ಉಡುಪಿ: ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಕಾಲದಲ್ಲಿ ಜಗತ್ತಿಗೆ ಉಂಟಾಗಬಹುದಾದ ಅಪಾಯವನ್ನು ತಪ್ಪಿಸಲು ಉಡುಪಿಯಲ್ಲಿ ಅಘೋರಿಗಳು ಅಪರೂಪದ ಯಾಗ ನಡೆಸುತ್ತಿದ್ದಾರೆ. ಸಂಚಾರದಲ್ಲಿದ್ದ ಅಘೋರಿಗಳು ಇದ್ದಲ್ಲಿಯೇ ಯಾಗ ನಡೆಸಬೇಕು ಎಂಬ ಸಂಕಲ್ಪ ಕೈಗೊಂಡ ಹಿನ್ನೆಲೆಯಲ್ಲಿ ಸದ್ಯ ಜಿಲ್ಲೆಯ ಸಮುದ್ರ ತಟದಲ್ಲಿ ಈ ಮಹಾಯಾಗ ನಡೆಯುತ್ತಿದೆ.
ಸಮಸ್ತ ಲೋಕಕ್ಕೆ ಕಲ್ಯಾಣವಾಗಿಲಿ ಪ್ರಾರ್ಥಿಸಿ ಉಡುಪಿಯ ತೊಟ್ಟಂನಲ್ಲಿ ಅಕಾಲ ಮೃತ್ಯುಂಜಯ ಯಾಗ ಒಂಬತ್ತು ದಿನಗಳ ಅಹೋರಾತ್ರಿ ನಡೆಯುತ್ತಿದೆ. ಹಿಮಾಲಯದಿಂದ ದಕ್ಷಿಣ ಭಾರತಕ್ಕೆ ಆಗಮಿಸಿದ ಆಘೋರಿಗಳು ಈ ಯಾಗವನ್ನು ಕೈಗೊಂಡಿದ್ದಾರೆ. ಅಪಾರ ಪ್ರಮಾಣದ ಅಮೃತ ಬಳ್ಳಿ, ಗರಿಕೆ, ತುಪ್ಪ ಸೇರಿದಂತೆ ಹಲವು ಬಗೆಯ ಸಮಿದೆಯನ್ನು ಯಾಗಕ್ಕೆ ಹವಿಸ್ಸಾಗಿ ಬಳಸಲಾಗುತ್ತಿದೆ.
ಖಂಡ ಗ್ರಸ್ತ ಸೂರ್ಯ ಗ್ರಹಣ, ರಕ್ತ ಚಂದನ ಚಂದ್ರ ಗ್ರಹಣದಿಂದ ಲೋಕಕ್ಕೆ ಅತಿವೃಷ್ಟಿ, ಅನಾವೃಷ್ಠಿ ವಿಪತ್ತು ಸಂಭವಿಸದೆ ಲೋಕ ಸುಭಿಕ್ಷೆಯಿಂದ ಕೂಡಿರುವಂತೆ ಪ್ರಾರ್ಥಿಸಿ ಮಹಾರುದ್ರ ಯಾಗ ನಡೆಸಲಾಗುತ್ತಿದೆ. ದೇಶದ ನಾನಾ ಭಾಗಗಳಲ್ಲಿ ಇದೇ ರೀತಿಯ ಯಾಗಗಳನ್ನು ಅಘೋರಿಗಳು ನಡೆಸುತ್ತಿದ್ದು, ಜನಸಂಪರ್ಕವಿಲ್ಲದೆ ಪ್ರತ್ಯೇಕವಾಗಿ ಉಳಿದು ಈ ಮಹಾಯಾಗ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಶ್ರೀರಾಮ ಸೇನೆಯಿಂದ ಬೃಹತ್ ದತ್ತಮಾಲಾ ಶೋಭಾಯಾತ್ರೆ ಆರಂಭ