ETV Bharat / state

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟದ ಮೈದಾನಗಳ ಕೊರತೆ

ಪ್ರಸ್ತುತ ತುಮಕೂರು ನಗರದಲ್ಲಿ ಜೂನಿಯರ್ ಕಾಲೇಜು ಮೈದಾನವೇ ಕ್ರೀಡಾಪಟುಗಳು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಇರುವ ಏಕಮಾತ್ರ ಆಟದ ಮೈದಾನವಾಗಿದೆ.

Lack of playgrounds in tumkur !
ಆಟದ ಮೈದಾನಗಳ ಕೊರತೆ!
author img

By

Published : Apr 18, 2021, 1:01 PM IST

ತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿ ಆಟದ ಮೈದಾನಗಳ ಅಗತ್ಯತೆ ಇದೆ. ಸದ್ಯ ಆಟದ ಮೈದಾನಗಳ ಕೊರತೆಯಿದ್ದು, ಈ ಕೊರತೆಯನ್ನು ನೀಗಿಸಲು ಮಹಾನಗರ ಪಾಲಿಕೆ ಗಮನಹರಿಸಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಆಟದ ಮೈದಾನಗಳಿಗೆ ಸ್ಥಳ ಗುರುತಿಸಿ ಆರಂಭಿಸಲು ಸಿದ್ಧತೆ ನಡೆಸಿದೆ.

ತುಮಕೂರಿನಲ್ಲಿ ಆಟದ ಮೈದಾನಗಳ ಕೊರತೆ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೆ 3 ದೊಡ್ಡ ಆಟದ ಮೈದಾನಗಳಿವೆ. ಇನ್ನೂ ಎರಡು ಆಟದ ಮೈದಾನಗಳ ಅವಶ್ಯಕತೆ ಇದೆ. ಅದರಲ್ಲಿ ಒಂದು ಫುಟ್ಬಾಲ್ ಆಟದ ಮೈದಾನಕ್ಕಾಗಿ ಈಗಾಗಲೇ ಮಹಾನಗರ ಪಾಲಿಕೆ ಕುಣಿಗಲ್ ರಸ್ತೆಯಲ್ಲಿ ಆರಂಭಿಸಲು ಸಿದ್ಧತೆ ನಡೆಸಿದೆ.

ಪ್ರಸ್ತುತ ಸ್ಮಾರ್ಟ್ ಸಿಟಿ ಯೋಜನೆಯಡಿ ಜಿಲ್ಲಾ ಕ್ರೀಡಾಂಗಣವನ್ನು ಸ್ಮಾರ್ಟ್ ಕ್ರೀಡಾಂಗಣವನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾಮಗಾರಿ ಭರದಿಂದ ಸಾಗಿದೆ. ಇದಲ್ಲದೆ ತುಮಕೂರು ನಗರದಲ್ಲಿ ಜೂನಿಯರ್ ಕಾಲೇಜು ಮೈದಾನದವೇ ಪ್ರಸ್ತುತ ಕ್ರೀಡಾಪಟುಗಳು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಇರುವ ಏಕಮಾತ್ರ ಆಟದ ಮೈದಾನವಾಗಿದೆ.

ಇದನ್ನೂ ಓದಿ: ಆಹಾರ ಪದಾರ್ಥಗಳಲ್ಲಿ ರುಚಿಯೊಂದಿಗೆ ಶುಚಿತ್ವವೂ ಅಗತ್ಯ.. ದ.ಕ. ಫುಡ್ ಇನ್ಸ್​ಪೆಕ್ಟರ್​ಗಳ ಕಾರ್ಯವೈಖರಿ ಹೀಗಿದೆ

ತುಮಕೂರು ನಗರದಲ್ಲಿ 3 ಆಟದ ಮೈದಾನಗಳ ಅವಶ್ಯಕತೆ ಇದೆ. ಇದಕ್ಕಾಗಿ ತುಮಕೂರು ಮಹಾನಗರ ಪಾಲಿಕೆ ಗಮನಹರಿಸಬೇಕಿದೆ. ವಿಧಿಯಿಲ್ಲದೆ ಕ್ರೀಡಾಪಟುಗಳು ಮೇಲೆ ತಿಳಿಸಿದ ಆಟದ ಮೈದಾನವನ್ನೇ ಅವಲಂಬಿಸಬೇಕಿದೆ. ಹೆಚ್ಚು ಕ್ರೀಡಾಪಟುಗಳು ಮೈದಾನದಲ್ಲಿ ಏಕಕಾಲದಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಕಿರಿಕಿರಿಯ ವಾತಾವರಣ ನಿರ್ಮಾಣವಾಗಲಿದೆ. ಹೀಗಾಗಿ ನಗರ ವ್ಯಾಪ್ತಿಯಲ್ಲಿ ಅವಶ್ಯಕತೆ ಇರೋ ಆಟದ ಮೈದಾನಗಳನ್ನು ಮೀಸಲಿಡಲು ಮಹಾನಗರಪಾಲಿಕೆ ಸದಸ್ಯರು ಸಭೆಯಲ್ಲಿ ಚರ್ಚಿಸಲು ನಿರ್ಧರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.