ETV Bharat / state

ಕೊಲ್ಲೂರು ರಥೋತ್ಸವ ವಿಚಾರ: ಗೊಂದಲದ ನಡುವೆ ನಡೆದ ಚಿನ್ನದ ರಥೋತ್ಸವ - ಉಡುಪಿ ಇತ್ತೀಚಿನ ಸುದ್ದಿ

ಉಡುಪಿ ಜಿಲ್ಲೆಯ ಕೊಲ್ಲೂರು ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ನಡೆದ ರಥೋತ್ಸವದ ವೇಳೆ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು.

ಕೊಲ್ಲೂರು ರಥೋತ್ಸವ ವಿಚಾರ
ಕೊಲ್ಲೂರು ರಥೋತ್ಸವ ವಿಚಾರ
author img

By

Published : Oct 25, 2020, 12:22 PM IST

Updated : Oct 25, 2020, 12:54 PM IST

ಉಡುಪಿ: ಕೊಲ್ಲೂರು ದೇವಸ್ಥಾನದಲ್ಲಿ ನವರಾತ್ರಿ ರಥೋತ್ಸವ ವಿಚಾರದಲ್ಲಿ ಕೆಲಕಾಲ ಗೊಂದಲ ಉಂಟಾದ ಘಟನೆ ನಡೆದಿದೆ.

ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ಮಹಾನವಮಿ ಪ್ರಯುಕ್ತ ಶನಿವಾರ ರಾತ್ರಿ ನಡೆದ ಉತ್ಸವದಲ್ಲಿ ಪುಷ್ಪರಥದ ಬದಲು ಚಿನ್ನದ ರಥೋತ್ಸವ ಜರುಗಿತು. ಸಂಪ್ರದಾಯದಂತೆ ಉತ್ಸವಕ್ಕೆ ಪುಷ್ಪರಥ ಸಜ್ಜಾಗಿತ್ತು. ಶಾಸಕ ಸುಕುಮಾರ ಶೆಟ್ಟಿ ಆದೇಶದಂತೆ ನಡೆದ ಚಿನ್ನದ ರಥೋತ್ಸವದಲ್ಲಿ ಸಂಪ್ರದಾಯ ಉಲ್ಲಂಘನೆ ಬಗ್ಗೆ ಕೆಲವರಿಗೆ ಬೇಸರ ವ್ಯಕ್ತವಾಗಿತ್ತು.

ಗೊಂದಲದ ನಡುವೆ ನಡೆದ ಚಿನ್ನದ ರಥೋತ್ಸವ

ಸುಕುಮಾರ ಶೆಟ್ಟಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ಕಾಲದಲ್ಲಿ ಚಿನ್ನದ ರಥ ದೇವಾಲಯಕ್ಕೆ ಅರ್ಪಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಚಿನ್ನದ ರಥೋತ್ಸವ ನಡೆಸಲು ಶಾಸಕರ ಸೂಚನೆ ಇತ್ತು. ಸಂಪ್ರದಾಯ ಬದಲಾಯಿಸಿದ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಿದ್ದರು. ಕೊನೆಗೂ ಗೊಂದಲದ ನಡುವೆಯೂ ಸುಸೂತ್ರವಾಗಿ ಚಿನ್ನದ ರಥೋತ್ಸವ ನಡೆಯಿತು.

Last Updated : Oct 25, 2020, 12:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.