ಉಡುಪಿ: ನಗರದ ಹಳೇ ತಾಲೂಕು ಕಚೇರಿ ಸಮೀಪದ ಹೋಟೆಲ್‌ವೊಂದರ ಅಡುಗೆ ಭಟ್ಟರಿಗೆ ಇತ್ತೀಚೆಗೆ ಕೊರೊನಾ ಸೋಂಕು ತಗುಲಿತ್ತು. ಹಾಗಾಗಿ ಹೋಟೆಲ್ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಹೋಟೆಲ್ನೊಳಗೆ ಕ್ವಾರಂಟೈನ್ ಆಗಿರುವ ಸಿಬ್ಬಂದಿ ಮತ್ತು ಮಾಲೀಕರು ಜೊತೆಯಾಗಿ ಕುಳಿತು ಭಜನೆ ಹಾಗೂ ಭಜನಾ ನೃತ್ಯ ಮಾಡುತ್ತಿರುವ ದೃಶ್ಯ ಸದ್ಯ ವೈರಲ್ ಆಗಿದೆ. ಸಿಬ್ಬಂದಿ ದೇವರ ಸ್ಮರಣೆ ಮಾಡುವ ಮೂಲಕ ಸಮಯ ಕಳೆಯುತ್ತಿರುವುದು ಎಲ್ಲರ ಗಮನ ಸೆಳೆದಿದೆ.