ETV Bharat / state

ಸಮುದ್ರದ ತೆರೆಗೆ ಕೊಚ್ಚಿ ಹೋದ ಲೈಟ್ ಹೌಸ್​ನ ಮೆಟ್ಟಿಲುಗಳು - Kapu Beach Lighthouse

ಕಾಪು ಬೀಚ್​ ಲೈಟ್ ಹೌಸ್​ಗೆ ಹೋಗೋ ಆರಂಭದಲ್ಲಿ ನಿರ್ಮಿಸಿದ್ದ ಮೆಟ್ಟಿಲುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಕೊಚ್ಚಿ ಹೋದ ಕಲ್ಲಿನಲ್ಲಿಯೇ ಪ್ರವಾಸಿಗರು ತೆರಳೋ ದೃಶ್ಯ ಅಪಾಯಕ್ಕೆ ಆಹ್ವಾನ‌ ನೀಡುವಂತಿದೆ.

Lighthouse steps are damage
ಸಮುದ್ರದ ತೆರೆಗೆ ಕೊಚ್ಚಿ ಹೋದ ಲೈಟ್ ಹೌಸ್​ನ ಮೆಟ್ಟಿಲುಗಳು..
author img

By

Published : Nov 10, 2020, 7:22 AM IST

ಉಡುಪಿ: ರಾಜ್ಯ ಪ್ರವಾಸೋದ್ಯಮದ ಫೇಮಸ್ ಬೀಚ್ ಲೈಟ್ ಹೌಸ್. ಆದ್ರೆ ಲೈಟ್ ಹೌಸ್​ಗೆ ಹೋಗಬೇಕಾದರೆ ಜೀವ ಕೈಯಲ್ಲಿ ಹಿಡ್ಕೊಂಡು ಹೋಗಬೇಕು. ಆಯತಪ್ಪಿ ಬಿದ್ರೆ ಅಪಾಯ ಗ್ಯಾರಂಟಿ.. ಇದು ಕಾಪು ಬೀಚ್ ಲೈಟ್ ಹೌಸ್​ನ ಅ​ವ್ಯವಸ್ಥೆ.

ಸಮುದ್ರದ ತೆರೆಗೆ ಕೊಚ್ಚಿ ಹೋದ ಲೈಟ್ ಹೌಸ್​ನ ಮೆಟ್ಟಿಲುಗಳು..

ಕರಾವಳಿಯ ಬೀಚ್ ಅಂದ್ರೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತುಂಬಾ ಫೇಮಸ್. ಉಡುಪಿ ಜಿಲ್ಲೆಯ ಕಾಪು ಬೀಚ್​ನಲ್ಲಿರುವ ಲೈಟ್ ಹೌಸ್​ಗೆ ಶತಮಾನಗಳ ಇತಿಹಾಸವಿದೆ. ಈ ಬೀಚ್ ಲೈಟ್ ಹೌಸ್​ಗೆ ದಿನಂಪ್ರತಿ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಬೀಚ್ ನೀರಿನಲ್ಲಿ ಆಟವಾಡುತ್ತ ಲೈಟ್ ಹೌಸ್​ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳೋದು ಮಾಮೂಲಿ. ಆದ್ರೆ ಲೈಟ್ ಹೌಸ್​ಗೆ ಹೋಗೋ ದಾರಿ ಸಂಪೂರ್ಣವಾಗಿ ಹದಗೆಟ್ಟಿದೆ. ಆರಂಭದಲ್ಲಿ ಸರ್ಕಸ್ ಮಾಡ್ತಾ ಮೇಲೆ ಹತ್ತಿದರೆ ಲೈಟ್ ಹೌಸ್​ಗೆ ಹೋಗಬಹುದು. ಲೈಟ್ ಹೌಸ್​ಗೆ ಹೋಗೋ ಆರಂಭದಲ್ಲಿ ನಿರ್ಮಿಸಿದ್ದ ಮೆಟ್ಟಿಲುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಕೊಚ್ಚಿ ಹೋದ ಕಲ್ಲಿನಲ್ಲೇ ಪ್ರವಾಸಿಗರು ತೆರಳೋ ದೃಶ್ಯ ಅಪಾಯಕ್ಕೆ ಆಹ್ವಾನ‌ ನೀಡುವಂತಿದೆ.

ಕಾಪು ಬೀಚ್​ನಲ್ಲಿ ಬಹಳಷ್ಟು ಸಿನೆಮಾಗಳು ಚಿತ್ರೀಕರಣಗೊಂಡಿವೆ. ಬಂಡೆ ಕಲ್ಲುಗಳ ಮೇಲಿನ‌ ಖುಷಿ ಅನುಭವಿಸೋಕೆ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸ್ತಾರೆ. ಇಲ್ಲಿನ ಲೈಟ್ ಹೌಸ್ ಪ್ರಮುಖ ಆಕರ್ಷಣೆಯ ಕೇಂದ್ರ. ಕಳೆದ ಮಳೆಗಾಲದಲ್ಲಿ ಸಮುದ್ರದ ತೆರೆಗೆ ಲೈಟ್ ಹೌಸ್ ನ ಮೆಟ್ಟಿಲುಗಳು ಕೊಚ್ಚಿ ಹೋಗಿದ್ದು ಲೈಟ್ ಹೌಸ್​​​ಗೆ ತೆರಳೋ ಪ್ರವಾಸಿಗರು ತೆವಳಿಕೊಂಡು ಕಲ್ಲಿನ‌ ಮೇಲೆ ಸಾಗಬೇಕಿದೆ. ಕರಾವಳಿಯ ಪ್ರವಾಸೋದ್ಯಮ ಇಲಾಖೆಗೆ ಈ ವಿಷಯ ಗಮನಕ್ಕೆ ಬಂದರೂ ಕೂಡಾ ದುರಸ್ತಿಗೆ ಮುಂದಾಗದೇ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎನ್ನಲಾಗ್ತಿದೆ.

ಮಳೆಗಾಲ ಕಳೆದು ಬೇಸಿಗೆ ಕಾಲಿಟ್ಟಿದೆ. ದಿನ ಕಳೆದಂತೆ ಕಾಪು ಲೈಟ್ ಹೌಸ್​ಗೆ ಬರೋ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಪ್ರವಾಸೋದ್ಯಮ ಮತ್ತು ಜಿಲ್ಲಾಡಳಿತ ಈ ಬಗ್ಗೆ ತುರ್ತು ಗಮನಹರಿಸಿ ದುರಸ್ತಿಗೆ ಮುಂದಾಗಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.