ETV Bharat / state

ಯುವಕರು ತಮ್ಮ ದೇಶಪ್ರೇಮವನ್ನು ವಿಶ್ವಕ್ಕೆ ತೋರಿಸಿ:  ನಿವೃತ್ತ ಯೋಧ ಪಂಚಾಕ್ಷರಯ್ಯ ಕರೆ

ಪ್ರತಿಯೊಬ್ಬ ಸೈನಿಕರ ಜೀವನವು ವಿರೋಚಿತವಾಗಿರುತ್ತದೆ. ಪ್ರತಿಕ್ಷಣ ಸಾವು-ಬದುಕಿನ ನಡುವೆಯೂ ದೇಶಕ್ಕಾಗಿ ಹೋರಾಡುತ್ತಾರೆ. ಯುವಕರು ದೇಶದ ಬಗ್ಗೆ ತಮಗಿರುವ ಪ್ರೇಮವನ್ನು ವಿಶ್ವಕ್ಕೆ ತೋರಿಸಬೇಕು ಎಂದು ನಿವೃತ್ತ ಸೇನಾನಿ ಪಂಚಾಕ್ಷರಯ್ಯ ಅಭಿಪ್ರಾಯಪಟ್ಟರು.

author img

By

Published : Jul 27, 2019, 3:40 AM IST

ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದ ಉದ್ಘಾಟನೆ ಮಾಡಿದ ನಿವೃತ್ತ ಸೇನಾನಿ ಪಂಚಾಕ್ಷರಯ್ಯ

ತುಮಕೂರು: ನಾವು ದೇಶವನ್ನು ಪ್ರೀತಿಸುತ್ತೇವೆ ಎಂದು ಹೇಳುವುದಷ್ಟೇ ಅಲ್ಲ, ಅದನ್ನು ಮಾಡಿ ತೋರಿಸಬೇಕು. ದೇಶದ ರಕ್ಷಣೆಗಾಗಿ ಪ್ರಾಣ ನೀಡಲು ಸದಾ ಸಿದ್ಧರಿರಬೇಕು ಎಂದು ನಿವೃತ್ತ ಸೇನಾನಿ ಪಂಚಾಕ್ಷರಯ್ಯ ಕರೆ ನೀಡಿದರು.

ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ ಪಂಚಾಕ್ಷರಯ್ಯ ಮಾತನಾಡಿದರು

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಡೆದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಸೈನಿಕರ ಜೀವನವು ವಿರೋಚಿತವಾಗಿರುತ್ತದೆ. ಪ್ರತಿಕ್ಷಣ ಸಾವು-ಬದುಕಿನ ನಡುವೆಯೂ ದೇಶಕ್ಕಾಗಿ ಹೋರಾಡುತ್ತಾರೆ. ಯುವಕರು ದೇಶದ ಬಗ್ಗೆ ತಮಗಿರುವ ಪ್ರೇಮವನ್ನು ವಿಶ್ವಕ್ಕೆ ತೋರಿಸಬೇಕು ಎಂದು ನುಡಿದರು.

ಉಪನ್ಯಾಸಕ ರಾಜೇಶ್ ಮಾತನಾಡಿ, ಆಗಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಆದೇಶದ ಮೇರೆಗೆ ಆಪರೇಷನ್ ವಿಜಯ್ ಎಂಬ ಹೆಸರಿನಲ್ಲಿ ಯುದ್ಧವನ್ನು ಘೋಷಿಸಲಾಯಿತು. ಆ ಯುದ್ಧವೇ ಕಾರ್ಗಿಲ್ ಯುದ್ಧ. ಸೈನಿಕರು ಯುದ್ಧವನ್ನು ವೃತ್ತಿ ಎಂದು ಪರಿಗಣಿಸದೆ, ದೇಶಭಕ್ತಿಯ ಕೆಲಸವೆಂದು ಪರಿಗಣಿಸಿ, ಬಲಿದಾನ ಮಾಡುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು ಎಂದು ನೆನಪಿಸಿಕೊಂಡರು.

Intro:ತುಮಕೂರು: ನಾವು ದೇಶವನ್ನು ಪ್ರೀತಿಸುತ್ತೇವೆ ಎಂದು ಹೇಳುವುದಷ್ಟೇ ಅಲ್ಲ, ಅದನ್ನು ತೋರಿಸಬೇಕು, ದೇಶದ ರಕ್ಷಣೆಗಾಗಿ ಪ್ರಾಣ ನೀಡಲು ಸಿದ್ಧವಿದ್ದೇವೆ ಎಂಬ ಕಾರ್ಯಗಳನ್ನು ಮಾಡುವ ಮೂಲಕ ವಿಶ್ವಕ್ಕೆ ತೋರಿಸಬೇಕು ಎಂದು ನಿವೃತ್ತ ಸೇನಾನಿ ಪಂಚಾಕ್ಷರಯ್ಯ ಅಭಿಪ್ರಾಯಪಟ್ಟರು.

