ETV Bharat / state

ಭಿಕ್ಷೆ ಕೇಳೋಕೆ ಬಂದಾಗ ಹುಷಾರು... ಮಹಿಳೆಗೆ ವಿಭೂತಿ ಎರಚಿ ಲಕ್ಷಾಂತರ ರೂ. ದೋಚಿದ ಚೋರ

author img

By

Published : Jan 13, 2020, 9:24 PM IST

ಹಾಡಹಗಲೇ ಮಾಂತ್ರಿಕ ಚೋರನೊಬ್ಬ ಭಿಕ್ಷೆ ಕೇಳುವ ನೆಪದಲ್ಲಿ ಬಂದು, ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಕುಣಿಗಲ್ ತಾಲೂಕಿನ ಬೋರೇಗೌಡನಪಾಳ್ಯ ಗ್ರಾಮದಲ್ಲಿ ನಡೆದಿದೆ.

Theft at Boregaudanapaly
ತುಮಕೂರಿನಲ್ಲಿ ಹಾಡಹಗಲೇ ಕಳ್ಳತನ

ತುಮಕೂರು: ಹಾಡಹಗಲೇ ಮಾಂತ್ರಿಕ ಚೋರನೊಬ್ಬ ಭಿಕ್ಷೆ ಕೇಳುವ ನೆಪದಲ್ಲಿ ಬಂದು, ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಕುಣಿಗಲ್ ತಾಲೂಕಿನ ಬೋರೇಗೌಡನಪಾಳ್ಯ ಗ್ರಾಮದಲ್ಲಿ ನಡೆದಿದೆ. ಮಹಿಳೆಯ ಮುಖಕ್ಕೆ ವಿಭೂತಿ ಎಸೆದು ಆಕೆಯ ಜ್ಞಾನ ತಪ್ಪಿಸಿ, ಮನೆಯಲ್ಲಿದ್ದ 1.50 ಲಕ್ಷ ರೂ. ಹಣ, ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ದೋಚಿದ್ದಾನೆ.

ಇಂದು ಬೆಳಗ್ಗೆ ಸುಮಾರು 9.30ರ ವೇಳೆಯಲ್ಲಿ ಗ್ರಾಮದ ನಾಗರಾಜ್ ಪತ್ನಿ ವಿಜಯಲಕ್ಷ್ಮಿ ಈ ರೀತಿಯ ವಂಚನೆಗೆ ಒಳಗಾಗಿದ್ದಾರೆ. ನಾಗರಾಜು ತಮ್ಮ ಮಕ್ಕಳನ್ನು ಶಾಲಾ ವಾಹನಕ್ಕೆ ಹತ್ತಿಸಲು ತೆರಳಿದ್ದರು. ಹೊಂಚು ಹಾಕಿ ಕುಳಿತಿದ್ದ ಮಾಂತ್ರಿಕ ವಿಜಯಲಕ್ಷ್ಮಿ ಬಳಿ ಬಂದು ಭಿಕ್ಷೆ ಕೇಳಿದ್ದಾನೆ. ಮನೆಯೊಳಗಿದ್ದ ವಿಜಯಲಕ್ಷ್ಮಿ ಹೊರಗೆ ಬಂದು ಭಿಕ್ಷೆ ಇಲ್ಲ ಎಂದು ಹೇಳಿದ್ದಾರೆ.

ಆದರೆ ಭಿಕ್ಷೆಗಾಗಿ ವಿಜಯಲಕ್ಷ್ಮಿ ಬಳಿ ಗೋಗರೆದಿದ್ದು, ವಿಜಯಲಕ್ಷ್ಮಿ ಮನೆ ಒಳಗಿನಿಂದ ಅಕ್ಕಿ ತೆಗೆದುಕೊಂಡು ಬಂದು ಭಿಕ್ಷುಕನಿಗೆ ಕೊಡಲು ಮುಂದಾಗಿದ್ದರು. ಈ ವೇಳೆ ಕ್ಷಣಾರ್ಧದಲ್ಲಿ ವಿಭೂತಿ ಪುಡಿಯನ್ನು ಮುಖಕ್ಕೆ ಎರಚಿದ್ದು, ತಕ್ಷಣ ವಿಜಯಲಕ್ಷ್ಮಿ ಅಲ್ಲಿಯೇ ಮೂರ್ಚೆ ಹೋಗಿದ್ದಾರೆ. ಬಳಿಕ ಒಳನುಗ್ಗಿ ಲೂಟಿ ಮಾಡಿ ಪರಾರಿಯಾಗಿದ್ದಾನೆ.

