ETV Bharat / state

ಬೆಳಕು ಕಾಣದ ಇವರ ಬದುಕೇ 'ಬುಡ್ಡಿದೀಪ'.. 'ಪವರ್‌'ಫುಲ್‌ ಸಚಿವರ ತವರಿನಲ್ಲೇ ಕತ್ತಲು.. - ಕಟಪಾಡಿ ಮಟ್ಟು ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ

ಈ ಮನೆ ಉಡುಪಿ ನಗರದಿಂದ ಕೇವಲ 15 ಕಿ.ಲೋ ಮೀಟರ್ ದೂರದ ಕಟಪಾಡಿ ಮಟ್ಟು ಎಂಬಲ್ಲಿದೆ. ಮನೆ ಯಜಮಾನ ಚಂದ್ರಶೇಖರ್ ಪರಿಶಿಷ್ಟ ವರ್ಗಕ್ಕೆ ಸೇರಿದವರು. ಈ ಮನೆಯಲ್ಲಿ ಇವರ ಅಣ್ಣ, ಆತನ ಮಕ್ಕಳು, ಹಾಗೂ ಸಹೋದರಿ ವಾಸವಾಗಿದ್ದಾರೆ. ಆದ್ರೆ, ಎಲ್ಲರ ಬದುಕಿನಲ್ಲೂ ಪ್ರವೇಶಿಸಿರುವ ಬೆಳಕು ಇವರ ಜೀವನದಲ್ಲಿ ಮಾತ್ರ ಸುಳಿದಿಲ್ಲ..

power-problem-in-udupi
ಬೆಳಕು ಕಾಣದ ಇವರ ಬದುಕೇ 'ಬುಡ್ಡಿದೀಪ
author img

By

Published : Sep 3, 2021, 11:05 PM IST

ಉಡುಪಿ: ನಾವೆಲ್ಲ ದಿನಪೂರ್ತಿ ಕರೆಂಟ್​ ಬೆಳಕನ್ನೇ ಅವಲಂಬಿಸಿದ್ದೇವೆ. ಅಪ್ಪಿ ತಪ್ಪಿಯೂ ಕರೆಂಟ್​ ಹೋಯ್ತಪ್ಪಾ ಅಂದ್ರೆ, ಅರೆ ಕ್ಷಣ ಹುಚ್ಚರಂತಾಗಿ ಮೆಸ್ಕಾಂಗೆ ಹಿಡಿ ಹಿಡಿ ಶಾಪ ಹಾಕ್ತೀವಿ. ಆದ್ರೆ ಇಲ್ಲೊಂದು ಬಡ ಕುಟುಂಬ, ಐದು ದಶಕದಿಂದಲೂ ವಿದ್ಯುತ್ ಬೆಳಕನ್ನೇ ಕಂಡಿಲ್ಲವಂತೆ. ಹಾಗಾಗಿ, ಚಿಮಿಣಿ ದೀಪವನ್ನೇ ಅವಲಂಬಿಸಿದೆಯಂತೆ..ವಿಪರ್ಯಾಸ ಅಂದ್ರೆ ಈ ಮನೆ ಇರೋದು ರಾಜ್ಯದ ಇಂಧನ ಸಚಿವರ ತವರು ಜಿಲ್ಲೆ ಉಡುಪಿಯಲ್ಲಿ..

ಪವರ್‌'ಫುಲ್‌ ಸಚಿವರ ತವರಿನಲ್ಲೇ ಕತ್ತಲು

ಗಾಢ ಕತ್ತಲು.. ಮಬ್ಬಾಗಿ ಹೊತ್ತಿ ಉರಿವ ಚಿಮಣಿ ವ್ಯವಸ್ಥೆಯ ಅಣಕ.. ಎಲ್ಲರಂತೆ ಒಂದಲ್ಲಾ ಒಂದು ದಿನ ಬೆಳಕನ್ನು ಕಾಣಬಲ್ಲೆನೇ? ಎಂಬ ಆಸೆ ಹೊತ್ತ ಕಣ್ಣು ಹೊತ್ತಿರುವ ಅಸಹಾಯಕ.

