ETV Bharat / state

ಉತ್ತರ ಕನ್ನಡದಲ್ಲಿ ಮಳೆ ಅಬ್ಬರಕ್ಕೆ 2 ಜಲಾಶಯ ಭರ್ತಿ: ಕೊಡಸಳ್ಳಿ ಡ್ಯಾಂನಿಂದ ನೀರು ಹೊರಕ್ಕೆ - undefined

ಕೊಡಸಳ್ಳಿ ಜಲಾಶಯ ಹಾಗೂ ಕಾರವಾರದ ಕದ್ರಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗಿದ್ದು, ಇಲ್ಲಿನ ಕಾಳಿ ನದಿಗೆ ಕಟ್ಟಲಾದ ಎರಡು ಅಣೆಕಟ್ಟುಗಳು ಭರ್ತಿಯಾಗಿವೆ.

2 ಜಲಾಶಯ ಭರ್ತಿ
author img

By

Published : Jul 11, 2019, 7:39 PM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಎರಡು ಜಲಾಶಯಗಳು ಭರ್ತಿಯಾಗಿದ್ದು, ಕೊಡಸಳ್ಳಿ ಜಲಾಶಯದ ನೀರನ್ನು ಇಂದು ಕದ್ರಾ ಜಲಾಶಯಕ್ಕೆ ಬಿಡಲಾಗಿದೆ.

ಹೌದು, ಯಲ್ಲಾಪುರ ತಾಲೂಕಿನ ಕೊಡಸಳ್ಳಿ ಜಲಾಶಯ ಹಾಗೂ ಕಾರವಾರದ ಕದ್ರಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗಿದ್ದು, ಇಲ್ಲಿನ ಕಾಳಿ ನದಿಗೆ ಕಟ್ಟಲಾದ ಎರಡು ಅಣೆಕಟ್ಟುಗಳು ಭರ್ತಿಯಾಗಿವೆ. ಇಂದು ಕೊಡಸಳ್ಳಿ ಜಲಾಶಯ ಗರಿಷ್ಠ ಮಟ್ಟ 75.50 ಮೀಟರ್ ತಲುಪಿದ ಕಾರಣ ಇಲ್ಲಿನ ಐದು ಗೇಟ್​​ಗಳ ಮೂಲಕ 0.2 ಟಿಎಂಸಿ ನೀರನ್ನು ಕದ್ರಾ ಡ್ಯಾಂಗೆ ಬಿಡಲಾಗಿದೆ.

2 ಜಲಾಶಯ ಭರ್ತಿ

ಇದರಿಂದ ಕದ್ರಾ ಜಲಾಶಯ ಕೂಡ ಭರ್ತಿಯಾಗತೊಡಗಿದ್ದು, ಇದರ ಗರಿಷ್ಠ ಮಟ್ಟವು 34.50 ಮೀ.ಗಳಾಗಿದ್ದು ಈಗಾಗಲೇ 33.30 ಮೀ.ನಷ್ಟು ನೀರು ಸಂಗ್ರಹವಾಗಿದೆ. ಅಲ್ಲದೆ ಮಳೆ ಕೂಡ ನಿರಂತರವಾಗಿ ಸುರಿಯುತ್ತಿರುವ ಕಾರಣ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಈ ಕಾರಣದಿಂದ ಆಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರ ಬಿಡುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯ ಕೆಳ ದಂಡೆಯ ಹಾಗೂ ನದಿಯ ದಂಡೆಯ ಪಾತ್ರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು, ತಮ್ಮ ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರವಾಗಬೇಕು ಎಂದು ಕದ್ರಾ ಅಣೆಕಟ್ಟು ಮತ್ತು ವಿದ್ಯುದಾಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಆದೇಶ ಹೊರಡಿಸಿದ್ದಾರೆ.

