ETV Bharat / state

ನಮ್ಮನ್ನು ಊರಿಗೆ ಕಳುಹಿಸಿ ಕೊಡಿ, ಇಲ್ಲವೇ ವಿಷ ಕೊಡಿ: ಮೀನುಗಾರಿಕಾ ಕಾರ್ಮಿಕರ ನೋವಿನ ನುಡಿ - lockdown update

ಲಾಕ್​​ಡೌನ್​​ನಿಂದಾಗಿ ಇಲ್ಲೇ ಉಳಿದುಕೊಂಡಿರುವ ಮೀನುಗಾರಿಕಾ ಕಾರ್ಮಿಕರು, ನಮ್ಮನ್ನು ಊರಿಗೆ ಕಳುಹಿಸಿಕೊಡಿ. ಇಲ್ಲವಾದರೆ ವಿಷ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

migrates
ಅಂತಾರಾಜ್ಯ ಕಾರ್ಮಿಕರ ಆಗ್ರಹ
author img

By

Published : May 11, 2020, 5:38 PM IST

ಉಡುಪಿ: ಮಲ್ಪೆಯಲ್ಲಿ ಮೀನುಗಾರಿಕೆ ಸ್ಥಗಿತಗೊಂಡಿದೆ. ನಾವು ಇಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ. ಕೆಲಸವೂ ಇಲ್ಲ ಕೈಯಲ್ಲಿ ಕಾಸೂ ಇಲ್ಲ. ಎಷ್ಟು ದಿನ ಇಲ್ಲಿ ಇರಲು ಸಾಧ್ಯ? ದಯವಿಟ್ಟು ನಮ್ಮ ಊರಿಗೆ ಹೋಗಲು ರೈಲಿನ ವ್ಯವಸ್ಥೆ ಮಾಡಿಕೊಡಿ. ನಾವು ನಮ್ಮ ತಂದೆ-ತಾಯಿಯರನ್ನು ನೋಡಿ ಐದಾರು ತಿಂಗಳಾಯಿತು ಎಂದು ಜಾರ್ಖಂಡ್, ಒಡಿಶಾ ಹಾಗು ಬಂಗಾಳದ ಕಾರ್ಮಿಕರು ರಾಜ್ಯ ಸರ್ಕಾರದ ಮುಂದೆ ಅಳಲು ತೋಡಿಕೊಂಡರು.

ಅಂತಾರಾಜ್ಯದ ಕಾರ್ಮಿಕರು ಮಲ್ಪೆಯ ಮೀನುಗಾರ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. 500 ರಿಂದ 600 ಕಾರ್ಮಿಕರು ಮಲ್ಪೆ ಪೊಲೀಸ್ ಠಾಣೆಗೆ ಬಂದು ತಮ್ಮ ಕಷ್ಟಗಳನ್ನು ಹೇಳಿಕೊಂಡರು.

ಅಳಲು ತೋಡಿಕೊಂಡ ಕಾರ್ಮಿಕರು

ವಾರದ ಹಿಂದೆ ಈ ಕಾರ್ಮಿಕರಿಗೆ ಊಟ ನೀಡಲಾಗುತ್ತಿತ್ತು. ಈಗ ಅದನ್ನು ನಿಲ್ಲಿಸಲಾಗಿದೆ. ಬೋಟುಗಳಲ್ಲಿ ಮಲಗಿ ದಿನ ಕಳೆಯುತ್ತಿದ್ದೇವೆ. ಕಾರ್ಮಿಕರ ಸಮಸ್ಯೆಗೆ ಬೋಟ್ ಮಾಲೀಕರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.