ETV Bharat / state

ಕುಣಿಗಲ್​ ಬಳಿ ಲಾರಿ-ಕಾರು ನಡುವೆ ಭೀಕರ ಅಪಘಾತ: ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಲಾರಿ, ಕಾರು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪತಿ-ಪತ್ನಿ ಮತ್ತು ಮಗು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಓರ್ವ ಬಾಲಕ ಗಾಯಗೊಂಡಿದ್ದಾನೆ.

ತುಮಕೂರಲ್ಲಿ ಅಪಘಾತವಾಗಿ ಒಂದೇ ಕುಟುಂಬದ ಮೂವರ ಸಾವು

author img

By

Published : May 3, 2022, 8:28 PM IST

ಕುಣಿಗಲ್(ತುಮಕೂರು) : ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪತಿ-ಪತ್ನಿ ಮತ್ತು ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟು ಓರ್ವ ಗಾಯಗೊಂಡಿರುವ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿ 33ರ ಅರಮನೆ ಹೊನ್ನಮಾಚನಹಳ್ಳಿ ಸಮೀಪ ಸಂಭವಿಸಿದೆ.

ರಾಮನಗರ ಜಿಲ್ಲೆ ಚನ್ನಪ್ಪಟಣ ಶಾಮಿಯಾ ಮೊಹಲ್ಲಾದ ಸೈಯದ್‌ ಮೊಹಮದ್ ನಜ್ಮಿ (42), ನಾಜೀಯಾ (30), ಸೈಹದ್‌ಖುದ್ ಮೀರ್ ಹಸಿ(2) ಮೃತರು. ತೀವ್ರವಾಗಿ ಗಾಯಗೊಂಡ ಸೈಹದ್‌ಖುದ್ ಮೀರ್ ನಬಿ (3) ಅನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಒಸಿಐ ವಿದ್ಯಾರ್ಥಿಗಳಿಗೂ ಸಿಇಟಿಗೆ ಅವಕಾಶ ನೀಡಲು ಹೈಕೋರ್ಟ್ ಆದೇಶ

ವಿವರ : ಮಂಗಳವಾರ ಸೈಯದ್‌ಮೊಹಮದ್ ನಜ್ಮಿ ಅವರು ತನ್ನ ಪತ್ನಿ ನಾಜೀಯಾ ಹಾಗೂ ಮಕ್ಕಳಾದ ಸೈಹದ್‌ಖುದ್ ಮೀರ್ ನಬಿ, ಸೈಹದ್‌ಖುದ್ ಮೀರ್ ಹಸಿ ಅವರೊಂದಿಗೆ ರಂಜಾನ್ ಹಬ್ಬ ಮುಗಿಸಿಕೊಂಡು ಚನ್ನಪಟ್ಟಣದಿಂದ ತನ್ನ ಸಂಬಂಧಿಕರ ಮನೆ ಭದ್ರಾವತಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಅರಮನೆ ಹೊನ್ನಮಾಚನಹಳ್ಳಿ ಸಮೀಪ ಹೈದರಾಬಾದ್‌ನಿಂದ ಕೇರಳಕ್ಕೆ ತೆರಳುತ್ತಿದ್ದ ಲಾರಿಯು ಡಿಕ್ಕಿ ಹೊಡೆದಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಚೇತನ್ ಭೇಟಿ ನೀಡಿ ಪರಿಶೀಲನೆ ಬಳಿಕ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.