ಉಡುಪಿ: ಜಿಲ್ಲೆಯ ಸಾಲಿಗ್ರಾಮ ಜಾತ್ರೆಯಲ್ಲಿ ಬಲೂನು ವ್ಯಾಪಾರ ಮಾಡುತ್ತಿದ್ದ ಸುಮಾರು 12 ಮಕ್ಕಳನ್ನು ವಿವಿಧ ಇಲಾಖೆಗಳಿಂದ ಕಾರ್ಯಾಚರಣೆ ನಡೆಸಿ ಇಂದು ರಕ್ಷಿಸಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ, ಪೊಲೀಸ್ ಇಲಾಖೆ, ಪಟ್ಟಣ ಪಂಚಾಯತ್ ಸಾಲಿಗ್ರಾಮ, ಉಡುಪಿ ಜಿಲ್ಲಾ ನಾಗರಿಕ ಸಮಿತಿ ಇವರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಸಾಲಿಗ್ರಾಮ ಜಾತ್ರೆಯಲ್ಲಿ ರಾಜಸ್ಥಾನ ಮೂಲದ ಕುಟುಂಬಗಳೊಂದಿಗೆ ಮಕ್ಕಳು ಸಹ ಬಲೂನು ವ್ಯಾಪಾರ ಮಾಡುತ್ತಿದ್ದರು.
ಈ ಹಿನ್ನೆಲೆ ವ್ಯಾಪಾರ ಮಾಡ್ತಿದ್ದ 8 ಹೆಣ್ಣುಮಕ್ಕಳು, 4 ಗಂಡುಮಕ್ಕಳನ್ನು ರಕ್ಷಿಸಲಾಯಿತು. ಮಾತ್ರವಲ್ಲದೇ ಮಕ್ಕಳನ್ನು ದುಡಿಸದೆ ಶಿಕ್ಷಣ ನೀಡುವಂತೆ ಪೋಷಕರಿಗೆ ಮನವರಿಕೆ ಮಾಡಿಸಿ ಅವರೊಂದಿಗೆ ತಮ್ಮ ಸ್ವಂತ ಊರಿಗೆ ಹೊಗುವಂತೆ ರೈಲ್ವೆ ನಿಲ್ದಾಣಕ್ಕೆ ಕಳುಹಿಸಿ ಕೊಡಲಾಯಿತು.
ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ನಕಲಿ ಮದ್ಯ ತಯಾರಿಕಾ ಘಟಕ ಸೀಜ್.. ಓರ್ವನ ಬಂಧನ