ETV Bharat / state

ತುಮಕೂರು ಜಿಲ್ಲೆಯ ಗಡಿಭಾಗದ ಜನರಿಗೆ ದರೋಡೆಕೋರರ ಭಯ.. - Robery fear in Kunigal taluk

ಕೊರೊನಾ ಕಾರಣದಿಂದ ಕೆಲಸ ಕಳೆದುಕೊಂಡ ಯುವಕರು, ಬೆಂಗಳೂರು ತೊರೆದು ಹಳ್ಳಿಗಳಿಗೆ ಬಂದಿದ್ದಾರೆ. ಇದರಲ್ಲಿ ಕೆಲವರು ಮದ್ಯ, ಜೂಜಿನ ಮೋಹಕ್ಕೆ ಬಿದ್ದು, ಹಣಕ್ಕಾಗಿ ಕಳ್ಳತನಕ್ಕೆ ಇಳಿದಿದ್ದಾರೆ. ಬೈಕ್​ನಲ್ಲಿ ಹೋಗುವ ಜನರನ್ನು ಅಡ್ಡಗಟ್ಟಿ ದೋಚಲಾಗುತ್ತಿದೆ. ಅಲ್ಲದೆ ಹೊಲಗಳಲ್ಲಿ ಕೆಲಸ ಮಾಡುವ ಒಂಟಿ ಮಹಿಳೆಯರನ್ನು ಈ ಖದೀಮರ ತಂಡ ಟಾರ್ಗೆಟ್‌ ಮಾಡಿದೆ. ಇದರಿಂದ ರೈತ ಮಹಿಳೆಯರು ಹೊಲದಲ್ಲಿ ಕೆಲಸ ಮಾಡಲು ಹೆದರುವಂತಾಗಿದೆ..

robbery-cases-increased-in-tumkur
ದರೋಡೆಕೋರರ ಬಂಧನ
author img

By

Published : Aug 20, 2021, 4:06 PM IST

ತುಮಕೂರು : ಕೊರೊನಾ ಹಿನ್ನೆಲೆ ಆರ್ಥಿಕ ಸಂಕಷ್ಟದಿಂದ ನರಳಿದ ಜಿಲ್ಲೆಯ ಜನರು ಇದೀಗ ಖದೀಮರ ಕೈಚಳಕಕ್ಕೆ ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯ ಗಡಿಭಾಗದಲ್ಲಿ ಕಳ್ಳತನ ಹೆಚ್ಚಿದೆ. ರಾತ್ರಿ-ಹಗಲು ಎನ್ನದೆ ಜನರನ್ನು ಸುಲಿಗೆ ಮಾಡುವ ಕೆಲಸ ಜೋರಾಗಿದೆ. ಜೊತೆಗೆ ಸಾಕ್ಷ್ಯಾಧಾರಗಳು ಸಿಗದಂತೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಕಾರ್ಯವೂ ನಡೆಯುತ್ತಿದೆ.

ದರೋಡೆಕೋರರ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ

ಜಿಲ್ಲೆಯ ಕುಣಿಗಲ್‌ ತಾಲೂಕಿನ ರಾಮನಗರ ಗಡಿ ಭಾಗದಲ್ಲಿ ಕಳ್ಳರ ಉಪಟಳ ಜೋರಾಗಿದೆ. ಇಲ್ಲಿನ ಹುಲಿಯೂರುದುರ್ಗ ಪೊಲೀಸ್‌ ಠಾಣೆ ವ್ಯಾಪ್ತಿಯ ಹಂಗರಹಳ್ಳಿ, ತಾವರೆಕೆರೆ, ಉಜ್ಜನಿ ವ್ಯಾಪ್ತಿಯಲ್ಲಿ ಜನ ಒಂಟಿಯಾಗಿ ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಲಾಕ್​ಡೌನ್​ನಿಂದ ಕಂಗೆಟ್ಟಿದ್ದ ಜನರಿಗೆ ಇದೀಗ ಕಳ್ಳರ ಭೀತಿ ಹೆಚ್ಚಾಗಿದೆ. ಗ್ರಾಮದ ಹೊರವಲಯದಲ್ಲಿ ಒಬ್ಬಂಟಿಯಾಗಿ ಓಡಾಡುವ ವೇಳೆ ಖದೀಮರ ಗುಂಪು ಏಕಾಏಕಿ ದಾಳಿ ನಡೆಸಿ ಚಿನ್ನಾಭರಣ-ಹಣ ದೋಚುತ್ತಿದ್ದಾರೆ.