ದೀಪದ ಕೆಳಗೆ ಕತ್ತಲು ಅನ್ನೋ ಗಾದೆ ಮಾತನ್ನು ನಾವೆಲ್ಲರೂ ಬಾಲ್ಯದಿಂದಲೇ ಕೇಳಿರುತ್ತೇವೆ. ಅದಕ್ಕೆ ಸೂಕ್ತ ಉದಾಹರಣೆ ಇಂಧನ ಇಲಾಖೆ ಸಚಿವ ಸುನೀಲ್ ಕುಮಾರ್ ತವರು ಕ್ಷೇತ್ರದಲ್ಲಿಯೇ ಇಲ್ಲೊಬ್ಬರು ನನಗೂ ಕರೆಂಟ್​ ಕೊಡಿ ಅಂತಾ ಪರಿ ಪರಿಯಾಗಿ ಮನವಿ ಮಾಡಿ, ಸೋತು ಸುಣ್ಣವಾಗಿದ್ದಾರೆ. ಆದ್ರೆ, ಇವರ ಪುಟ್ಟ ಆಸೆ ಮಾತ್ರ ಇಂದಿಗೂ ನೆರವೇರಿಲ್ಲ.

ಈ ಮನೆ ಉಡುಪಿ ನಗರದಿಂದ ಕೇವಲ 15 ಕಿ.ಲೋ ಮೀಟರ್ ದೂರದ ಕಟಪಾಡಿ ಮಟ್ಟು ಎಂಬಲ್ಲಿದೆ. ಮನೆ ಯಜಮಾನ ಚಂದ್ರಶೇಖರ್ ಪರಿಶಿಷ್ಟ ವರ್ಗಕ್ಕೆ ಸೇರಿದವರು. ಈ ಮನೆಯಲ್ಲಿ ಇವರ ಅಣ್ಣ, ಆತನ ಮಕ್ಕಳು, ಹಾಗೂ ಸಹೋದರಿ ವಾಸವಾಗಿದ್ದಾರೆ. ಆದ್ರೆ, ಎಲ್ಲರ ಬದುಕಿನಲ್ಲೂ ಪ್ರವೇಶಿಸಿರುವ ಬೆಳಕು ಇವರ ಜೀವನದಲ್ಲಿ ಮಾತ್ರ ಸುಳಿದಿಲ್ಲ.

ಒಂದು ಮನೆಗೆ ಕರೆಂಟ್​ ಪಡೆಯಲು ಅದೇನು ದಾಖಲೆಗಳು ಬೇಕೋ, ಅವೆಲ್ಲವನ್ನೂ ಇವರು ಹೊಂದಿದ್ದಾರೆ. ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮನೆ ತೆರಿಗೆ ರಶೀದಿ ಹಾಗೂ ಸಂಬಂಧಪಟ್ಟ ದಾಖಲೆ ಎಲ್ಲವೂ ಇದೆ. ಆದ್ರೆ, ವಿದ್ಯುತ್ ಸಂಪರ್ಕಕ್ಕೆ ಇವರು ಅರ್ಜಿ ಸಲ್ಲಿಸುವಾಗ ಜಾಗದ ವಿಷಯದಲ್ಲಿ ತಗಾದೆ ಎದ್ದಿದ್ದರಿಂದ..ಇಂದಿಗೂ ಇವರ ಬದುಕು ಕತ್ತಲೆಯಲ್ಲಿಯೇ ಕಳೆಯುವಂತಾಗಿದೆ.

ವಿದ್ಯುತ್ ದೀಪಕ್ಕಾಗಿ ಸ್ಥಳೀಯ ಶಾಸಕ ಲಾಲಾಜಿ ಮೆಂಡನ್ ಸಹಿತ ಸಂಬಂಧಪಟ್ಟ ಎಲ್ಲರಿಗೂ ಮನವಿ ಸಲ್ಲಿಸಿದ್ದಾರೆ. ಪ್ರತಿಯಾಗಿ ಅವರಿಂದ ಭರವಸೆಯೇನೋ ಸಿಕ್ಕಿದೆ. ಆದ್ರೆ, ವಿದ್ಯುತ್ ಎಂಬುದು ಇವರ ಬದುಕಿಗೆ ಅರುಂಧತಿ ನಕ್ಷತ್ರವಾಗಿದೆ.

ಓದಿ: ರಾಜ್ಯಕ್ಕೆ ಕೇಂದ್ರದ ನೆರೆ ಹಾನಿ ಅಧ್ಯಯನ ತಂಡ ಭೇಟಿ : ಸೆ.5-6 ರಂದು ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.