ETV Bharat / state

ಒಂದೊಂದು ಸಮುದಾಯದವ್ರಿಗೆ ಒಂದೊಂದು ಜವಾಬ್ದಾರಿ: ಇದು ಶೆಟ್ಟೀಕೆರೆಯ ಕಾರು ಹಬ್ಬದ ವಿಶೇಷ

ವಿಜಯನಗರ ಸಾಮ್ರಾಜ್ಯದ ವೇಳೆಯಲ್ಲಿ ಶುರುವಾದ ಹಬ್ಬವನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಾಂಪ್ರದಾಯಿಕ ಹಬ್ಬದ ಹಿಂದಿದೆ ಒಂದು ರೋಚಕ ಕಥೆ!

ಶೆಟ್ಟೀಕೆರೆಯ ಕಾರು ಹಬ್ಬ
author img

By

Published : Jun 19, 2019, 10:53 AM IST

ತುಮಕೂರು: ಮೈಸೂರು ದಸರಾ, ಬೆಂಗಳೂರು ಕರಗ ಮಹೋತ್ಸವದ ರೀತಿಯಲ್ಲೇ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟೀಕೆರೆಯ 'ಕಾರು ಹಬ್ಬ'ವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಹಬ್ಬ ಬಂತೆಂದರೆ ಸಾಕು ಗ್ರಾಮದ ಪ್ರತಿಯೊಬ್ಬ ಜನಾಂಗದವರಿಗೆ ಸಂಭ್ರಮ ಇಮ್ಮಡಿಯಾಗುತ್ತದೆ. ಎಲ್ಲಾ ವರ್ಗದವರು ಈ ಆಚರಣೆಯಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿ ಗ್ರಾಮದ ಶ್ರೇಯೋಭಿವೃದ್ಧಿಗೆ ಸಾಥ್ ನೀಡುತ್ತಾರೆ.

Karu Habba Celebration in Shettikere
ಶೆಟ್ಟೀಕೆರೆಯಲ್ಲಿ ನಡೆದ ಕಾರು ಹಬ್ಬ

800 ವರ್ಷಗಳ ಹಿಂದೆ ಗ್ರಾಮದ ಶ್ರೇಯಸ್ಸಿಗೆ ಬಲಿದಾನ ನೀಡಿದ ಹೆಬ್ಬಾರಯ್ಯ ಎಂಬುವರ ಸಂಕಲ್ಪವನ್ನು ಇಂದಿಗೂ ಇಲ್ಲಿನ ಗ್ರಾಮಸ್ಥರು ಮುಂದುವರೆಸಿಕೊಂಡು ಬಂದಿದ್ದಾರೆ. ಹಾಗಾಗಿ ಶೆಟ್ಟೀಕೆರೆರೆ ಕಾರು ಹಬ್ಬವನ್ನು ಗಡಿ ಕಾರು ಹಬ್ಬವೆಂದೂ ಬಣ್ಣಿಸಲಾಗುತ್ತಿದೆ. ವಿಜಯನಗರ ಸಾಮ್ರಾಜ್ಯದ ವೇಳೆಯಲ್ಲಿ ಹೆಬ್ಬಾರಯ್ಯ ಎಂಬುವರ ಬಲಿದಾನದಿಂದ ಈ ಕಾರು ಹಬ್ಬ ಶುರುವಾಗಿದ್ದು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಜ್ಯೇಷ್ಠ ಪೌರ್ಣಮಿ ದಿನದಂದು ಈ ಆಚರಣೆಯನ್ನು ನಡೆಸಲಾಗುತ್ತದೆ. ಗ್ರಾಮದ ಮಧ್ಯಭಾಗದಲ್ಲಿರೋ ಬ್ರಹ್ಮಲಿಂಗಕ್ಕೆ ವರ್ಷಕ್ಕೆ ಎರಡು ದಿನ ಮಾತ್ರ ಪೂಜೆ ನಡೆಯುವುದು ಇಲ್ಲಿನ ಮತ್ತೊಂದು ವಿಶೇಷ.

