ETV Bharat / bharat

ತಂದೆಯ ನಿವೃತ್ತಿ ಆದೇಶಕ್ಕೆ ಮಗನ ಸಹಿ: ಅಪ್ಪನಿಗಾಗಿ ಲಕ್ಷಗಳ ಕೆಲಸ ಬಿಟ್ಟಿದ್ದ ಪುತ್ರ - SON SIGNED FATHER RETIREMENT ORDER - SON SIGNED FATHER RETIREMENT ORDER

ರಾಜಸ್ಥಾನದಲ್ಲಿ ತಂದೆಯ ನಿವೃತ್ತಿ ಆದೇಶಕ್ಕೆ ಮಗ ಸಹಿ ಹಾಕಿದ ಅಪರೂಪದ ಘಟನೆ ವರದಿಯಾಗಿದೆ. ಹಿರಿಯ ಐಎಎಸ್ ಅಧಿಕಾರಿ ಸನ್ವರ್ಮಲ್ ವರ್ಮಾ ಅವರ ಪುತ್ರ ಕನಿಷ್ಕ ಕಟಾರಿಯಾ ನಿವೃತ್ತಿ ಆದೇಶಕ್ಕೆ ಸಹಿ ಹಾಕಿದ್ದಾರೆ.

Son Signed Father Retirement Order
ತಂದೆಯ ನಿವೃತ್ತಿ ಆದೇಶಕ್ಕೆ ಮಗನ ಸಹಿ : ಲಕ್ಷ ಲಕ್ಷದ ಸಂಬಳ ಬಿಟ್ಟು UPSC ಪರೀಕ್ಷೆ ಬರೆದ್ರು (ETV Bharat)
author img

By ETV Bharat Karnataka Team

Published : Oct 4, 2024, 9:18 AM IST

Updated : Oct 4, 2024, 10:05 AM IST

ಜೈಪುರ, ರಾಜಸ್ಥಾನ: ತಂದೆಯ ನಿವೃತ್ತಿ ಆದೇಶಕ್ಕೆ ಮಗ ಸಹಿ ಮಾಡುವುದನ್ನು ಕೇಳಲು ಎಷ್ಟು ಚೆನ್ನಾಗಿದೆಯಲ್ಲವೇ?. ಇಂತಹ ಅಪರೂಪದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಭರತ್‌ಪುರ ವಿಭಾಗೀಯ ಆಯುಕ್ತರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಸನ್ವರ್ಮಲ್ ವರ್ಮಾ ಅವರ ನಿವೃತ್ತಿ ಆದೇಶಕ್ಕೆ ಕಾರ್ಮಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಹುದ್ದೆಯಲ್ಲಿರುವ ಅವರ ಪುತ್ರ ಕನಿಷ್ಕ ಕಟಾರಿಯಾ ಸಹಿ ಹಾಕಿದ್ದಾರೆ. ಇದನ್ನು ಕನಿಷ್ಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆ ರಾಜಸ್ಥಾನದ ಅಧಿಕಾರಿಗಳ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.

ಇಬ್ಬರಿಗೂ ಒಂದೇ ಸಮಯದಲ್ಲಿ ಬಡ್ತಿ ಸಿಕ್ಕಿತ್ತು. ತಂದೆ ಮತ್ತು ಮಗನ ಸಂಬಳ ಏಕಕಾಲದಲ್ಲಿ ಹೆಚ್ಚಳವಾಗಿತ್ತು. ಸನ್ವರ್ಮಲ್ ವರ್ಮಾ ಸಂಬಳವನ್ನು ಆಯ್ಕೆ ವೇತನ ಶ್ರೇಣಿಯಿಂದ ಸೂಪರ್‌ಟೈಮ್ ಪೇ ಸ್ಕೇಲ್‌ಗೆ (ಪೇ ಮ್ಯಾಟ್ರಿಕ್ಸ್‌ನಲ್ಲಿ ಹಂತ 14) ಹೆಚ್ಚಿಸಲಾಗಿದ್ದರೆ, ಅದೇ ಸಮಯದಲ್ಲಿ, ಕನಿಷ್ಕ ಕಟಾರಿಯಾ ಅವರ ಸಂಬಳವನ್ನು ಜೂನಿಯರ್ ವೇತನ ಶ್ರೇಣಿಯಿಂದ ಹಿರಿಯ ವೇತನ ಶ್ರೇಣಿಗೆ (ಪೇ ಮ್ಯಾಟ್ರಿಕ್ಸ್‌ನಲ್ಲಿ 11 ನೇ ಹಂತ) ಹೆಚ್ಚಿಸಲಾಗಿದೆ.

