ETV Bharat / state

ತುಮಕೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಆಸೆ ಇದೆ: ಸಚಿವ ರಾಜಣ್ಣ

ನಾನು ಮುಂದೆ ರಾಜ್ಯದ ವಿಧಾನಸಭೆ ಸೇರಿದಂತೆ ಯಾವ ಚುನಾವಣೆಗೂ ನಿಲ್ಲಲ್ಲ ಎಂದು ಸಚಿವ ಕೆ ಎನ್​ ರಾಜಣ್ಣ ತಿಳಿಸಿದ್ದಾರೆ.

Etv Bharatminister-rajanna-expressed-desire-to-contest-lok-sabha-election-from-tumkur
ತುಮಕೂರು ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಸೆ ಇದೆ: ಸಚಿವ ರಾಜಣ್ಣ
author img

By ETV Bharat Karnataka Team

Published : Nov 15, 2023, 8:12 PM IST

Updated : Nov 15, 2023, 8:18 PM IST

ಸಚಿವ ಕೆ ಎನ್​ ರಾಜಣ್ಣ ಪ್ರತಿಕ್ರಿಯೆ

ತುಮಕೂರು: "ನನಗೆ ತುಮಕೂರು ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಆಸೆ ಇದೆ. ಹೈಕಮಾಂಡ್​ನವರು ಸ್ಪರ್ಧೆಗೆ ಅವಕಾಶ ನೀಡಿದರೆ ನಿಲ್ಲುತ್ತೇನೆ. ಇಲ್ಲ ಎಂದರೆ ಸುಮ್ಮನ್ನೇ ಇರ್ತೇನಿ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದರು. ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ಮುಂದೆ ರಾಜ್ಯ ವಿಧಾನಸಭೆ ಸೇರಿದಂತೆ ಯಾವ ಚುನಾವಣೆಗೂ ನಿಲ್ಲಲ್ಲ, ಈಗ ಲೋಕಸಭೆಯ ಅನುಭವಕ್ಕಾಗಿ ಚುನಾವಣೆ ಸ್ಪರ್ಧಿಸಲು ಬಯಸಿದ್ದೇನೆ" ಎಂದು ತಿಳಿಸಿದರು.

"ರಾಜ್ಯದಲ್ಲಿ ಬಹಳ ದಿನದಿಂದ ಬಿಜೆಪಿಯ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕರ ಸ್ಥಾನ ನೆನೆಗುದಿಗೆ ಬಿದಿತ್ತು. ಈಗ ಕೇಂದ್ರ ಬಿಜೆಪಿ ಮುಖಂಡರಿಗೆ ಜ್ಞಾನೋದಯ ಆಗಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಅವರ ನೇಮಕದೊಂದಿಗೆ ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಎದ್ದಿದೆ. ಯಾವುದೋ ನಾಲ್ಕು ಬೈ ಎಲೆಕ್ಷನ್ ಗೆಲ್ಲಿಸಿದ್ದ ಮಾತ್ರಕ್ಕೆ ವಿಜಯೇಂದ್ರ ಅವರಿಗೆ ದೊಡ್ಡ ಸಂಘಟನಾ ಚತುರ ಎಂದು ಸರ್ಟಿಫಿಕೇಟ್ ಕೊಡೋಕೆ ಆಗಲ್ಲ" ಎಂದರು.

"ಜೆಡಿಎಸ್-ಬಿಜೆಪಿ ಸೀಟು ಹಂಚಿಕೆ ಮತ್ತು ಇತರ ವಿಚಾರಗಳಿಂದ ಅವರ ಪಾರ್ಟಿಯಲ್ಲಿ ಗೊಂದಲ ಇದೆ. ವಿಜಯೇಂದ್ರ ಅವರಿಗೆ ಯಡಿಯೂರಪ್ಪ ಹೆಸರೇ ಬಂಡವಾಳ. ಮುಂದಿನ ದಿನಗಳಲ್ಲಿ ನೋಡೋಣ. ಪಕ್ಷ ಕಟ್ಟುವುದರ ಜೊತೆಗೆ ಹೇಗೆ ಜನರ ವಿಶ್ವಾಸ ಗಳಿಸುತ್ತಾರೆ ಎಂಬುದು ಮುಖ್ಯ. ಪಕ್ಷ ಕಟ್ಟಿದಾಕ್ಷಣಕ್ಕೆ ವಿಶ್ವಾಸಗಳಿಸದೇ ಇದ್ದರೆ ಏನು ಪ್ರಯೋಜನ, ಮುಂದು ಕಾದು ನೋಡಬೇಕು" ಎಂದರು.