ಮಕ್ಕಳನ್ನು ಶಾಲೆಗೆ ಕಳಿಸಿ ಮನೆ ಎದುರು ಬಂದ ನಾಗರಾಜ್, ಪತ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಕಂಡು ಗಾಬರಿಗೊಂಡಿದ್ದಾರೆ. ಎಚ್ಚರಗೊಂಡ ಪತ್ನಿಯಿಂದ ವಿಷಯ ತಿಳಿದ ನಾಗರಾಜ್ ಅಕ್ಕಪಕ್ಕ ಮನೆಯವರೊಂದಿಗೆ ಭಿಕ್ಷುಕನನ್ನು ಹುಡುಕಾಟ ನಡೆಸಿದ್ರೂ ಆತ ಪತ್ತೆಯಾಗಲಿಲ್ಲ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ವಿಜಯಲಕ್ಷ್ಮಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಕುರಿತು ಕುಣಿಗಲ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Intro:Body:ಮಂಕುಬೂದಿ ಎರಚಿ ಚಿನ್ನಾಭರಣ ದೋಚಿದ ಮಾಂತ್ರಿಕ….

ತುಮಕೂರು
ಜಿಲ್ಲೆಯ ಕುಣಿಗಲ್ ತಾಲೂಕಿನ ಬೋರೇಗೌಡನಪಾಳ್ಯ ಗ್ರಾಮದಲ್ಲಿ ಸೋಮವಾರ ಹಾಡಹಗಲೇ ಮಾಂತ್ರಿಕ ಚೋರನೊಬ್ಬ ಭಿಕ್ಷೆ ಕೇಳುವ ನೆಪದಲ್ಲಿ ಮಹಿಳೆಯ ಮುಖಕ್ಕೆ ವಿಭೂತಿ ಧೂಳು ಎಸೆದು ಆಲ್ಲಿಕೆಯ ಜ್ಞಾನ ತಪ್ಪಿಸಿ, ಮನೆ ಒಳಗೆಯಿದ್ದ ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.
ಒಳಗೆ ನುಗ್ಗಿದ್ದ ಭಿಕ್ಷಕ ಮನೆಯಲ್ಲಿದ್ದ ಬೀರು ತೆಗೆದು ಅದ್ರಲ್ಲಿದ್ದ 1.50 ಲಕ್ಷ ರೂ. ಹಣ ಹಾಗೂ ವಿಜಯಲಕ್ಷ್ಮಿ ಅವರ ಮೈ ಮೇಲೆ ಇದ್ದ 30 ಗ್ರಾಂ ಚಿನ್ನದ ಮಾಂಗಲ್ಯ ಸರ, 48 ಗ್ರಾಂ ಚಿನ್ನದ ಚೈನು, 40 ಗ್ರಾಂ ಎರಡು ಚಿನ್ನದ ಬಳೆ, 50 ಗ್ರಾಂ ಚಿನ್ನದ ಕಾಸಿನ ಸರ, ಎರಡು ಜೊತೆ ಓಲೆ, 30 ಗ್ರಾಂ ಎರಡು ಜೊತೆ ಚಿನ್ನದ ಓಲೆ, ನಾಲ್ಕು ಉಂಗುರ ಸೇರಿದಂತೆ ಬೆಳ್ಳಿಯ ವಸ್ತುಗಳನ್ನು ದೋಚಿದ್ದಾನೆ.
