ಉಡುಪಿ: ಕೃಷ್ಣ ನಗರಿಯಲ್ಲಿ ಇಂದು ಸಾಂಪ್ರದಾಯಿಕ ಕೃಷ್ಣ ಜನ್ಮಾಷ್ಟಮಿ ನಡೆಯಲಿದೆ. ಹೌದು, ಇಂದು ಹಾಗೂ ನಾಳೆ ಸರಳವಾಗಿ ಅಷ್ಟಮಿ ಆಚರಿಸಲು ಪರ್ಯಾಯ ಶ್ರೀಗಳು ನಿರ್ಧಾರ ಮಾಡಿದ್ದಾರೆ.
ಇಂದು ರಾತ್ರಿ ಪರ್ಯಾಯ ಯತಿ ಈಶಪ್ರಿಯ ತೀರ್ಥ ಸ್ವಾಮೀಜಿಗಳಿಂದ ಅರ್ಘ್ಯ ಪ್ರದಾನ ನಡೆಯಲಿದ್ದು, ನಾಳೆ ರಥ ಬೀದಿಯಲ್ಲಿ ವಿಟ್ಲಪಿಂಡಿ ಆಚರಣೆ ನಡೆಯಲಿದೆ. ಮಠದ ಸಿಬ್ಬಂದಿ ಹಾಗೂ ಗೊಲ್ಲರಿಂದ ಮಡಿಕೆ ಒಡೆದು ವಿಟ್ಲ ಪಿಂಡಿ ಆಚರಣೆ ನಡೆಯಲಿದೆ. ರಥ ಬೀದಿ ಸುತ್ತಲೂ ಮಡಿಕೆ ಒಡೆದು ರಥೋತ್ಸವ ಕೂಡ ನಡೆಯಲಿದೆ.
ಈ ಬಾರಿ ಅಷ್ಟಮಿಯಲ್ಲಿ ಯಾವುದೇ ವೇಷಗಳಿಗೆ ಅವಕಾಶವಿಲ್ಲ. ಸಾರ್ವಜನಿಕರು ರಥ ಬೀದಿಗೆ ಆಗಮಿಸಲು ಜಿಲ್ಲಾಡಳಿತದಿಂದ ನಿರ್ಬಂಧ ಹೇರಲಾಗಿದೆ. ಮಠದವರೇ ಮಡಿಕೆ ಒಡೆದು ಸಾಂಪ್ರದಾಯಿಕವಾಗಿ ವಿಟ್ಲಪಿಂಡಿ ಆಚರಿಸುಲಿದ್ದು, ಅದ್ಧೂರಿಯಾಗಿ ಅಷ್ಟಮಿ ಆಚರಿಸದಿರಲು ನಿರ್ಧರಿಸಲಾಗಿದೆ ಎಂದು ಅದಮಾರು ವಿಶ್ವಪ್ರಿಯ ತೀರ್ಥ ಶ್ರೀ ಪಾದರು ತಿಳಿಸಿದರು.