Body:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಸೈನಿಕರ ಜೀವನವು ವಿರೋಚಿತವಾಗಿರುತ್ತದೆ, ಸಾವು-ಬದುಕಿನ ನಡುವೆ ಪ್ರತಿಯೊಂದು ಕ್ಷಣವೂ ದೇಶಕ್ಕಾಗಿ ಹೋರಾಡುತ್ತಾರೆ.
ಅದೇ ರೀತಿ ತನ್ನ ಜೀವನದಲ್ಲಿಯೂ ಕೆಲವೊಂದು ಘಟನೆಗಳು ನಡೆದಿವೆ ಎಂದು ಅವುಗಳನ ನೆನಪು ಬಿಚ್ಚಿಟ್ಟರು. ನಾವು ಪ್ರೀತಿಸುತ್ತೇವೆ ಎಂದರೆ ಅದನ್ನು ಕೇವಲ ಮಾತಿನಲ್ಲಿ ಅಥವಾ ತೋರ್ಪಡಿಕೆ ಯಲ್ಲಿ ಹೇಳುವುದಿಲ್ಲ. ಇಡೀ ವಿಶ್ವಕ್ಕೆ ದೇಶದ ಬಗ್ಗೆ ಇರುವ ರಾಷ್ಟ್ರಪ್ರೇಮವನ್ನು ನಾವು ದೇಶದ ರಕ್ಷಣೆ ಮಾಡುವ ಮೂಲಕ ತೋರ್ಪಡಿಸಬೇಕು ಎಂದು ಯುವಕರಿಗೆ ಕಿವಿ ಮಾತನ್ನು ಹೇಳಿದರು.
ಬೈಟ್: ಪಂಚಾಕ್ಷರಯ್ಯ, ನಿವೃತ್ತ ಸೇನಾನಿ.
ಉಪನ್ಯಾಸಕ ರಾಜೇಶ್ ಮಾತನಾಡಿ, ಆಗಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಆದೇಶದ ಮೇರೆಗೆ ಆಪರೇಷನ್ ವಿಜಯ್ ಎಂಬ ಹೆಸರಿನಲ್ಲಿ ಯುದ್ಧವನ್ನು ಘೋಷಿಸಲಾಯಿತು, ಆ ಯುದ್ಧವೇ ಕಾರ್ಗಿಲ್ ಯುದ್ಧ. ಸೈನಿಕರು ಯುದ್ಧವನ್ನು ವೃತ್ತಿ ಎಂದು ಪರಿಗಣಿಸದೆ, ದೇಶಭಕ್ತಿಯ ಕೆಲಸವೊಂದು ಕಾರ್ಗಿಲ್ನಲ್ಲಿ ಜೀವ ಬಲಿದಾನ ಮಾಡಿ, ಭಾರತಕ್ಕೆ ಜಯ ತಂದುಕೊಟ್ಟರು.
ಆಗಿನ ಪ್ರಧಾನ ಮಂತ್ರಿ ವಾಜಪೇಯಿ ಯುದ್ಧ ಸ್ಥಳಕ್ಕೆ ಭೇಟಿ ನೀಡಿ, ಸೈನಿಕರನ್ನು ಹುರಿದುಂಬಿಸುವ ಕಾರ್ಯ ಮಾಡುತ್ತಾರೆ. ಆಗ ಯುದ್ಧ ಮತ್ತಷ್ಟು ವೇಗಗೊಳ್ಳುತ್ತದೆ, ಈ ಕಾರ್ಗಿಲ್ ಯುದ್ಧದಲ್ಲಿ ಯುವ ಸೈನಿಕರು ಕೆಚ್ಚೆದೆಯ ಹೋರಾಟ ನಡೆಸಿ ಜಯ ತಂದುಕೊಟ್ಟರು ಎಂದರು.
ಇಂದಿನ ಈ ಕಾರ್ಯಕ್ರಮ ಕೇವಲ ಯುದ್ಧದ ನೆನಪು ಮಾತ್ರವಲ್ಲ, ಸೇನೆಯ ತಿಳುವಳಿಕೆಯ ಮೂಲಕ ದೇಶದ ಮೇಲಿನ ಪ್ರೀತಿ, ವಿಶ್ವಾಸ ಹೆಚ್ಚಾಗಬೇಕು ಎಂಬುದು ಎಂದು ಅಭಿಪ್ರಾಯಪಟ್ಟರು.
ಬೈಟ್: ರಾಜೇಶ್, ಉಪನ್ಯಾಸಕ

Conclusion:ವರದಿ
ಸುಧಾಕರ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.