ETV Bharat / state

‘ರಿಚರ್ಡ್​ ಆ್ಯಂಟನಿ’ಯಲ್ಲೂ ಇದೆಯಂತೆ ‘ಉಳಿದವರು ಕಂಡಂತೆ’ ಹುಲಿ ಕುಣಿತ - ಶ್ರೀಕೃಷ್ಣ ಜನ್ಮಾಷ್ಟಮಿ

ನಟ ರಕ್ಷಿತ್ ಶೆಟ್ಟಿ ಹಲವು ವರ್ಷಗಳ ಬಳಿಕ ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟು ರಿಚರ್ಡ್​ ಆ್ಯಂಟನಿಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಜೊತೆಗೆ ಉಳಿದವರು ಕಂಡಂತೆ ಚಿತ್ರದ ಐಕಾನಿಕ್ ಡ್ಯಾನ್ಸ್ ಆಗಿದ್ದ ಹುಲಿ ಕುಣಿತ ಇಲ್ಲಿಯೂ ಮುಂದುವರೆಯಲಿದೆ ಎಂಬ ಸುಳಿವು ನೀಡಿದ್ದಾರೆ. ಸ್ಯಾಂಡಲ್​​ವುಡ್​ನಲ್ಲಿ ಈ ಚಿತ್ರದ ಕುರಿತು ಸಾಕಷ್ಟು ಕುತೂಹಲ ಮೂಡಿಸಿದೆ.

actoer-rakshit-shetty
ನಟ ರಕ್ಷಿತ್ ಶೆಟ್ಟಿ
author img

By

Published : Sep 2, 2021, 6:47 AM IST

ಉಡುಪಿ: ತುಳುನಾಡಿನ ಸಾಂಪ್ರದಾಯಿಕ ನೃತ್ಯದಲ್ಲಿ ಒಂದಾದ ಹುಲಿ ಕುಣಿತವನ್ನ ನಟ ರಕ್ಷಿತ್ ಶೆಟ್ಟಿ ತಮ್ಮ ಉಳಿದವರು ಕಂಡಂತೆ ಸಿನಿಮಾದ ಮೂಲಕ ಇಡೀ ಜಗತ್ತಿಗೆ ಪರಿಚಯಿಸಿದ್ದರು. ಸದ್ಯ ಈ ಚಿತ್ರದ ಇನ್ನೊಂದು ಭಾಗವಾಗಿ ರಿಚರ್ಡ್ಡ್ ಆ್ಯಂಟನಿ ಸಿನಿಮಾ ಸೆಟ್ಟೇರಿದೆ. ಈ ಚಿತ್ರದಲ್ಲೂ ಸಹ ಹುಲಿ ಕುಣಿತದ ಆರ್ಭಟ ಇರಲಿದೆ ಅಂತ ರಕ್ಷಿತ್ ಶೆಟ್ಟಿ ಸುಳಿವು ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ನಟ ರಕ್ಷಿತ್ ಶೆಟ್ಟಿ ಮಾತು

ಬೈಲೂರಿನ ನೀಲಕಂಠ ಮಹಾಬಬ್ಬುಸ್ವಾಮಿ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ಈ ವೇಳೆ ತಮ್ಮ ಮುಂದಿನ ಚಿತ್ರ ರಿಚರ್ಡ್ ಆ್ಯಂಟನಿ ಕುರಿತ ಚಿಕ್ಕ ಸುಳಿವು ನೀಡಿದ್ದಾರೆ.

ಉಳಿದವರು ಕಂಡಂತೆ ಚಿತ್ರದಲ್ಲಿ ಕೇವಲ 100 ಹುಲಿಗಳ ಬಳಿಸಿಕೊಂಡು ಶೂಟಿಂಗ್ ಮಾಡಲಾಗಿದೆ. ಆದರೆ, ಈ ಚಿತ್ರದಲ್ಲಿ 300 ಹುಲಿಗಳು ಇರಲಿವೆ ಎಂದಿದ್ದಾರೆ. ಉಳಿದವರು ಕಂಡಂತೆ ಚಿತ್ರಕ್ಕೆ ಕೇವಲ 2 ದಿನ ಮಾತ್ರ ಹುಲಿಕುಣಿತದ ಶೂಟಿಂಗ್ ಮಾಡಿದ್ದೆ. ಆಗ ಆರ್ಥಿಕವಾಗಿಯೂ ಶಕ್ತನಾಗಿರಲಿಲ್ಲ. ಈಗ 10 ದಿನ ಬೇಕಾದರೂ ಶೂಟಿಂಗ್ ಮಾಡಬಹುದು, ಆರ್ಥಿಕವಾಗಿಯೂ ತೊಂದರೆಯೇನಿಲ್ಲ ಎಂದಿದ್ದಾರೆ.

ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ'ಅಭಿನಯ ಚಕ್ರವರ್ತಿ'... 50ನೇ ವಸಂತಕ್ಕೆ ಕಾಲಿಟ್ಟ ನಟ 'ಕಿಚ್ಚ' ಸುದೀಪ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.