ಅಲ್ಲದೆ ಬಹುತೇಕ ಅಣೆಕಟ್ಟು ತುಂಬುವ ಹಂತ ತಲುಪಿದ ಕಾರಣ ಮಳೆ ಮುಂದುವರಿದಲ್ಲಿ ಇಂದು ರಾತ್ರಿ ಇಲ್ಲವೇ ನಾಳೆ ನೀರನ್ನು ಹೊರಕ್ಕೆ ಬಿಡುವ ಸಾಧ್ಯತೆ ಇದೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

Intro:ಉತ್ತರಕನ್ನಡದಲ್ಲಿ ಮಳೆ ಅಬ್ಬರಕ್ಕೆ ೨ ಜಲಾಶಯ ಭರ್ತಿ.. ಕೊಡಸಳ್ಳಿ ಡ್ಯಾಂ ನೀರು ಹೊರಕ್ಕೆ

ಕಾರವಾರ: ಉತ್ತರಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಎರಡು ಜಲಾಶಯಗಳು ಭರ್ತಿಯಾಗಿದ್ದು, ಕೊಡಸಳ್ಳಿ ಜಲಾಶಯದ ನೀರನ್ನು ಇಂದು ಕದ್ರಾ ಜಲಾಶಯಕ್ಕೆ ಬಿಡಲಾಗಿದೆ.
ಹೌದು ಯಲ್ಲಾಪುರ ತಾಲ್ಲೂಕಿನ ಕೊಡಸಳ್ಳಿ ಜಲಾಶಯ ಹಾಗೂ ಕಾರವಾರದ ಕದ್ರಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗಿದ್ದು, ಇಲ್ಲಿನ ಕಾಳಿ ನದಿಗೆ ಕಟ್ಟಲಾದ ಎರಡು ಅಣೆಕಟ್ಟುಗಳು ಭರ್ತಿಯಾಗಿದೆ. ಇಂದು ಕೊಡಸಳ್ಳಿ ಜಲಾಶಯ ಗರಿಷ್ಠ ಮಟ್ಟ ೭೫.೫೦ ಮೀಟರ್ ತಲುಪಿದ ಕಾರಣ ಇಲ್ಲಿನ ಐದು ಗೇಟ್ ಗಳ ಮೂಲಕ ೦.೨ ಟಿಎಂಸಿ ನೀರನ್ನು ಕದ್ರಾ ಡ್ಯಾಂ ಗೆ ಬಿಡಲಾಗಿದೆ.
ಇದರಿಂದ ಕದ್ರಾ ಜಲಾಶಯ ಕೂಡ ಭರ್ತಿಯಾಗತೊಡಗಿದ್ದು, ಗರಿಷ್ಟ ಮಟ್ಟವು 34 . 50 ಮೀ . ಗಳಾಗಿದ್ದು ಈಗಾಗಲೇ 33 . 30 ಮೀ . ನಷ್ಟು ನೀರು ಸಂಗ್ರಹವಾಗಿದೆ. ಅಲ್ಲದೆ ಮಳೆ ಕೂಡ ನಿರಂತರವಾಗಿ ಸುರಿಯುತ್ತಿರುವ ಕಾರಣ ಜಲಾಶಯದ ಒಳ ಹರಿವು ಹೆಚ್ಚಾಗಿದೆ.
ಈ ಕಾರಣದಿಂದ ಆಣೆಕಟ್ಟಿನ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹೋರಬಿಡುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯ ಕೆಳ ದಂಡೆಯ ಹಾಗೂ ನದಿಯ ದಂಡೆಯ ಪಾತ್ರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರ ತಮ್ಮ ಜನ, ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕೆಂದು ಈಗಾಗಲೇ ಕದ್ರಾ ಅಣೆಕಟ್ಟು ಮತ್ತು ವಿದ್ಯುದಾಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಆದೇಶ ಹೊರಡಿಸಿದ್ದಾರೆ.
ಅಲ್ಲದೆ ಬಹುತೇಕ ಅಣೆಕಟ್ಟು ತುಂಬುವ ಹಂತ ತಲುಪಿದ ಕಾರಣ ಮಳೆ ಮುಂದುವರಿದಲ್ಲಿ ಇಂದು ರಾತ್ರಿ ಇಲ್ಲವೇ ನಾಳೆ ನೀರನ್ನು ಹೊರಕ್ಕೆ ಬಿಡುವ ಸಾಧ್ಯತೆ ಇದೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
Body:KConclusion:K

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.