ತುಮಕೂರು: ಆಯುಷ್ ಇಲಾಖೆಯಿಂದ ನೀಡಲಾಗುತ್ತಿರುವ ಸಂಶಮನಿವಟಿ ಮಾತ್ರೆ ಹಾಗೂ ಅರ್ಕ ಅಜೀಬ್ ಎಂಬ ಹೆಸರಿನ ಡ್ರಾಪ್ಸ್ ಬಳಸಿದರೆ ಕೊರೊನಾ ಸೋಂಕು ಬರುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುಷ್ ಇಲಾಖೆ ಸಂಶಮನಿವಟಿ ಮಾತ್ರೆ ಹಾಗೂ ಅರ್ಕ್ ಎ ಅಜೀಬ್ ಎಂಬ ಹೆಸರಿನ ಡ್ರಾಪ್ಸ್ನ್ನು ಜನರಿಗೆ ನೀಡಲು ಮುಂದಾಗಿದೆ. ಈ ಮಾತ್ರೆ ನುಂಗಿದರೆ ಮಾನವನ ದೇಹದಲ್ಲಿ ಹ್ಯುಮಿನಿಟಿ ಪವರ್ ಹೆಚ್ಚಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕೊರೊನಾ ಬಾರದಂತೆ ತಡೆಯುವ ನಿಟ್ಟಿನಲ್ಲಿ ಈ ಮಾತ್ರೆ ಸಹಕಾರಿಯಾಗಿದೆ. ಜನರು ಈ ಮಾತ್ರೆಯನ್ನು ಊಟಕ್ಕಿಂತ ಮೊದಲು ಒಂದು ನಂತರ ರಾತ್ರಿ ಊಟಕ್ಕಿಂತ ಮುಂಚೆ ನುಂಗಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಅರ್ಕ್ ಎ ಅಜೀಬ್ ಎಂಬ ಹೆಸರಿನ ಡ್ರಾಪ್ಸ್ನ್ನು ಬಿಸಿ ನೀರಿಗೆ ಹಾಕಿ ಹಬೆಯನ್ನು ಮೂಗಿನ ಮೂಲಕ ದೇಹಕ್ಕೆ ತೆಗೆದುಕೊಂಡರೆ, ಗಂಟಲು ಮತ್ತು ಮೂಗಿನಲ್ಲಿ ಇರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಈ ಮಾತ್ರೆಯ ಸೇವನೆ ಮತ್ತು ಡ್ರಾಪ್ಸ್ ಬಳಸುವುದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗುವುದಿಲ್ಲ. ಇದು ಜನರಿಕ್ ಮೆಡಿಕಲ್ಗಳಲ್ಲಿ ಕಡಿಮೆ ಬೆಲೆಗೆ ದೊರೆಯುತ್ತದೆ ಎಂದು ತಿಳಿಸಿದರು.
ಇಂದು ಜಗತ್ತಿನಲ್ಲಿ ದೊಡ್ಡ ಡ್ರಗ್ಸ್ ಮಾಫಿಯಾ ನಡೆಯುತ್ತಿದೆ. ಇಂಗ್ಲಿಷ್ ಔಷಧಗಳಿಗೆ ಜನ ಮಾರು ಹೋಗುತ್ತಿದ್ದಾರೆ. ಇದರಿಂದ ಆಯುರ್ವೇದಿಕ್ ಔಷಧಿಗಳ ಮೇಲೆ ಅಗಾಧವಾದ ಹೊಡೆತ ಬಿದ್ದಿದೆ. ಜನರು ಆಯುರ್ವೇದಿಕ್ ಔಷಧ ಬಳಸಿ, ತಮ್ಮ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು. ಹೆಚ್ಚಿನ ರೀತಿಯಲ್ಲಿ ಆಯುರ್ವೇದಿಕ್ ಔಷಧವನ್ನೇ ಬಳಕೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.