ETV Bharat / state

ಫೆ.6ರಂದು ಹೆಚ್​ಎಎಲ್​​ ಹೆಲಿಕಾಪ್ಟರ್ ಘಟಕ ಲೋಕಾರ್ಪಣೆ ಮಾಡಲಿರುವ ಪ್ರಧಾನಿ - ಈಟಿವಿ ಭಾರತ ಕನ್ನಡ ನ್ಯೂಸ್​​

ತುಮಕೂರಿನಲ್ಲಿ ಹೆಚ್​ಎಎಲ್​ ಹೆಲಿಕಾಪ್ಟರ್​ ಘಟಕ ಸ್ಥಾಪನೆ - ಫೆಬ್ರವರಿ 6 ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ - 2016ರಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದ ಪಿಎಂ

Etv pm-narendra-modi-inaugrates-hal-helicopter-unit-at-tumkur-on-feb-6
Etv Bharatಫೆ.6ರಂದು ಪ್ರಧಾನಿ ಮೋದಿಯಿಂದ ಹೆಚ್​ಎಎಲ್​​ ಹೆಲಿಕಾಪ್ಟರ್ ಘಟಕ ಲೋಕಾರ್ಪಣೆ
author img

By

Published : Jan 31, 2023, 12:28 PM IST

ತುಮಕೂರು : ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರಹಳ್ಳಿ ಕಾವಲ್‌ನಲ್ಲಿ ನಿರ್ಮಿಸಲಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 6ರಂದು ಲೋಕಾರ್ಪಣೆ ಮಾಡಲಿದ್ದಾರೆ. ಈ ಘಟಕಕ್ಕೆ 2016ರಲ್ಲಿ ಮೋದಿ ಶಂಕುಸ್ಥಾಪನೆ ಮಾಡಿದ್ದರು.

610 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಈ ಹೊಸ ಹೆಲಿಕಾಪ್ಟರ್ ತಯಾರಿಕಾ ಘಟಕ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿ ಇಂಡೋ - ರಷ್ಯನ್ ಜಂಟಿ ಯೋಜನೆಯಾಗಿರುವ KA 226T, ಅವಳಿ ಎಂಜಿನ್ ಹೆಲಿಕಾಪ್ಟರ್ ಮತ್ತು 3-ಟನ್ ಹೊಸ ಪೀಳಿಗೆಯ ಲೈಟ್ ಯುಟಿಲಿಟಿ ಹೆಲಿಕಾಪ್ಟರ್​ಗಳನ್ನು ಪ್ರತ್ಯೇಕವಾಗಿ ತಯಾರಿಸಲು ಉದ್ದೇಶಿಸಲಾಗಿದೆ. ಗುಬ್ಬಿಯಲ್ಲಿರುವ ಈ ಚಾಪರ್ ಘಟಕವು ಒಂದು ವರ್ಷದಲ್ಲಿ 30 ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಅಲ್ಲದೇ 175 ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ತಯಾರಿಕೆ ನಿರೀಕ್ಷಿಸಲಾಗುತ್ತಿದೆ. ಬೆಂಗಳೂರು ಮತ್ತು ತುಮಕೂರು ವಿಭಾಗಗಳಿಂದ ಏಕಕಾಲದಲ್ಲಿ ಈ ಹೆಲಿಕಾಪ್ಟರ್​​ಗಳನ್ನು ಉತ್ಪಾದಿಸಲಾಗುತ್ತದೆ.

ಇತ್ತೀಚೆಗೆ ರಕ್ಷಣಾ ಸಚಿವಾಲಯವು 12 LUH ಗಳನ್ನು ಖರೀದಿಸಲು ಆದೇಶ ನೀಡಿದೆ. ಒಟ್ಟು 500 ಸುಧಾರಿತ ಲಘು ಹೆಲಿಕಾಪ್ಟರ್‌ಗಳನ್ನು ತಯಾರಿಸಲು Kamov - 226T ಲೈಟ್ ಹೆಲಿಕಾಪ್ಟರ್ ಅಭಿವೃದ್ಧಿಪಡಿಸುವುದಕ್ಕಾಗಿ ರಷ್ಯಾದೊಂದಿಗೆ ಸಹಯೋಗ ವಹಿಸಲು ಭಾರತವು ಮುಂದಾಗಿದೆ.

