ETV Bharat / state

ಉಡುಪಿ ಉದ್ಯಮಿ ಅಪಹರಿಸಿ ದರೋಡೆ ಪ್ರಕರಣ: ಮೂವರನ್ನು ಬಂಧಿಸಿದ ಪೊಲೀಸರು​​

ಜುಲೈ 17 ರಂದು ಉದ್ಯಮಿ ಅಶೋಕ್​ ಕುಮಾರ್ ಎಂಬಾತರನ್ನು ಕಾರಿನಲ್ಲಿ ಅಪಹರಿಸಿದ್ದ ಗ್ಯಾಂಗ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು, ಬಳಿಕ ಬ್ಯಾಗ್​ನಲ್ಲಿದ್ದ 1.35 ಲಕ್ಷ ರೂಪಾಯಿ, ಮೊಬೈಲ್​ ಫೋನ್, ವಾಚ್​​ ದರೋಡೆ ಮಾಡಿದ್ದರು.

3-arrested-in-businessman-kidnapping-case
ಉಡುಪಿ ಉದ್ಯಮಿಯ ಅಪಹರಿಸಿ ದರೋಡೆ ಪ್ರಕರಣ
author img

By

Published : Jul 23, 2021, 7:25 AM IST

ಉಡುಪಿ: ಉದ್ಯಮಿಯೊಬ್ಬರನ್ನು ಅಪಹರಿಸಿ ದರೋಡೆ ಮಾಡಿದ್ದ ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಂತೋಷ, ಅನಿಲ್ ಪೂಜಾರಿ ಮತ್ತು ಮಣಿಕಂಠ ಖಾರ್ವಿ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಕಾರ್ಕಳ ಮೂಲದವರು ಎಂದು ತಿಳಿದು ಬಂದಿದೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್, ತಲವಾರುಗಳು ಹಾಗೂ 1,35,000 ರೂಪಾಯಿಯನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಕಾಪು, ಕಾರ್ಕಳ ಗ್ರಾಮಾಂತರ, ಸುಬ್ರಮಣ್ಯ ಠಾಣೆಗಳಲ್ಲಿ ಹಲವು ಪ್ರಕರಣಗಳು ಸಹ ದಾಖಲಾಗಿವೆ. ಸದ್ಯ ಈ ಪ್ರಕರಣದಲ್ಲಿ ಹಲವರ ಕೈವಾಡವಿದ್ದು, ಅವರೆಲ್ಲರ ಬಂಧನಕ್ಕೆ ಉಡುಪಿ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಕರಣದ ವಿವರ:

ಜುಲೈ 17 ರಂದು ಉದ್ಯಮಿ ಅಶೋಕ್​ ಕುಮಾರ್ ಎಂಬಾತನನ್ನು ಕಾರಿನಲ್ಲಿ ಅಪಹರಿಸಿದ್ದ ಗ್ಯಾಂಗ್ ಹಣಕ್ಕಾಗಿ ಬೇಡಿಕೆ ಇಟ್ಟಿತ್ತು. ಬಳಿಕ ಬ್ಯಾಗ್​ನಲ್ಲಿದ್ದ 1.35 ಲಕ್ಷ ರೂಪಾಯಿ, ಮೊಬೈಲ್​ ಫೋನ್, ವಾಚ್​​ಗಳ ದರೋಡೆ ಮಾಡಿದ್ದರು. ಮಾರನೇ ದಿನ ಬ್ಯಾಂಕ್​​ ಎಟಿಎಂ ಬಳಿ ಕರೆತಂದು ಹಣ ಡ್ರಾ ಮಾಡಿಸಿಕೊಳ್ಳಲು ಯತ್ನಿಸಿದಾಗ ಅಶೋಕ್ ಕುಮಾರ್ ಸಹಾಯಕ್ಕಾಗಿ ಕೂಗಿ ಕೊಂಡಿದ್ದರು. ಈ ವೇಳೆ ಹೆದರಿದ ಅಪಹರಣಕಾರರು ಅವರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು.

ಬಳಿಕ ಅಶೋಕ್ ಕುಮಾರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದರು, ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರ ತಂಡ ಸಿಸಿಟಿವಿ ಪರಿಶೀಲನೆ ನಡೆಸಿ ಆರೋಪಿಗಳ ಜಾಡು ಪತ್ತೆ ಮಾಡಿದ್ದರು.

ಓದಿ: Mobile​ ಗೇಮ್ ಆಡ್ತಿದ್ದವನ ಮೇಲೆ ಗಾಂಜಾ ಕೇಸ್: ಇನ್ಸ್​ಪೆಕ್ಟರ್, PSI, ಕಾನ್ಸ್​ಟೇಬಲ್​ಗೆ ಅಮಾನತು ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.