ಉಡುಪಿ: ಮನೆ ಸಾಲ ಕಟ್ಟಲಾಗದೆ ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಣಿಪಾಲದಲ್ಲಿ ಟ್ಯಾಕ್ಸಿ ಚಾಲಕನಾಗಿರುವ ಕುಂದಾಪುರ ಮೂಲದ ರಾಘವೇಂದ್ರ ಮೃತ ದುರ್ದೈವಿ. ಬ್ಯಾಂಕ್ನಲ್ಲಿ ಸಾಲ ಮಾಡಿ ಮಣಿಪಾಲದ ಸುವಿಧ ಅಪಾರ್ಟ್ಮೆಂಟ್ನಲ್ಲಿ ಮನೆಯನ್ನು ಖರೀದಿಸಿದ್ದ ರಾಘವೇಂದ್ರನಿಗೆ ಲಾಕ್ಡೌನ್ ಹಿನ್ನಲೆಯಲ್ಲಿ ದುಡಿಮೆಯಿಲ್ಲದೆ ಬ್ಯಾಂಕ್ ಸಾಲ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ ಬ್ಯಾಂಕ್ ಸಾಲ ಕಟ್ಟಲಾಗದೆ ಖಿನ್ನತೆಗೊಳಪಟ್ಟಿದ್ದ ರಾಘವೇಂದ್ರ ಅಪಾರ್ಟ್ಮೆಂಟಿನ ಟೆರೆಸ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.