ETV Bharat / state

ಕಾರ್ಕಳದಲ್ಲಿ ಅವೈಜ್ಞಾನಿಕವಾಗಿ ನಡೀತಿದೆಯಂತೆ ಒಳಚರಂಡಿ ನಿರ್ಮಾಣ ಕಾಮಗಾರಿ: ಸಾರ್ವಜನಿಕರ ಆಕ್ರೋಶ - Udupi

ಕಾರ್ಕಳದಲ್ಲಿ ಒಳಚರಂಡಿ ‌ಕಾಮಗಾರಿ ಸಂಪೂರ್ಣ ‌ಅವೈಜ್ಞಾನಿಕವಾಗಿದ್ದು, ನಗರದ ಕೆಲ ಬಾವಿಗಳಿಗೆ ತ್ಯಾಜ್ಯ ನೀರು ಸೇರಿ ಕಲುಷಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಒಳಚರಂಡಿ ಯೋಜನೆ ಭವಿಷ್ಯದ ಒತ್ತಡಕ್ಕೆ ಪೂರಕವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಾರ್ಕಳದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಅವ್ಯವಸ್ಥೆ

author img

By

Published : May 27, 2020, 10:24 AM IST

ಉಡುಪಿ(ಕಾರ್ಕಳ): ನೂತನ ಒಳಚರಂಡಿ ‌ಕಾಮಗಾರಿ ಸಂಪೂರ್ಣ ‌ಅವೈಜ್ಞಾನಿಕವಾಗಿರುವ ಪರಿಣಾಮ ಚರಂಡಿ ನೀರು ನಗರದ‌ ಬಾವಿಗಳಿಗೆ ಸೇರಿ‌ ಹತ್ತಕ್ಕೂ ‌ಅಧಿಕ ಕುಡಿಯುವ ನೀರಿನ ಬಾವಿಗಳು ಕಲುಷಿತಗೊಂಡಿವೆ. ಅದಲ್ಲದೆ 13 ಕೋಟಿ ವೆಚ್ಚದ ನೂತನ ಒಳಚರಂಡಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು‌, ಅತ್ಯಾಧುನಿಕ ತಂತ್ರಜ್ಞಾನ ಬಳಸದೆ ಸಾಂಪ್ರದಾಯಿಕ ಶೈಲಿಯಲ್ಲಿ ಕಾಮಗಾರಿ ನಡೆಸುತ್ತಿರುವ ಕಾರಣ ಒಳಚರಂಡಿ ಯೋಜನೆ ಭವಿಷ್ಯದ ಒತ್ತಡಕ್ಕೆ ಪೂರಕವಾಗಿಲ್ಲ ಎಂಬುದು ಸ್ಥಳೀಯರ ಗಂಭೀರ ಅರೋಪವಾಗಿದೆ.

ನೀರು ಸರಬರಾಜು ಮತ್ತು ಒಳಚರಂಡಿ ನಿರ್ಮೂಲನಾ ಮಂಡಳಿಯಿಂದ ನಗರಕ್ಕೆ ಮಂಜೂರಾಗಿದ್ದ 13 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಒಳಚರಂಡಿ ನೂತನ ಕಾಮಗಾರಿ ನಾಗರಿಕರಿಗೆ ಹಲವು ಸಂಕಷ್ಟಗಳನ್ನು ತಂದೊಡ್ಡಿದೆ. ಈ ಅಸಮರ್ಪಕ ಒಳಚರಂಡಿ ಕಾಮಗಾರಿಯಿಂದ ರಸ್ತೆ ಭಾಗದ ಎಲ್ಲಾ ಕಡೆ ಗುಂಡಿಗಳನ್ನು ತೋಡುವ ಮೂಲಕ ನಗರದ ಅಂದವನ್ನೇ ಕೆಡಿಸಲಾಗಿದೆ. ಆ ಮೂಲಕ ಸ್ವರ್ಣ‌ ಕಾರ್ಕಳ ಸ್ವಚ್ಛ ಕಾರ್ಕಳದ ಪರಿಕಲ್ಪನೆ‌ ನುಚ್ಚು ‌ನೂರಾಗಿದೆ‌.

