ತುಮಕೂರು: ಲಾಕ್ಡೌನ್ ವೇಳೆ ಕೋಳಿ ಹಾಗೂ ಮಾಂಸ ಸಾಕಣೆ ಮಾಡಲು ನೀಡಲಾಗಿರೋ ಪಾಸ್ ಬಳಸಿ ಖಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಗುಬ್ಬಿ ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
![Illegal cattle transportation](https://etvbharatimages.akamaized.net/etvbharat/prod-images/kn-tmk-05-cattle-script-7202233_27042020172728_2704f_1587988648_800.jpg)
ಬೆಳಗ್ಗೆ ಸುಮಾರು 9 ಗಂಟೆ ವೇಳೆಯಲ್ಲಿ ಗುಬ್ಬಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206ರ ಶಿಲ್ಪಾ ಸಾಮಿಲ್ ಮುಂಭಾಗ ಪೊಲೀಸ್ ಚೆಕ್ ಪೋಸ್ಟ್ನಲ್ಲಿ ವಾಹನವನ್ನು ತಡೆದಾಗ ವಿಷಯ ಬೆಳಕಿಗೆ ಬಂದಿದೆ.
![Illegal cattle transportation](https://etvbharatimages.akamaized.net/etvbharat/prod-images/kn-tmk-05-cattle-script-7202233_27042020172728_2704f_1587988648_706.jpg)
ಮುಕ್ತಿಯಾರ್, ಸೈಯದ್ ಎಂಬಿಬ್ಬರು ತಿಪಟೂರಿನಿಂದ ಬೆಂಗಳೂರಿಗೆ ಮೂರು ಜಾನುವಾರುಗಳನ್ನು ಟೆಂಪೋದಲ್ಲಿ ಸಾಗಿಸುತ್ತಿದ್ದರು. ಇಬ್ಬರನ್ನು ವಶಕ್ಕೆ ವಶಕ್ಕೆ ಪಡೆದಿರುವ ಗುಬ್ಬಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
![Illegal cattle transportation](https://etvbharatimages.akamaized.net/etvbharat/prod-images/kn-tmk-05-cattle-script-7202233_27042020172728_2704f_1587988648_13.jpg)