ವಿ ಸೋಮಣ್ಣ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, "ಸೋಮಣ್ಣ ಅವರು ಡಿ. 6ನೇ ತಾರೀಖು ಸಿದ್ದಗಂಗಾ ಮಠದಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಕಾರ್ಯಕ್ರಮಕ್ಕೆ ಬರಬೇಕು ಎಂದು ನನಗೆ ಪೋನ್ ಮಾಡಿದ್ದರು. ನಾನು ಅವಾಗ ಅಸೆಂಬ್ಲಿ ಇರುತ್ತೆ ಅಂದೆ, ನಾನೂ ಆ ಕಾರ್ಯಕ್ರಮಕ್ಕೆ ಹೋಗುವ ಅಭಿಲಾಷೆ ಇಟ್ಟುಕೊಂಡಿದ್ದೇನೆ. ನೋಡೋಣ ವಿಧಾನಸಭೆ ಕಾರ್ಯಕಲಾಪ ಆದ ಮೇಲೆ ಸಮಯ ಇದ್ದರೆ ಹೋಗುತ್ತೇನೆ" ಎಂದರು.

"ಇದೊಂಥರ(ಕಾಂಗ್ರೆಸ್​) ಸಮುದ್ರ ಇದ್ದಂಗೆ, ಇದಕ್ಕೆ ಗಂಗಾ ನದಿ ನೀರು ಬರುತ್ತದೆ. ಚರಂಡಿ ನೀರು ಬರುತ್ತದೆ. ಸಮುದ್ರದಲ್ಲಿ ಅಮೃತನೂ ಇದೆ, ವಿಷನೂ ಇದೆ. ಅಮೃತ ಸಿಗೋರಿಗೆ ಅಮೃತ ಸಿಗುತ್ತೆ, ವಿಷ ಸಿಗೋರಿಗೆ ವಿಷ ಸಿಗುತ್ತೆ. ಕಾಂಗ್ರೆಸ್ ಮಾಸ್​ ಬೇಸ್ಡ್​ ಪಾರ್ಟಿ, ಕೇಡರ್ ಬೇಸ್ಡ್​ ಪಾರ್ಟಿ ಅಲ್ಲ. ಇದೊಂಥರ ದೊಡ್ಡ ಪ್ರವಾಹ ಇದ್ದಂಗೆ, ಹೋಗ್ತಾ ಇರುತ್ತೆ" ಎಂದು ಹೇಳಿದರು.

ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ಸೇರುವ ವಿಚಾರವಾಗಿ ಮಾತನಾಡಿ, "ನನಗೆ ಬೇರೆ ಅವರಿಂದ ಅವರು ಕಾಂಗ್ರೆಸ್ ಸೇರುವ ಒಲವು ತೋರಿದ್ದಾರೆ ಅನ್ನೋ ಮಾಹಿತಿ ಇದೆ. ಅದನ್ನ ಸಂಪೂರ್ಣವಾಗಿ ಅಲ್ಲಗೆಳೆಯೋಕೆ ಆಗಲ್ಲ ಮತ್ತು ಒಪ್ಪಿಕೊಳ್ಳುವುದಕ್ಕೂ ಆಗಲ್ಲ. ಪರಮೇಶ್ವರ್ ಅವರು ನನ್ನ ಬಳಿಯೂ ಬಹಳಷ್ಟು ಜನರು ಮುದ್ದಹನುಮೇಗೌಡ ಕಾಂಗ್ರೆಸ್​ ಸೇರುವ ಬಗ್ಗೆ ಪ್ರಸ್ತಾವಣೆ ಇಟ್ಟಿದ್ದಾರೆ ಎಂದು ಹೇಳಿದ್ದರು" ಎಂದು ತಿಳಿಸಿದರು.

ಇದನ್ನೂ ಓದಿ: ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ವಿಜಯೇಂದ್ರ ಆಯ್ಕೆ ಒಳ್ಳೆಯ ಬೆಳವಣಿಗೆ : ಎಸ್ ಟಿ ಸೋಮಶೇಖರ್

Last Updated : Nov 15, 2023, 8:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.