Son Signed IAS Father Retirement Order
ತಂದೆಯ ನಿವೃತ್ತಿ ಆದೇಶಕ್ಕೆ ಮಗನ ಸಹಿ - ( ಈ ಟಿವಿ ಭಾರತ)

ಸನ್ವರ್ಮಲ್ ಶರ್ಮಾ ಅವರ ನಿವೃತ್ತಿ ಆದೇಶವನ್ನು ಸೆಪ್ಟೆಂಬರ್ 28 ರಂದು ಹೊರಡಿಸಲಾಗಿದೆ. ಜೈಪುರ ವಿಭಾಗೀಯ ಆಯುಕ್ತ ಐಎಎಸ್ ರಶ್ಮಿ ಗುಪ್ತಾ ಅವರಿಗೆ ಭರತ್‌ಪುರ ವಿಭಾಗೀಯ ಆಯುಕ್ತರಾಗಿ ಹೆಚ್ಚುವರಿ ಪ್ರಭಾರ ನೀಡಲಾಗಿದೆ. IAS, IPS, RAS ಅಧಿಕಾರಿಗಳ ವರ್ಗಾವಣೆ, ನಿವೃತ್ತಿ ಮತ್ತು ಇತರ ಸೇವೆಗಳಿಗೆ ಸಂಬಂಧಿಸಿದ ಆದೇಶಗಳಿಗೆ ಜಂಟಿ ಕಾರ್ಯದರ್ಶಿ ಮಾತ್ರ ಸಹಿ ಮಾಡುತ್ತಾರೆ.

ಲಕ್ಷ ಲಕ್ಷ ಸಂಬಳ ಬಿಟ್ಟು ಯುಪಿಎಸ್​​ಸಿ ಪರೀಕ್ಷೆ: ತಂದೆ ಮತ್ತು ಸಹೋದರ ಕೂಡಾ IAS ಆಫೀಸರ್​. ಕೋಟಾದಲ್ಲಿ ಓದಿದ ಕನಿಷ್ಕ 2010ರಲ್ಲಿ ಜೆಇಇಯಲ್ಲಿ 44ನೇ ರ‍್ಯಾಂಕ್ ಪಡೆದುಕೊಂಡಿದ್ದರು. ನಂತರ ಐಐಟಿ ಬಾಂಬೆಯಲ್ಲಿ ಬಿ.ಟೆಕ್ ಕಂಪ್ಯೂಟರ್ ಇಂಜಿನಿಯರಿಂಗ್ ಪೂರ್ಣಗೊಳಿಸಿದರು. 2016 ರವರೆಗೆ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದರು. ನಂತರ ಬೆಂಗಳೂರಿನ QPLUM ನಲ್ಲಿ ಡೇಟಾ ಸೈಂಟಿಸ್ಟ್ ಆಗಿಯೂ ಕೆಲ ಕಾಲ ಕಾರ್ಯನಿರ್ವಹಿಸಿದರು. ಆದರೆ ಅವರಿಗೆ ಸಮಾಧಾನ ಇರಲಿಲ್ಲ. ದೇಶಕ್ಕಾಗಿ ಏನನ್ನಾದರೂ ಮಾಡಬೇಕು ಎಂಬ ತಂದೆಯ ಆಸೆಯಂತೆ ಲಕ್ಷಗಟ್ಟಲೆ ಸಂಬಳವನ್ನು ತ್ಯಜಿಸಿ 2018 ರಲ್ಲಿ UPSC ಪರೀಕ್ಷೆ ಬರೆದರು. ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್‌ಸಿಯಲ್ಲಿ ರ‍್ಯಾಂಕ್ ಪಡೆದುಕೊಂಡರು.

ಕನಿಷ್ಕ 2019 ರ ಬ್ಯಾಚ್‌ನಲ್ಲಿ ಐಎಎಸ್ ಆದರು. ಮಸ್ಸೂರಿಯಲ್ಲಿ ತರಬೇತಿ ಪಡೆದ ನಂತರ ಅವರು ಬಿಕಾನೇರ್‌ನಲ್ಲಿ ಸಹಾಯಕ ಕಲೆಕ್ಟರ್ ಆಗಿ ಕೆಲಸ ಮಾಡಿದರು. ನಂತರ ಅವರು ಕೋಟಾದ ರಾಮಗಂಜ್ ಮಂಡಿ ಎಸ್‌ಡಿಎಂ ಆಗಿ ಕಾರ್ಯನಿರ್ವಹಿಸಿದರು. ಆ ಬಳಿಕ ಬಡ್ತಿ ಪಡೆದ ಅವರು ಕಾರ್ಮಿಕ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.

ಇದನ್ನು ಓದಿ: ಹೆದ್ದಾರಿಯಲ್ಲಿ ಭೀಕರ ಅಪಘಾತ 10 ಮಂದಿಯ ದುರ್ಮರಣ, ಮೂವರ ಸ್ಥಿತಿ ಗಂಭೀರ - Highway accident 10 workers killed

ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ, ಬಂಗಾಳಿ ಭಾಷೆಗಳಿಗೂ ಶಾಸ್ತ್ರೀಯ ಸ್ಥಾನಮಾನ - classical languages

Last Updated : Oct 4, 2024, 10:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.