ಕಾರವಾರ : ಕುಮಟಾ ತಾಲೂಕಿನ ಗೋಕರ್ಣದ ಪ್ಯಾರಡೈಸ್ ಬೀಚ್ ಬಳಿಯ ಗುಡ್ಡದ ಮೇಲೆ ಟ್ರಕ್ಕಿಂಗ್ಗೆ ತೆರಳಿದ ವಿದೇಶಿ ಮಹಿಳೆ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಪೇನ್ ಮೂಲದ ಮಾತ್ರಾ ಗಾಯಗೊಂಡ ಮಹಿಳೆ. ಗೋಕರ್ಣದ ಓಂ ಬೀಚನಿಂದ 5 ಕಿ.ಮೀ ದೂರದ ಪ್ಯಾರಡೈಸ್ ಬೀಚ್ಗೆ ತೆರಳಿ ಅಲ್ಲಿಯೇ ಟೆಂಟ್ ಹಾಕಿಕೊಂಡಿದ್ದರು. ಆದರೆ, ಮಹಿಳೆ ಬೀಚ್ ಬಳಿಯ ಗುಡ್ಡದ ಮೇಲೆ ಟ್ರಕ್ಕಿಂಗ್ಗೆ ತೆರಳಿದಾಗ ಆಕಸ್ಮಿಕವಾಗಿ ಕಾಲು ಜಾರಿಬಿದ್ದಿದ್ದಾರೆ.
![foreign woman who had gone to trucking in Gokarna](https://etvbharatimages.akamaized.net/etvbharat/prod-images/6212936_kwr.jpg)
ಪರಿಣಾಮ ಎರಡು ಕಾಲು ಮುರಿದು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ಆ್ಯಂಬುಲೆನ್ಸ್ ಮೂಲಕ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.