ETV Bharat / state

ಮಹಿಳೆ ಕೊಲೆ ಮಾಡಿ ಹೇಮಾವತಿ ನಾಲೆಗೆ ಎಸೆದಿದ್ದ ಮೂವರು ಆರೋಪಿಗಳ ಬಂಧನ.. - Murder Accused arrest

ಮೂವರು ರಾಜಮತಿ ಎಂಬ ಮಹಿಳೆಯನ್ನು ಕೊಲೆ ಮಾಡಿ ಆಕೆಯ ಶವವನ್ನು ತುರುವೆಕೆರೆ ತಾಲೂಕಿನ ಹುಲಿಕಲ್ ಗ್ರಾಮದ ಬಳಿ ಇರುವ ಹೇಮಾವತಿ ನಾಲಿಗೆ ಎಸೆದಿದ್ದರು. ಈ ಬಗ್ಗೆ ಸೆಪ್ಟೆಂಬರ್ 23ರಂದು ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ನನ್ನ ತಾಯಿ ರಾಜಮತಿ ಕಾಣೆಯಾಗಿದ್ದಾರೆ ಎಂದು ಪ್ರಕೃತಿ ಎಂಬ ಯುವತಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಮೂವರು ಆರೋಪಿಗಳ ಬಂಧನ
author img

By

Published : Oct 15, 2019, 9:14 PM IST

ತುಮಕೂರು: ನಾಲೆಯ ನೀರಿನಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತುರುವೆಕೆರೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಮಾರ, ನಿಂಗಪ್ಪ, ನಾಗೇಶ ಎಂಬ ಮೂವರು ರಾಜಮತಿ ಎಂಬ ಮಹಿಳೆಯನ್ನು ಕೊಲೆ ಮಾಡಿ, ಆಕೆಯ ಶವವನ್ನು ತುರುವೆಕೆರೆ ತಾಲೂಕಿನ ಹುಲಿಕಲ್ ಗ್ರಾಮದ ಬಳಿ ಇರುವ ಹೇಮಾವತಿ ನಾಲೆಗೆ ಎಸೆದಿದ್ದರು. ಈ ಬಗ್ಗೆ ಸೆಪ್ಟೆಂಬರ್ 23ರಂದು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ನನ್ನ ತಾಯಿ ರಾಜಮತಿ ಕಾಣೆಯಾಗಿದ್ದಾರೆ ಎಂದು ಪ್ರಕೃತಿ ಎಂಬ ಯುವತಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರಾಜ್ಯದ ಇತರೆ ಪೊಲೀಸ್ ಠಾಣೆಗಳಿಗೆ ಮಹಿಳೆ ಕಾಣೆಯಾಗಿರುವ ಬಗ್ಗೆ ಮಾಹಿತಿ ರವಾನಿಸಿದ್ದರು. ಈ ಮಧ್ಯೆ ತುರುವೆಕೆರೆ ಪೊಲೀಸ್‌ ಠಾಣಿಗೆ, ಅಪರಿಚಿತ ಮಹಿಳೆಯ ಶವ ಹೇಮಾವತಿ ನಾಲೆಯಲ್ಲಿ ಸಿಕ್ಕಿದೆ. ವಾರಿಸುದಾರರು ಇಲ್ಲದ ಕಾರಣ ಅಂತ್ಯಸಂಸ್ಕಾರ ಮಾಡಲಾಗಿದೆ ಎಂಬ ಮಾಹಿತಿ ಬಂದಿತ್ತು. ತಕ್ಷಣ ಅಲರ್ಟ್ ಆದ ಜ್ಞಾನಭಾರತಿ ಪೊಲೀಸರು, ಮಹಿಳೆಯ ಮೈಮೇಲಿದ್ದ ಬಟ್ಟೆಗಳನ್ನಾಧರಿಸಿ‌ ಹಾಗೂ ಕುಟುಂಬದವರ ಸಹಕಾರದಿಂದ, ಶವ ಬೆಂಗಳೂರಲ್ಲಿ ಕಾಣೆಯಾಗಿದ್ದ ರಾಜುಮತಿಯದ್ದೇ ಎಂಬುವುದನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಇದು ನನ್ನ ತಾಯಿಯ ಮೃತ ದೇಹ ಎಂದು ಮೃತಳ ಪುತ್ರಿ ಪ್ರಕೃತಿ ಕೂಡ ಹೇಳಿದ್ದಾರೆ.

ಮೇಲ್ನೋಟಕ್ಕೆ ಈ ಪ್ರಕರಣ ಒಂದು ರೀತಿಯ ಅನೈತಿಕ ಸಂಬಂಧ ಹಿನ್ನೆಲೆಯಿಂದ ಕೂಡಿದ್ದಾಗಿದೆ ಎಂದು ಸ್ಪಷ್ಟವಾಗುತ್ತಿದೆ. ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ, ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಒಂದು ದ್ವಿಚಕ್ರವಾಹನ ಹಾಗೂ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ‌. ವಂಶಿಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

Intro:Body:ಮಹಿಳೆ ಕೊಲೆ ಮಾಡಿ ಹೇಮಾವತಿ ನಾಲೆಗೆ ಎಸೆದಿದ್ದ ಮೂವರು ಆರೋಪಿಗಳ ಬಂಧನ....

