ತುಮಕೂರು: ಸರ್ಕಾರ ಲಾಕ್ ಡೌನ್ ಮಾಡುವುದರ ಬಗ್ಗೆ ಮದ್ಯದಂಗಡಿ ಮಾಲೀಕರಿಗೆ ಕನಸು ಬಿದ್ದಿತ್ತಾ? ಅಂಗಡಿಯಲ್ಲಿರುವ ಸರಕೆಲ್ಲವನ್ನು ಒಂದೇ ಬಾರಿಗೆ ಹೇಗೆ ಮಾರಟ ಮಾಡಲು ಸಾಧ್ಯ? ಜಿಲ್ಲೆಯಲ್ಲಿರುವ ಮದ್ಯದಂಗಡಿಗಳನ್ನು ಎಂದು ಮುಚ್ಚಲಾಯಿತು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಯಿತು.ಲಾಕ್ಡೌನ್ ಸಮಯದಲ್ಲಿ ಜಿಲ್ಲೆಯಲ್ಲಿ ಮದ್ಯದಂಗಡಿಯ ಮಾಲೀಕರು ಸರ್ಕಾರದ ನಿಯಮವನ್ನು ಪಾಲಿಸದೇ ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದಾರೆ. ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿ ನಾಗರಾಜು ಅವರ ವಿರುದ್ಧ ಆಕ್ರೋಶ ಹೊರಹಾಕಿದರು.
ಲಾಕ್ ಡೌನ್ ಸಮಯದಲ್ಲಿ ಜನರೆಲ್ಲರೂ ಸೊರಗಿದ್ದರೆ, ನೀವು ಚೆನ್ನಾಗಿ ಮೆಯ್ದುಬಿಟ್ರಿ, ಸೊಂಪಾಗಿದ್ದಿರಾ. ಮದ್ಯದಂಗಡಿ ಮಾಲೀಕರಿಗೆ ಕನಸು ಬಿದಿತ್ತಾ? ಸರ್ಕಾರ ಲಾಕ್ ಡೌನ್ ಮಾಡುವುದರ ಬಗ್ಗೆ. ಅಂಗಡಿಯಲ್ಲಿರುವ ಸರಕೆಲ್ಲವನ್ನು ಒಂದೇ ಬಾರಿಗೆ ಮಾರಟ ಮಾಡಲು ಹೇಗೆ ಸಾಧ್ಯ? ನಿಮಗೆ ಮತ್ತೊಂದು ದಿನ ಸಭೆ ನಡೆಸಲಾಗುವುದು ಅಂದು ಜಿಲ್ಲೆಯಲ್ಲಿರುವ ಮದ್ಯದಂಗಡಿಗಳನ್ನು ಎಂದು ಮುಚ್ಚಲಾಯಿತು ಎಂದು ಸಂಪೂರ್ಣ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿರುವ ಎಲ್ಲ ಅಂಗಡಿಯವರು ಮದ್ಯವನ್ನು ಮಾರಾಟ ಮಾಡಿದ್ದು, ಅದರ ಹಿಂದೆ ಅಬಕಾರಿ ಇನ್ಸ್ ಪೆಕ್ಟರ್ ಗಳಿದ್ದಾರೆ ಎಂಬ ಗುಮಾನಿ ಇದೆ ಎಂದರು.
ಲಾಕ್ ಡೌನ್ ಸಮಯದಲ್ಲಿ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆಯಿಂದ ನೀಡಲಾಗಿದ್ದ ಕಿಟ್ ಗಳನ್ನು ತಮಗೆ ಬೇಕಾದವರಿಗೆ ವಿತರಣೆ ಮಾಡಿದ್ದಾರೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿ ವಿರುದ್ಧ ಅಸಮಾಧಾನ ಹೊರಹಾಕಿದರು. ಅದೇ ರೀತಿ ಕಡಿಯುವ ನೀರು, ವಸತಿ, ಕಂದಾಯ, ಆಹಾರ ನಾಗರೀಕ ಸರಬರಾಜು ಮತ್ತು ಪಡಿತರ ಚೀಟಿ, ಲೋಕೋಪಯೋಗಿ, ಮೀನುಗಾರಿಕೆ ಮುಂತಾದ ಇಲಾಖೆಗಳ ಬಗ್ಗೆ ಚರ್ಚೆ ನಡೆಸಲಾಯಿತು.