Karu Habba Celebration in Shettikere
ಸಂಭ್ರಮಕ್ಕೆ ಸಾಕ್ಷಿಯಾದ ಸ್ಥಳೀಯರು

ಮೊದಲ ದಿನ ಕರುಗಲ್ಲಿನ ಮಂಟಪಕ್ಕೆ ಸುಣ್ಣ-ಬಣ್ಣ ಬಳಿದು ಹಸಿರು ತೋರಣ, ಬೇವಿನ ಸೊಪ್ಪು ಕಟ್ಟಿ ಭತ್ತದ ತೆನೆಯನ್ನು ಹೆಣೆದು ಮಂಪಟದ ಶಿಖರದ ಸುತ್ತ ಕಟ್ಟಿ ಶಿಖರದ ಮೇಲೆ ಮೂರು ಕಳಸ ಸ್ಥಾಪಿಸಲಾಗುತ್ತದೆ. ಈ ಹಬ್ಬದ ವ್ಯವಸ್ಥೆಯಲ್ಲಿ ಎಲ್ಲಾ ಕೋಮಿನವರು ಭಾಗಿಯಾಗುತ್ತಾರೆ. ಕರಗ ಒಡೆಯುವ ಜವಾಬ್ದಾರಿ ಗೌಡಾಳಿಕೆ ಜನಾಂಗದವರಿಗೆ, ಪೂಜೆ ಮಾಡುವುದು ಬ್ರಾಹ್ಮಣ ಸಮುದಾಯದವರಿಗೆ, ಕುಂಬಾರರಿಗೆ ಕಳಸ ಹಾಗೂ ಕರಗ ಮಾಡುವ ಜವಾಬ್ದಾರಿ, ತಳವಾರರಿಗೆ ಬೇವಿನ ಸೊಪ್ಪು, ಭತ್ತದ ತೆನೆ ಕಟ್ಟುವ, ಹರಿಜನ ಜನಾಂಗದವರಿಗೆ ಮತ್ತೊಂದು ಮಗದೊಂದು ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯ ಎನ್ನುತ್ತಾರೆ ಸ್ಥಳೀಯರು.

Karu Habba Celebration in Shettikere
ಬ್ರಹ್ಮಲಿಂಗ ಮತ್ತು ಕರಗಕ್ಕೆ ಆರತಿ ಎತ್ತಿ ನಮಿಸುತ್ತಿರುವ ಮಹಿಳೆಯರು

ಕರಗ ನಡೆಯುವ ಸ್ಥಳದಲ್ಲಿನ ವ್ಯವಸ್ಥೆಯನ್ನು ಎಲ್ಲಾ ಕೋಮಿನವರು ಪೂರ್ಣಗೊಳಿಸಿದ ನಂತರ ಬ್ರಹ್ಮಲಿಂಗದ ಎದುರು ಹೊಸ ಮಡಕೆಯಲ್ಲಿ ನವಧಾನ್ಯಗಳನ್ನು ತುಂಬಿ ಬ್ರಹ್ಮಲಿಂಗಕ್ಕೆ ರುದ್ರಾಭಿಷೇಕ ನಡೆಸಲಾಗುತ್ತದೆ. 2ನೇ ದಿನ ಮಧ್ಯರಾತ್ರಿ ಗ್ರಾಮದ ಶ್ರೀ ಕೆಂಪಮ್ಮದೇವಿ, ಶ್ರೀ ಕಾಲಭೈರವೇಶ್ವರ, ಶ್ರೀ ಬಸವಣ್ಣ ಮತ್ತು ಊರಿನ ಹೋರಿಗಳ ಉತ್ಸವ ಮಾಡಲಾಗುತ್ತದೆ. ಪೂಜಾ ಸಮಯದಲ್ಲಿ ಬ್ರಹ್ಮಲಿಂಗವು ಒಂದು ಅಂಗುಲ ಮೇಲೆ ಬರಲಿದೆ ಎಂಬ ನಂಬಿಕೆಯೂ ಇಲ್ಲಿದೆ. ಕರಗ ಒಡೆಯುವರು ಸ್ಥಳಕ್ಕೆ ಬಂದು ಕರುಗಲ್ಲಿಗೆ ಪ್ರದಕ್ಷಿಣೆ ಹಾಕಿ ಬ್ರಹ್ಮಲಿಂಗ ಮತ್ತು ಕರಗಕ್ಕೆ ಆರತಿ ಎತ್ತಿ ನಮಿಸುತ್ತಾರೆ.

