ETV Bharat / state

ಡ್ರಗ್ಸ್ ವಿಚಾರದಲ್ಲಿ ಅವರಿವರು ಅಂತಿಲ್ಲ, ಯಾರೂ ಸೇವಿಸಬಾರದು: ಸಚಿವ ಸುನಿಲ್ ಕುಮಾರ್ - ಡ್ರಗ್ಸ್ ದಂಧೆ

ಡ್ರಗ್ಸ್ ದಂಧೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಶಿವರಾಜ್ ತಂಗಡಗಿ ನೀಡಿದ್ದ ಹೇಳಿಕೆಗೆ ಸಚಿವ ಸುನಿಲ್ ಕುಮಾರ್ ಟಾಂಗ್ ನೀಡಿದ್ದಾರೆ.

ಸಚಿವ ಸುನಿಲ್ ಕುಮಾರ್
ಸಚಿವ ಸುನಿಲ್ ಕುಮಾರ್
author img

By

Published : Sep 10, 2021, 9:02 AM IST

ಉಡುಪಿ: ಡ್ರಗ್ಸ್ ದಂಧೆ ವಿಚಾರದಲ್ಲಿ ನಮ್ಮ ಮಕ್ಕಳು, ನಿಮ್ಮ ಮಕ್ಕಳು ಎಂಬುದಿಲ್ಲ. ಯಾರ ಮಕ್ಕಳು ಕೂಡ ಮಾದಕ ವಸ್ತು ಸೇವಿಸಬಾರದು ಎಂದು ಕಾಂಗ್ರೆಸ್ ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆಗೆ ಸಚಿವ ಸುನಿಲ್ ಕುಮಾರ್ ತಿರುಗೇಟು ಕೊಟ್ಟಿದ್ದಾರೆ.

ಡ್ರಗ್ಸ್ ವಿಚಾರದಲ್ಲಿ ಅವರಿವರು ಅಂತಿಲ್ಲ, ಯಾರೂ ಸೇವಿಸಬಾರದು: ಸಚಿವ ಸುನಿಲ್ ಕುಮಾರ್

ಕಾರ್ಕಳದಲ್ಲಿ ಮಾತನಾಡಿದ ಅವರು, ಡ್ರಗ್ಸ್​ ದಂಧೆ ವಿಚಾರದಲ್ಲಿ ಬಸವರಾಜ ಬೊಮ್ಮಾಯಿ ಅವರು ತೆಗೆದುಕೊಂಡ ನಿರ್ಧಾರದಿಂದಲೇ ಒಂದೊಂದಾಗಿ ಪ್ರಕರಣಗಳು ಹೊರಬರುತ್ತಿವೆ. ಇದರಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುವುದು ಸರಿಯಲ್ಲ. ಡ್ರಗ್ಸ್​ ಪರಂಪರೆ ಒಂದೆರಡು ವರ್ಷದಲ್ಲ. ಯಾರ ಮೇಲೆ ಆರೋಪ ಕೇಳಿ ಬಂದರೂ, ಅವರು ತನಿಖೆ ಎದುರಿಸಲೇಬೇಕು. ಭವಿಷ್ಯದ ದೃಷ್ಟಿಯಿಂದ ಕರ್ನಾಟದ ಡ್ರಗ್ಸ್ ಮುಕ್ತ ಆಗಬೇಕು. ಸರ್ಕಾರದ ಕಠಿಣ ನಿಯಮಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ಇತ್ತೀಚೆಗಷ್ಟೇ ಶಿವರಾಜ ತಂಗಡಗಿ, ಬಿಜೆಪಿ ಸಚಿವರು-ಶಾಸಕರು ಡ್ರಗ್ಸ್ ತೆಗೆದುಕೊಳ್ಳುತ್ತಾರೋ, ಇಲ್ಲವೋ ಅನ್ನೋದನ್ನು ತಪಾಸಣೆ ಮಾಡಬೇಕು ಎಂದು ಹೇಳಿದ್ದರು.

ಗಣೇಶೋತ್ಸವ ಆಚರಣೆಗೆ ಸ್ವ-ನಿಯಂತ್ರಣ ಅಗತ್ಯ

ಕೊರೊನಾ ಭೀತಿ ನಡುವೆಯೂ ಸರ್ಕಾರ, ಹಲವು ಕಠಿಣ ನಿಯಮಗಳನ್ನು ವಿಧಿಸಿ ಗಣೇಶೋತ್ಸವಕ್ಕೆ ಅನುಮತಿ ಕೊಟ್ಟಿದೆ. ಗಣೇಶ ಉತ್ಸವ ಆಚರಣೆಗೆ ಅಡ್ಡ ಬಂದರೆ ಶ್ರೀರಾಮಸೇನೆ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿತ್ತು.

ಇದನ್ನೂ ಓದಿ: ಮಾಜಿ ಸಚಿವ ಆರ್ ​​ಬಿ ತಿಮ್ಮಾಪೂರ ವಿರುದ್ಧ ಸಚಿವ ಕಾರಜೋಳ ವಾಗ್ದಾಳಿ

ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲು ನಮಗೆ ಅಡ್ಡಿಯಿಲ್ಲ. ಆದರೆ, ಕೊರೋನಾ ಸಂದರ್ಭದಲ್ಲಿ ಎಲ್ಲರಿಗೂ ಸಾಮಾಜಿಕ ಜವಾಬ್ದಾರಿಯಿದೆ. ಸ್ವಯಂ ನಿಯಂತ್ರಣ ಹಾಕಿಕೊಳ್ಳಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಹಬ್ಬ ಆಚರಿಸುವವರು ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.