ಕಿಹಾಕಿಕೊಂಡಿರುವ ಈತನಿಗೆ ವೇತನವನ್ನು ಪಾವತಿಸಿ ಮರಳಿ ಮನೆಗೆ ಕರೆತರಲು ನಾವು ವಿದೇಶಾಂಗ ಸಚಿವಾಲಯದ ಆರಂಭಿಕ ಹಸ್ತಕ್ಷೇಪಕ್ಕೆ ಒತ್ತಾಯಿಸುತ್ತಿದ್ದೇವೆ ಎಂದು ಅವರು ಹೇಳಿದರು.