Karu Habba Celebration in Shettikere
ಎತ್ತುಗಳನ್ನು ಹೂಡಿಕೊಂಡು ಕರಗ ಒಡೆಯುತ್ತಿರುವುದು

ಎತ್ತುಗಳನ್ನು ಹೂಡೆದುಕೊಂಡು ಕರಗ ಒಡೆಯುವವರು ಬ್ರಹ್ಮ ಲಿಂಗಕ್ಕೆ ಕುಂಟೆಯನ್ನು ಹಾಕಿಸಿ ಧಾನ್ಯ ತುಂಬಿದ ಮಡಿಕೆಯನ್ನು ಎತ್ತುಗಳಿಗೆ ಹೂಡಿದ ಕುಂಟೆಯಿಂದ ಒಡೆಯುತ್ತಾರೆ. ಕರಗ ಒಡೆದಾಗ ಧಾನ್ಯವೆಲ್ಲಾ ಮುಂದೆ ಚೆಲ್ಲುತ್ತದೆ. ಯಾವ ಧಾನ್ಯ ಮುಂದೆ ಬಂದಿರುತ್ತದೆಯೋ ಆ ಧಾನ್ಯ ವರ್ಷದಲ್ಲಿ ಉತ್ತಮ ಬೆಳೆಯಾಗಲಿದೆ ಎಂಬುದು ಇಲ್ಲಿನ ನಂಬಿಕೆ. ಈ ವರ್ಷ ಮಡಿಕೆಯಿಂದ ಭತ್ತ ಮುಂದೆ ಬಂದಿದ್ದು, ಗ್ರಾಮದಲ್ಲಿ ಭತ್ತದ ಸಮೃದ್ಧ ಬೆಳೆ ಬರಲಿದೆ ಎಂದು ಗ್ರಾಮಸ್ಥರು ಅತ್ಯುತ್ಸಾಹದಿಂದ ಕುಣಿದಾಡಿದರು.

ಶೆಟ್ಟೀಕೆರೆಯ ಕಾರು ಹಬ್ಬ

ಈ ಕಾರು ಹಬ್ಬದ ವೇಳೆ ಸುತ್ತಮುತ್ತಲ 33 ಹಳ್ಳಿಯ ನವ ವಿವಾಹಿತರು ಕಳಸ ನೋಡಲು ಬರುವುದು ಇಲ್ಲಿಯ ವಾಡಿಕೆ. ಭತ್ತದ ತೆನೆಯನ್ನು ಕಣಜಕ್ಕೆ ಹಾಕಿದ್ರೆ ಸಮೃದ್ಧಿಯಾಗಲಿದೆ ಎಂಬ ನಂಬಿಕೆ. ಒಟ್ಟಾರೆ ಗ್ರಾಮೀಣ ಇಂತಹ ಸಂಪ್ರದಾಯಗಳು ಏಕತೆಯ ಸಂಕೇತವಾಗಿದೆ ಎಂದು ಹೇಳಬಹುದಾಗಿದೆ.

Intro:ಗ್ರಾಮೀಣ ಸೊಗಡಿನ ವಿಶಿಷ್ಟ ಸಂಪ್ರದಾಯದ ಕಾರು ಹಬ್ಬ.....
ಬಲಿದಾನದ ಸಂಕೇತವಾಗಿ ಈ ಹಬ್ಬ......

ತುಮಕೂರು
ಗ್ರಾಮೀಣ ಸೊಗಡಿನ ಹಲವು ಆಚರಣೆಗಳನ್ನು ಇಂದಿಗೂ ಕೂಡ ಅನೂಚಾನವಾಗಿ ನಡೆಯುತ್ತಿವೆ. ಅಲ್ಲದೆ ಹಲವು ವಿಶಿಷ್ಟತೆಗಳನ್ನು ಒಳಗೊಂಡಿರುತ್ತವೆ. ಅವುಗಳಲ್ಲಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟೀಕೆರೆ ಕಾರುಹಬ್ಬ ಕೂಡ ಒಂದಾಗಿದೆ. ಮೈಸೂರು ದಸರಾ, ಬೆಂಗಳುರು ಕರಗ ರೀತಿಯಲ್ಲೇ ಇಲ್ಲಿನ ಕಾರುಹಬ್ಬದ ಆಚರಣೆ ಪ್ರಖ್ಯಾತಿಗಳಿಸಿದೆ. ಈ ಹಬ್ಬದ ಆಚರಣೆ ಎಂದ್ರೆ ಗ್ರಾಮದ ಪ್ರತಿಯೊಬ್ಬ ಜನಾಂಗದವರಿಗೆ ಸಂಭ್ರಮ ಇಮ್ಮಡಿಗೊಂಡಿರುತ್ತದೆ. ಎಲ್ಲಾ ವರ್ಗದವರು ಈ ಆಚರಣೆಯಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿ ಗ್ರಾಮದ ಶ್ರೇಯೋಭಿವೃದ್ಧಿಗೆ ಸಾಥ್ ನೀಡುತ್ತಾರೆ.

