ಉಡುಪಿ : ಕೊಲ್ಲೂರು ಮೂಕಾಂಬಿಕ ದೇಗುಲದ ಆಡಳಿತ ಮಂಡಳಿಯ ವಿರುದ್ಧ 21.80 ಕೋಟಿ ರೂ. ಅವ್ಯವಹಾರ ಆರೋಪ ಕೇಳಿ ಬಂದಿದೆ. ತನಿಖೆಯ ಪಾರದರ್ಶಕತೆಗಾಗಿ ದಾಖಲೆಗಳ ಪರಿಶೀಲನೆ ನೆಪದಲ್ಲಿ ಆರೋಪಗಳಿಗೆ ತೇಪೆ ಹಚ್ಚುವ ಸಾಧ್ಯತೆ ಇದೆ ಎಂದು ಧಾರ್ಮಿಕ ಸಂಸ್ಥೆಗಳ ರಾಜ್ಯ ವಕ್ತಾರ ಗುರು ಪ್ರಸಾದ್ ಗೌಡ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ವ್ಯವಸ್ಥಾಪನಾ ಸಮಿತಿ ಹಾಗೂ ದೇಗುಲದ ಆಡಳಿತ ಮಂಡಳಿಯ ವಿರುದ್ಧ 21.80 ಕೋಟಿ ರೂ. ಅವ್ಯವಹಾರ ಆರೋಪ ಕೇಳಿ ಬಂದಿದೆ. ಆರೋಪದ ಬೆನ್ನಲ್ಲೇ, ರಾಜ್ಯ ಮುಜರಾಯಿ ಇಲಾಖೆ ಈ ಬಗ್ಗೆ ತನಿಖೆ ಮಾಡಲು ಆದೇಶಿಸಿದೆ.
ಕೊಲ್ಲೂರಿನಲ್ಲಿ ಶನಿವಾರ ದಾಖಲೆಗಳು, ಹರಕೆ ರೂಪದಲ್ಲಿ ಬಂದ ಚಿನ್ನಾಭರಣಗಳ ಪರಿಶೀಲನೆ ನಡೆಯಲಿದೆ. ತನಿಖೆ ಸಂದರ್ಭ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘ ನಮ್ಮ ಪ್ರತಿನಿಧಿಗಳಿಗೆ ಮೀಟಿಂಗ್ನಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಿ ಎಂದು ಬೇಡಿಕೆ ಇಟ್ಟಿದೆ. ತನಿಖೆಯ ಪಾರದರ್ಶಕತೆಗಾಗಿ ದಾಖಲೆಗಳ ಪರಿಶೀಲನೆ ನೆಪದಲ್ಲಿ ಆರೋಪಗಳಿಗೆ ತೇಪೆ ಹಚ್ಚುವ ಸಾಧ್ಯತೆ ಇದೆ ಎಂದರು.
ಭ್ರಷ್ಟ ಅಧಿಕಾರಿಗಳಿಗೆ ಅವ್ಯವಹಾರ ಮಾಡಿದವರಿಗೆ ಕ್ಲೀನ್ ಚಿಟ್ ಕೊಡುವ ಸಭೆ ಆಗಬಾರದು ಎಂಬ ಉದ್ದೇಶದಿಂದ ಸಭೆಯಲ್ಲಿ ಪಾಲ್ಗೊಳ್ಳಲು ಮಹಾ ಸಂಘಕ್ಕೆ ಸ್ಥಳೀಯ ಭಕ್ತರಿಗೆ ಹಿಂದೂ ಪರ ಸಂಘಟನೆಗಳಿಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ.. ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಉಡುಪಿಯ ವಿದ್ಯಾರ್ಥಿನಿ ಅನುಷಾ ಆಯ್ಕೆ