ಕಾರ್ಕಳದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಅವ್ಯವಸ್ಥೆ

ಈ ಬಾರಿ ಮಳೆಗಾಲದ ಸಮಯಕ್ಕೆ ಸರಿಯಾಗಿ ರಸ್ತೆ ಅಗೆದು ಕಾಮಗಾರಿ ಪ್ರಾರಂಭಿಸಿದ್ದು, ಮನ ಬಂದಂತೆ ರಸ್ತೆ ಬದಿ ಅನೇಕ ಗುಂಡಿಗಳನ್ನು ತೋಡಿರುವುದರಿಂದ ಜೀವ ಹಾನಿಯಾಗುವ ಸಾಧ್ಯತೆಗಳಿವೆ. ಗುತ್ತಿಗೆದಾರರ ಅಸಡ್ಡೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅವ್ಯವಸ್ಥೆಗೆ ಕಾರಣವೆಂದು ನಗರದ ಜನತೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಬಾವಿ ನೀರು ಉಪಯೋಗಿಸುವಂತಿಲ್ಲ

ನಗರದ ರಥ ಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನ ಪರಿಸರ, ಆನೆಕೆರೆ, ಹಿರಿಯಂಗಡಿ, ಅನಂತಶಯನ, ಮಾರ್ಕೆಟ್ ರಸ್ತೆ, ಮೂರು ಮಾರ್ಗ, ಬಂಡಿಮಠ ಪರಿಸರದಲ್ಲಿನ ಒಳಚರಂಡಿಯ ಸೋರಿಕೆಯಿಂದಾಗಿ ಕಳೆದ ಹಲವು ವರ್ಷಗಳಿಂದಲೇ ಈ ಪ್ರದೇಶದ ಬಾವಿ ನೀರನ್ನು ಉಪಯೋಗಿಸುವಂತಿರಲಿಲ್ಲ. ಅದೆಷ್ಟೋ ಬಾರಿ ರಾಸಾಯನಿಕ ಬಳಸಿ ಬಾವಿ ನೀರನ್ನು ಶುಚಿಗೊಳಿಸಿದರೂ ಮತ್ತೆ ಮತ್ತೆ ಕೊಳಚೆ ನೀರು ನುಗ್ಗುವ ಮೂಲಕ ನೂರಾರು ಬಾವಿಗಳು ಉಪಯೋಗಕ್ಕಿಲ್ಲದಂತಾಗಿವೆ.

ಮ್ಯಾನ್‍ಹೋಲ್‍ಗಳ ರಚನೆ ಸಂದರ್ಭ ಅವೈಜ್ಞಾನಿಕ ಕ್ರಮ ಅನುಸರಿಸಲಾಗಿದ್ದು, ವಿನ್ಯಾಸ ಹಾಗೂ ಗಾತ್ರದಲ್ಲಿ ಒಳಚರಂಡಿಯ ಕೊಳವೆಗಳಿಗೂ ಮ್ಯಾನ್‍ಹೋಲ್‍ನ ಸಂಪರ್ಕ ಕೊಳವೆಗೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ಇದು ನೆಪ ಮಾತ್ರಕ್ಕೆ ಕಾಮಗಾರಿ ನಡೆಸಿದಂತಾಗಲಿದ್ದು, ನಗರದ ಬಾವಿಗಳಿಗೆ ಕೊಳಚೆ ನೀರು ನುಗ್ಗುವುದು ಮುಂದೆಯೂ ಮುಂದುವರೆಯುವ ಸಾಧ್ಯತೆಯಿದೆ.

ಹೊಸದೇನಿಲ್ಲ, 1994ರ ಯೋಜನೆಯ ಕಾಪಿ ಪೇಸ್ಟ್!
1994ರಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಅದೇ ಒಳಚರಂಡಿ ಯೋಜನೆಯ ಮೇಲೆಯೇ ಹೊಸ ಯೋಜನೆಯನ್ನು ‘ಕಾಪಿ ಪೇಸ್ಟ್’ (ನಕಲು) ಮಾಡಲಾಗಿದ್ದು, ಆಧುನಿಕ ತಂತ್ರಜ್ಞಾನದ ಬಳಕೆ, ಹೊಸ ಯೋಜನೆಯಲ್ಲಿ ಕಾಣಿಸುತ್ತಿಲ್ಲ. ಹಳೆಯ ಒಳಚರಂಡಿಯಲ್ಲಿ ತ್ಯಾಜ್ಯನೀರು ಒಂದೆಡೆಯಿಂದ ಹರಿದು ಬರುತ್ತಿರುವಂತೆಯೇ ಹೊಸ ಕಾಮಗಾರಿಯನ್ನು ಅದರ ಮೇಲೆಯೇ ನಡೆಸಲಾಗುತ್ತಿದೆ. ಇದರಿಂದಾಗಿ ಹೊಸ ಕಾಮಗಾರಿಯ ಸಿಮೆಂಟ್ ಕ್ಯೂರಿಂಗ್ ಸರಿಯಾಗಿ ಆಗುತ್ತಿಲ್ಲವೆಂಬುದು ನೇರವಾಗಿ ಕಂಡು ಬರುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.