ಶೆಟ್ಟಿಕೆರೆ ಕಾರುಹಬ್ಬವನ್ನು ಗಡಿ ಕಾರುಹಬ್ಬವೆಂದು ಕರೆಯಲಾಗುವುದು.800 ವಷಱಗಳ ಹಿಂದೆ ಗ್ರಾಮದ ಶ್ರೇಯಸ್ಸಿಗೆ ಬಲಿದಾನ ನೀಡಿದ್ದ ಹೆಬ್ಬಾರಯ್ಯ ಎಂಬುವರ ಸಂಕಲ್ಪವನ್ನು ಇಂದಿಗೂ ಗ್ರಾಮಸ್ಥರು ಮುಂದುವರೆಸಿಕೊಂಡು ಬಂದಿದ್ದಾರೆ.
ಈ ರೀತಿ ಸುದೀಘಱ ಅವಧಿಯ ಸಂಪ್ರದಾಯವಾಗಿದೆ. ವಿಜಯನಗರ ಸಾಮ್ರಾಜ್ಯದ ವೇಳೆಯಲ್ಲಿ ಹೆಬ್ಬಾರಯ್ಯ ಎಂಬುವರ ಬಲಿದಾನದಿಂದ ಈ ಕಾರುಹಬ್ಬ ಆರಂಭವಾಗಿದೆ. ಪ್ರತಿ ವಷಱ ಜ್ಯೇಷ್ಟ ಪೌಣಱಮಿಯಂದು ಈ ಆಚರಣೆ ನಡೆಯಲಿದೆ. ಗ್ರಾಮದ ಮಧ್ಯಭಾಗದಲ್ಲಿರೋ ಬ್ರಹ್ಮಲಿಂಗಕ್ಕೆ ವಷಱಕ್ಕೆ ಎರಡು ದಿನ ಮಾತ್ರ ಪೂಜೆ ನಡೆಯಲಿದೆ. ಮೊದಲ ದಿನ ಕರುಗಲ್ಲಿನ ಮಂಟಪಕ್ಕೆ ಸುಣ್ಣ ಬಣ್ಣ ಒಡೆದು ಹಸಿರು ತೋರಣ, ಬೇವಿನಸೊಪ್ಪು ಕಟ್ಟಿ ಭತ್ತದ ತೆನೆಯನ್ನು ಹೆಣೆದು ಮಂಪಟದ ಶಿಖರದ ಸುತ್ತ ಕಟ್ಟಿ ಶಿಖರದ ಮೇಲೆ ಮೂರು ಕಳಸ ಸ್ಥಾಪಿಸಲಾಗುತ್ತದೆ. ಈ ಹಬ್ಬದ ವ್ಯವಸ್ಥೆಯಲ್ಲಿ ಎಲ್ಲಾ ಕೋಮಿನವರು ಭಾಗಿಯಾಗುವುದು ವಿಶೇಷ. ಕರಗ ಒಡೆಯುವ ಜವಾಬ್ದಾರಿ ಗೌಡಾಳಿಕೆ ಜನಾಂಗದವರಿಗೆ, ಪೂಜೆ ಮಾಡುವುದು ಬ್ರಾಹ್ಮಣ ಸಮುದಾಯದವರಿಗೆ, ಕುಂಬಾರರಿಗೆ ಕಳಸ ಹಾಗೂ ಕರಗ ಮಾಡುವ ಜವಾಬ್ದಾರಿ, ತಳವಾರರಿಗೆ ಬೇವಿನ ಸೊಪ್ಪು , ಬತ್ತದ ತೆನೆ ಕಟ್ಟುವ, ಹರಿಜನ ಜನಾಂಗದವರಿಗೆ ಕರಗದ ಕೆಳಗೆ ಚಮಱದ ಮೇಣೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ.
ಬೈಟ್ : ನಾಗೇಶ್, ಶಾಸಕ
