ETV Bharat / state

ಉಡುಪಿಯಲ್ಲಿ ಹಿಜಾಬ್ ಪರ ಗೋಡೆ ಬರಹ.. ಕ್ರಮಕ್ಕೆ ಆಗ್ರಹ - Udupi hijab news

ನ್ಯಾಯಾಲಯ ಹಿಜಾಬ್ ವಿವಾದದ ಕುರಿತು ತೀರ್ಪು ನೀಡಿದ ಬೆನ್ನಲ್ಲೇ ಹಿಜಾಬ್​ ಪರವಾಗಿ ಗೋಡೆ ಬರಹ ಕಂಡುಬಂದಿದೆ.

some people were wrote about hijab on wall in Udupi
ಹಿಜಾಬ್ ಪರವಾಗಿ ಗೋಡೆ ಮೇಲೆ ಬರಹ
author img

By

Published : Mar 18, 2022, 7:35 AM IST

ಉಡುಪಿ: ಹಿಜಾಬ್​ ವಿವಾದ ಸಂಬಂಧ ಹೈಕೋರ್ಟ್​ ತೀರ್ಪು ಪ್ರಕಟಿಸಿದ ಬೆನ್ನಲ್ಲೇ, ಪಾಳು ಬಿದ್ದ ಕಟ್ಟಡದ ಗೋಡೆ ಮೇಲೆ ಹಿಜಾಬ್​ ಪರವಾಗಿ ಬರಹಗಳನ್ನು ಬರೆದ ಘಟನೆ ಮಲ್ಪೆಯ ಬೈಲಕೆರೆ ಬಳಿ ನಡೆದಿದೆ.

ಹಿಜಾಬ್ ಪರವಾಗಿ ಗೋಡೆ ಮೇಲೆ ಬರಹ

ನ್ಯಾಯಾಲಯ ಹಿಜಾಬ್ ವಿವಾದದ ಕುರಿತು ತೀರ್ಪು ನೀಡಿದ ಬೆನ್ನಲ್ಲೇ ಈ ಗೋಡೆ ಬರಹ ಪತ್ತೆಯಾಗಿದೆ. ಬೈಲಕೆರೆಯಲ್ಲಿರುವ ಅನಧಿಕೃತ ಕಟ್ಟಡವೊಂದರ ಗೋಡೆಯಲ್ಲಿ ಕಂಡು ಬಂದಿರುವ ಬರಹ ಇದಾಗಿದ್ದು, ಸ್ಥಳದಲ್ಲಿ ನೂರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದರು. ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿರುವವರನ್ನು ಬಂಧಿಸುವಂತೆ ಆಗ್ರಹಿಸಿದರು.

ಇದನ್ನೂ ಓದಿ: ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣಿಟ್ಟ ಪೊಲೀಸರಿಗೆ ನಗದು ಬಹುಮಾನ ಹಸ್ತಾಂತರ

ಸ್ಥಳಕ್ಕೆ ಭೇಟಿ ನೀಡಿದ ವೃತ್ತನಿರೀಕ್ಷಕ ಶರಣಬಸವ ಪಾಟೀಲ ಸ್ಥಳದಿಂದ ವಾಪಸ್ ತೆರಳುವಂತೆ ಹಿಂದೂ ಕಾರ್ಯಕರ್ತರ ಮನವೊಲಿಸಿದರು. ಮಲ್ಪೆ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.