ETV Bharat / state

ಉಡುಪಿ: ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ- ನಿವೃತ್ತ ಎಸ್‌ಐ ಪತ್ನಿ ಸಾವು! - ಉಡುಪಿ ಆ್ಯಕ್ಸಿಡೆಂಟ್ ನ್ಯೂಸ್

ಮಂಗಳೂರಿನಿಂದ ಉಡುಪಿಯತ್ತ ತೆರಳುತ್ತಿದ್ದ ಆಲ್ಟೋ ಕಾರೊಂದು ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಬಳಿಕ ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದಾರೆ..

accident in Udupi
ಉಡುಪಿಯಲ್ಲಿ ಆ್ಯಕ್ಸಿಡೆಂಟ್
author img

By

Published : Mar 15, 2022, 8:44 AM IST

ಪಡುಬಿದ್ರಿ: ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಕಾರೊಂದು ಡಿಕ್ಕಿಯಾಗಿ ಬಳಿಕ ಕಾರು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ತೆಂಕ ಎರ್ಮಾಳು ಎಂಬಲ್ಲಿ ಸಂಭವಿಸಿದೆ. ಉಡುಪಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ನಿವೃತ್ತ ಎಸ್‌ಐ ಶ್ರೀನಿವಾಸ್ ಅವರ ಪತ್ನಿ ಉಡುಪಿ ಚಿಟ್ಟಾಡಿ ನಿವಾಸಿ ಭವಾನಿ (58) ಮೃತ ಮಹಿಳೆ.

ಇವರು ಪ್ರಯಾಣಿಸುತ್ತಿದ್ದ ಆಲ್ಟೋ ಕಾರು ಮಂಗಳೂರಿನಿಂದ ಉಡುಪಿಯತ್ತ ಬರುತ್ತಿದ್ದಾಗ ತೆಂಕ ಎರ್ಮಾಳಿನಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದರಿಂದ ಈ ದುರ್ಘಟನೆ ನಡೆದಿದೆ. ಊಟಕ್ಕಾಗಿ ಲಾರಿ ನಿಲ್ಲಿಸುವ ವೇಳೆ ನಿರ್ಲಕ್ಷ್ಯದಿಂದ ನಿಲ್ಲಿಸಿದ್ದ ಕಾರಣದಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಉಡುಪಿಯಲ್ಲಿ ಆ್ಯಕ್ಸಿಡೆಂಟ್

ಇದನ್ನೂ ಓದಿ: ಲಕ್ಷ್ಮೇಶ್ವರದಲ್ಲಿ ಸಾರಿಗೆ ಬಸ್​ ವ್ಹೀಲ್ ಜೇಂಟ್ ಕಟ್​.. ಬಸ್ ಪಲ್ಟಿಯಾಗಿ 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಲಾರಿಯ ಹಿಂಬದಿ ಬಲಭಾಗಕ್ಕೆ ಕಾರಿನ ಎಡಬದಿಯು ಸವರಿ ಮುಂದಕ್ಕೆ ಹೋಗಿ ಬಳಿಕ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ಭವಾನಿ ಅವರ ತಲೆಗೆ ತೀವ್ರ ಗಾಯಗಳಾದ ಕಾರಣ ಸಾರ್ವಜನಿಕರ ಸಹಕಾರದಿಂದ ಕಾರಿನಿಂದ ಹೊರ ತೆಗೆದು ಉಡುಪಿ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. ಕಾರು ಚಲಾಯಿಸುತ್ತಿದ್ದ ಅವರ ಮಗ ತಾರಾನಾಥ್ (35) ಅವರಿಗೂ ಗಾಯಗಳಾಗಿವೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.