ಇಂದು ಬೆಳಗ್ಗೆ ಸುಮಾರು 9.30ರ ವೇಳೆಯಲ್ಲಿ ಬೋರೇಗೌಡನಪಾಳ್ಯ ಗ್ರಾಮದ ನಾಗರಾಜ್ ಎಂಬುವರ ಪತ್ನಿ ವಿಜಯಲಕ್ಷ್ಮಿ ಎಂಬುವರು ಈ ರೀತಿಯ ವಂಚನೆಗೆ ಒಳಗಾಗಿದ್ದಾರೆ. ವಿಜಯಲಕ್ಷ್ಮಿ ಪತಿ ನಾಗರಾಜು ತಮ್ಮ ಮಕ್ಕಳನ್ನು ಶಾಲಾ ವಾಹನಕ್ಕೆ ಹತ್ತಿಸಲು ತೆರಳಿದ್ದರು. ಹೊಂಚು ಹಾಕಿ ಕುಳಿತಿದ್ದ ಮಾಂತ್ರಿಕ ವಿಜಯಲಕ್ಷ್ಮಿ ಬಳಿ ಬಂದು ಭಿಕ್ಷೆ ಕೇಳಿದ್ದಾನೆ, ಮನೆಯೊಳಗಿದ್ದ ವಿಜಯಲಕ್ಷ್ಮಿ ಹೊರಗೆ ಬಂದು ಭಿಕ್ಷೆ ಇಲ್ಲ ಎಂದು ಹೇಳಿದ್ದಾರೆ. ಆದ್ರೆ ಭಿಕ್ಷೆಗಾಗಿ ವಿಜಯಲಕ್ಷ್ಮಿ ಬಳಿ ಗೋಗರೆದಿದ್ದಾನೆ. ಮನಕರಗಿದ ವಿಜಯಲಕ್ಷ್ಮಿ ಮನೆ ಒಳಗಿನಿಂದ ಅಕ್ಕಿ ತೆಗೆದುಕೊಂಡು ಬಂದು ಭಿಕ್ಷುಕನಿಗೆ ಕೊಡಲು ಮುಂದಾಗಿದ್ದರು, ಕ್ಷಣಾಧಱದಲ್ಲಿ ಭಿಕ್ಷಕ ವಿಭೂತಿ ಪುಡಿಯನ್ನು ವಿಜಯಲಕ್ಷ್ಮಿ ಅವರ ಮುಖಕ್ಕೆ ಎರಚಿದ್ದಾನೆ, ಇದ್ರಿಂದ ತಕ್ಷಣ ವಿಜಯಲಕ್ಷ್ಮಿ ಅಲ್ಲಿಯೇ ಮೂರ್ಚೆ ಹೋಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡಿದ್ದ ಭಿಕ್ಷುಕ ಒಳನುಗ್ಗಿ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದಾನೆ.
ಮಕ್ಕಳನ್ನು ಶಾಲೆಗೆ ಕಳಿಸಿ ಮನೆ ಎದುರು ಬಂದ ನಾಗರಾಜ್ ಅವರು ಪತ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಕಂಡು ಗಾಬರಿಗೊಂಡಿದ್ದಾರೆ. ಎಚ್ಚರಗೊಂಡ ಪತ್ನಿಯಿಂದ ವಿಷಯ ತಿಳಿದ ನಾಗರಾಜ್ ಅಕ್ಕಪಕ್ಕ ಮನೆಯವರೊಂದಿಗೆ ಭಿಕ್ಷುಕನನ್ನು ಹುಡುಕಾಟ ನಡೆಸಿದ್ರೂ ಆತ ಪತ್ತೆಯಾಗಲಿಲ್ಲ.
ಅರೆಪ್ರಜ್ಞಾವಸ್ಥೆಯಲ್ಲಿದ್ದ ಪತ್ನಿ ಜಯಲಕ್ಷ್ಮಿಯನ್ನು ಗ್ರಾಮಸ್ಥರ ಸಹಾಯದೊಂದಿಗೆ ನಾಗರಾಜ್ ಅವರು ತಾಲೂಕು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಕುಣಿಗಲ್ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.