ಫೆಬ್ರವರಿ 6 ರಂದು ಪ್ರಧಾನಿಗಳಿಂದ ಘಟಕ ಉದ್ಘಾಟನೆ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ಒಂದು ತಿಂಗಳ ಅಂತರದಲ್ಲಿ ಮೂರನೇ ಬಾರಿಗೆ ರಾಜ್ಯಕ್ಕೆ ಭೇಟಿ ಕೊಡುತ್ತಿದ್ದಾರೆ. ಹೈದರಾಬಾದ್ ಕರ್ನಾಟಕ, ಕಿತ್ತೂರು ಕರ್ನಾಟಕದ ಬಳಿಕ ದಕ್ಷಿಣ ಕರ್ನಾಟಕದತ್ತ ಮೋದಿ ಚಿತ್ತಹರಿಸಿದ್ದು, ಇನ್ನೊಂದೆಡೆ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲೂ ಮೋದಿ ಮತ ಭೇಟೆಗೆ ರೆಡಿಯಾಗಿದ್ದಾರೆ. ಇದೇ ವೇಳೆ, ಜಲಜೀವನ್ ಮಿಷನ್​​​​​​ನ ಹಲವು ಯೋಜನೆಗಳ ಶಿಲಾನ್ಯಾಸವನ್ನು ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ.

ಹೆಚ್ಎಎಲ್ ಹೆಲಿಕಾಪ್ಟರ್ ಘಟಕದ ವಿಶೇಷತೆ ಏನು?: ಹೆಚ್ಎಎಲ್ ಘಟಕದಲ್ಲಿ ಸದ್ಯಕ್ಕೆ 3000 ಕೆಜಿ ತೂಕದ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ನಿರ್ಮಾಣ ಮಾಡಲಿದೆ. ಈ ಲಘು ಹೆಲಿಕಾಪ್ಟರ್​​ನಲ್ಲಿ ಐದಾರು ಮಂದಿ ಪ್ರಯಾಣಿಸಬಹುದು. ಭೂಸೇನೆ ಮತ್ತು ವಾಯು ಸೇನೆಯಲ್ಲಿ ಇದನ್ನು ಬಳಕೆ ಮಾಡಲಾಗುವುದು. ಹೆಚ್ಎಎಲ್ ತುಮಕೂರಿನಲ್ಲಿನ ಕಾರ್ಖಾನೆ ಸುಮಾರು 610 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ.

ಹೆಚ್‌ಎಲ್‌ ಪ್ರಕಾರ, ಈ ಕಾರ್ಖಾನೆಯು ಉದ್ಯಮದ 4.0 ಮಾನದಂಡಗಳ ಮೇಲೆ ನಿರ್ಮಿಸಲಾಗಿದೆ. ಐಟಿ ಸೇವೆಗಳು, ಇಂಟಿಗ್ರೇಟೆಡ್ ಬಿಲ್ಡಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್ ಎಲ್ಲ ಸೇವೆಗಳ ಸಂಪೂರ್ಣ ನಿಯಂತ್ರಣ ಮತ್ತು ಮೇಲ್ವಿಚಾರಣೆ ಹೊಂದಿರುವ ಸಂಪೂರ್ಣ ಕ್ಯಾಂಪಸ್‌ನ ಕಾರ್ಯಾಚರಣೆಯನ್ನು ಈ ಕೇಂದ್ರ ಹೊಂದಿದೆ.

ಸೌಲಭ್ಯದ ಮೊದಲ ಹೆಲಿಕಾಪ್ಟರ್, ಲಘು ಉಪಯುಕ್ತತೆ ಒಂದು ಹೆಲಿಕಾಪ್ಟರ್ ಈಗಾಗಲೇ ತಯಾರಿಸಲ್ಪಟ್ಟಿದೆ. ಇದನ್ನು ಉದ್ಘಾಟನೆ ಸಮಯದಲ್ಲಿ ಅದನ್ನು ಹೊರತರಲಾಗುತ್ತದೆ. ಈ ಹೊಸ ಕಾರ್ಖಾನೆಗೆ ಜನವರಿ 2016ರಲ್ಲಿ ಪ್ರಧಾನ ಮಂತ್ರಿ ಮೋದಿ ಅಡಿಪಾಯ ಹಾಕಿದ್ದರು. ಲಘು ಉಪಯುಕ್ತತೆಯ ಹೆಲಿಕಾಪ್ಟರ್‌ಗಳನ್ನು ಹಾಗೂ ಅಂತಿಮವಾಗಿ ರಷ್ಯಾದ ಕಮೊವ್‌ 226 ಹೆಲಿಕಾಪ್ಟರ್‌ಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಹಂತ 1ರ ಕಾರ್ಯಾಚರಣೆಗಳ ಭಾಗವಾಗಿ ವರ್ಷಕ್ಕೆ 30 ಲಘು ಉಪಯುಕ್ತತೆಯ ಹೆಲಿಕಾಪ್ಟರ್‌ಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ. ಅಷ್ಟೇ ಅಲ್ಲದೆ ವರ್ಷಕ್ಕೆ 60 ಚಾಪರ್‌ಗಳಿಗೆ ಇದನ್ನು ಹೆಚ್ಚಳ ಮಾಡಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ : ಹೆಚ್‌ಎಎಲ್‌ ಹೆಲಿಕಾಪ್ಟರ್ ತಯಾರಿಕಾ ಘಟಕ ವಿಸ್ತರಣೆಗೆ ಪ್ರಸ್ತಾವನೆ: ಜಿ.ಬಸವರಾಜ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.