ಕರಗ ನಡೆಯುವ ಸ್ಥಳದಲ್ಲಿನ ವ್ಯವಸ್ಥೆಯನ್ನು ಎಲ್ಲಾ ಕೋಮಿನವರು ಪೂಣಱಗೊಳಿಸಿದ ನಂತರ ಬ್ರಹ್ಮಲಿಂಗದ ಎದುರು ಹೊಸ ಮಡಕೆಯಲ್ಲಿ ನವಧಾನ್ಯಗಳನ್ನು ತುಂಬಿ ಬ್ರಹ್ಮಲಿಂಗಕ್ಕೆ ರುದ್ರಾಭಿಷೇಕ ಮಾಡಲಾಗುತ್ತದೆ. 2ನೇ ದಿನ ಮಧ್ಯರಾತ್ರಿ ಗ್ರಾಮದ ಶ್ರೀ ಕೆಂಪಮ್ಮದೇವಿ, ಶ್ರೀ ಕಾಲಭೈರವೇಶ್ವರ, ಶ್ರೀ ಬಸವಣ್ಣ ಮತ್ತು ಊರಿನ ಹೋರಿಗಳ ಉತ್ಸವ ಮಾಡಲಾಗುವುದು. ಪೂಜಾ ಸಮಯದಲ್ಲಿ ಬ್ರಹ್ಮಲಿಂಗವು ಒಂದು ಅಂಗುಲ ಮೇಲೆ ಬರಲಿದೆ ಎಂಬ ನಂಬಿಕೆ ಇದೆ. ಕರಗ ಹೊಡೆಯುವರು ಸ್ಥಳಕ್ಕೆ ಬಂದು ಕರುಗಲ್ಲಿಗೆ ಪ್ರದಕ್ಷಿಣೆ ಹಾಕಿ ಬ್ರಹ್ಮ ಲಿಂಗ ಮತ್ತು ಕರಗಕ್ಕೆ ಆರತಿ ಎತ್ತಿ ನಮಿಸುತ್ತಾರೆ. ನೊಗಕ್ಕೆ ಎತ್ತುಗಳನ್ನು ಹೂಡಿಕೊಂಡು ಕರಗ ಒಡೆಯುವರು ಬ್ರಹ್ಮ ಲಿಂಗಕ್ಕೆ ಕುಂಟೆಯನ್ನು ಹಾಕಿಸಿ ಧಾನ್ಯ ತುಂಬಿದ ಮಡಕೆಯನ್ನು ಎತ್ತುಗಳಿಗೆ ಹೂಡಿದ ಕುಂಟೆಯಿಂದ ಒಡೆಯುತ್ತಾರೆ. ಕರಗ ಒಡೆಯದಾಗ ಧಾನ್ಯವೆಲ್ಲಾ ಮುಂದೆ ಚೆಲ್ಲುತ್ತದೆ. ಯಾವ ಧಾನ್ಯ ಮುಂದೆ ಬಂದಿರುತ್ತದೆಯೋ ಆ ಧಾನ್ಯ ವಷಱದಲ್ಲಿ ಉತ್ತಮ ಬೆಳೆಯಾಗಲಿದೆ ಎಂಬ ನಂಬಿಕೆ. ಈ ವಷಱ ಮಡಕೆಯಿಂದ ಬತ್ತ ಮುಂದೆ ಬಂದಿದ್ದು, ಗ್ರಾಮದಲ್ಲಿ ಬತ್ತದ ಸಮೃದ್ಧ ಬೆಳೆ ಬರಲಿದೆ ಎಂದು ಗ್ರಾಮಸ್ಥರು ಅತ್ಯುತ್ಸಾಹದಿಂದ ಕುಣಿದಾಡಿದರು.
ಬೈಟ್ : ಭಾಸ್ಕರ್, ಗ್ರಾಮಸ್ಥರು
ಈ ಕಾರುಹಬ್ಬದ ವೇಳೆ ಸುತ್ತಮುತ್ತಲ 33 ಹಳ್ಳಿಯ ನವ ವಿವಾಹಿತರು ಕಳಸ ನೋಡಲು ಬರುವುದು ಇಲ್ಲಿಯ ವಾಡಿಕೆ. ಬತ್ತದ ತೆನೆಯನ್ನು ಕಣಜಕ್ಕೆ ಹಾಕಿದ್ರೆ ಸಮೃದ್ಧಿಯಾಗಲಿದೆ ಎಂಬ ನಂಬಿಕೆ. ಒಟ್ಟಾರೆ ಗ್ರಾಮೀಣ ಇಂತಹ ಸಂಪ್ರದಾಯಗಳು ಏಕತೆಯ ಸಂಕೇತವಾಗಿದೆ ಎಂದು ಹೇಳಬಹುದಾಗಿದೆBody:Shanthinath, tumakuruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.