ತುಮಕೂರು
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ನವಿಲೆ ಸುರಂಗ ಮಾರ್ಗದಲ್ಲಿ ನಾಲೆಗಳ ಮೂಲಕ ತುಮಕೂರು ಜಿಲ್ಲೆಗೆ ಹರಿದು ಬರುವ ನೀರಿನಲ್ಲಿ ಮಹಿಳೆಯ ಮೃತದೇಹವೊಂದು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತುರುವೇಕೆರೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಮಾರ , ನಿಂಗಪ್ಪ , ನಾಗೇಶ ಎಂಬುವವರು ರಾಜ ಮತಿ ಎಂಬ ಮಹಿಳೆಯನ್ನು ಕೊಲೆ ಮಾಡಿ ಶವವನ್ನು ಹೇಮಾವತಿ ನಾಲಿಗೆ ಎಸೆದಿದ್ದರು. ತುರುವೇಕೆರೆ ತಾಲೂಕಿನ ಹುಲಿಕಲ್ ಗ್ರಾಮದ ಬಳಿ ಇರುವ ಹೇಮಾವತಿ ನಾಲೆಗೆ ಬಿಸಾಡಿದ್ರು. ಅಲ್ಲದೇ ಆರೋಪಿಗಳಿಂದ ಎರಡು ಲಕ್ಷ ರೂ ಮೌಲ್ಯದ ಚಿನ್ನಾಭರಣ, ಒಂದು ದ್ವಿಚಕ್ರವಾಹನ , ಹಾಗೂ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆಕ್ಟೊಬರ್1ರಂದು ರಾಜ ಮತಿ ಎಂಬ ಮಹಿಳೆಯನ್ನು ಕೊಲೆಯಾಗಿತ್ತು.
ಸೆಪ್ಟೆಂಬರ್ 23 ರಂದು ಬೆಂಗಳೂರಿನ ಜ್ಞಾನಭಾರತಿ ಪೋಲಿಸ್ ಠಾಣೆಯಲ್ಲಿ ನನ್ನ ತಾಯಿ ರಾಜಮತಿ ಕಾಣೆಯಾಗಿದ್ದಾರೆ ಎಂದು ಪ್ರಕೃತಿ ಎಂಬ ಯುವತಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ನಂತರ ಪೋಲಿಸ್ರು ರಾಜ್ಯದ ಇತರೇ ಪೋಲಿಸ್ ಠಾಣೆಗಳಿಗೆ ಮಹಿಳೆ ಕಾಣೆಯಾಗಿರೋದ್ರ ಬಗ್ಗೆ ಮಾಹಿತಿ ರವಾನಿಸಿದ್ದರು. ಈ ವೇಳೆಗಾಗಲೇ ತುರುವೇಕೆರೆ ಪೋಲಿಸ್ ಠಾಣೆಯಲ್ಲಿ ಅಪರಿಚಿತ ಮಹಿಳೆ ಶವ ಹೇಮಾವತಿ ನಾಲೆಯಲ್ಲಿ ಸಿಕ್ಕಿದೆ ಆದ್ರೆ ವಾರಸುದಾರರು ಯಾರೂ ಇಲ್ಲದ ಕಾರಣ ಅಂತ್ಯಸಂಸ್ಕಾರ ಮಾಡಲಾಗಿದೆ ಅಂತ ಮಾಹಿತಿ ಹಾಕಿದ್ರು. ತಕ್ಷಣ ಅಲರ್ಟ್ ಆದ ಜ್ನಾನಭಾರತಿ ಪೋಲಿಸ್ರು ಮಹಿಳೆ ಮೈಮೇಲಿದ್ದ ಬಟ್ಟೆಗಳನ್ನಾಧರಿಸಿ‌ ಹಾಗೂ ಕುಟುಂಬದವರ ಸಹಕಾರದಿಂದ ಮಹಿಳೆಯ ಶವ ಬೆಂಗಳೂರಲ್ಲಿ ಕಾಣೆಯಾಗಿದ್ದ ರಾಜುಮತಿಯದ್ದೇ ಎಂಬುದು ಸ್ಪಷ್ಟವಾಗಿತ್ತು. ಅಲ್ಲದೆ ನನ್ನ ತಾಯಿಯ ಮೃತದೇಹವೆ ಅಂತ ಮೃತಳ ಪುತ್ರಿ ಪ್ರಕೃತಿ ಕೂಡ ಕನ್ಫರ್ಮ್ ಮಾಡಿದ್ದಾರೆ.
ಮೇಲ್ನೋಟಕ್ಕೆ ಈ ಪ್ರಕರಣ ಒಂದು ರೀತಿಯ ಅನೈತಿಕ ಸಂಬಂಧ ಹಿನ್ನೆಲೆಯಿಂದ ಕೂಡಿದ್ದಾಗಿರೋದು ಎಂದು ಸ್ಪಷ್ಟವಾಗುತ್ತಿದೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ‌. ವಂಶಿಕೃಷ್ಣ ಪ್ರತಿಕ್ರಿಯೆ ನೀಡಿದ್ದರುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.