ಮಹಿಳೆಯರೇ ಟಾರ್ಗೆಟ್ ​: ಕೊರೊನಾ ಕಾರಣದಿಂದ ಕೆಲಸ ಕಳೆದುಕೊಂಡ ಯುವಕರು, ಬೆಂಗಳೂರು ತೊರೆದು ಹಳ್ಳಿಗಳಿಗೆ ಬಂದಿದ್ದಾರೆ. ಇದರಲ್ಲಿ ಕೆಲವರು ಮದ್ಯ, ಜೂಜಿನ ಮೋಹಕ್ಕೆ ಬಿದ್ದು, ಹಣಕ್ಕಾಗಿ ಕಳ್ಳತನಕ್ಕೆ ಇಳಿದಿದ್ದಾರೆ. ಬೈಕ್​ನಲ್ಲಿ ಹೋಗುವ ಜನರನ್ನು ಅಡ್ಡಗಟ್ಟಿ ದೋಚಲಾಗುತ್ತಿದೆ. ಅಲ್ಲದೆ ಹೊಲಗಳಲ್ಲಿ ಕೆಲಸ ಮಾಡುವ ಒಂಟಿ ಮಹಿಳೆಯರನ್ನು ಈ ಖದೀಮರ ತಂಡ ಟಾರ್ಗೆಟ್‌ ಮಾಡಿದೆ. ಇದರಿಂದ ರೈತ ಮಹಿಳೆಯರು ಹೊಲದಲ್ಲಿ ಕೆಲಸ ಮಾಡಲು ಹೆದರುವಂತಾಗಿದೆ.

ರಸ್ತೆಗಳಲ್ಲಿ ಓಡಾಡಲು ಭಯ : ರಾಮನಗರ ಜಿಲ್ಲೆ ಮಾಗಡಿ ತಾಲೂಕು ಹಾಗೂ ಕುಣಿಗಲ್‌ ತಾಲೂಕಿನ ಗಡಿ ಪ್ರದೇಶದಲ್ಲಿ ಹೆಚ್ಚಾಗಿ ಅರಣ್ಯ ಪ್ರದೇಶವಿದೆ. ಈ ಅರಣ್ಯ ಮದ್ಯದಲ್ಲಿ ಹಾದು ಹೋಗುವ ರಸ್ತೆಯ ಅಕ್ಕಪಕ್ಕದ ಪೊದೆಗಳಲ್ಲಿ ಅವಿತುಕೊಂಡು ಕುಳಿತುಕೊಳ್ಳುವ ಕಳ್ಳರು, ಒಬ್ಬಂಟಿಯಾಗಿ ಸಿಗುವ ಜನರ ಪ್ರಾಣವನ್ನೇ ತೆಗೆಯುತ್ತಿದ್ದಾರೆ. ಸಂಜೆ ನಂತರವಂತೂ ಈ ರಸ್ತೆಗಳಲ್ಲಿ ಓಡಾಡಲು ಜನರು ಹೆದರುತ್ತಾರೆ.

ಎರಡು ಜಿಲ್ಲೆಯ ಪೊಲೀಸ್‌ ಠಾಣೆ ಸರಹದ್ದಿನ ಆಸುಪಾಸಿನಲ್ಲೇ ಕಳ್ಳತನ ನಡೆಸಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಸಂಚು ಕೂಡ ಇದರಲ್ಲಿದೆ. ಖದೀಮರ ಕಪಿಮುಷ್ಟಿಯಿಂದ ಕಾಪಾಡುವಂತೆ ಸ್ಥಳೀಯ ಜನರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಓದಿ : SC/ST, ಅಲ್ಪಸಂಖ್ಯಾತ ವಸತಿ ಶಾಲೆಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣಕ್ಕೆ ಹೊಸ ನೀತಿ : ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.