ತುಮಕೂರು: ಸಚಿವ ಸ್ಥಾನದ ಬಗ್ಗೆ ನನಗೆ ಅತೃಪ್ತಿ ಇಲ್ಲ, ನಾವೆಲ್ಲ ತೃಪ್ತರೆಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ರೇಣುಕಾಚಾರ್ಯ ಕೂಡ ಇದ್ದರು.
ಸಿದ್ದಗಂಗಾ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಎಂಜಿನ್ ಇಲ್ಲದೆ ರೈಲಿನ ಬೋಗಿ ಇರುವುದಿಲ್ಲ. ಸಿಎಂ ಅವರು ಎಂಜಿನ್ ಇದ್ದಂತೆ, ತಾವೆಲ್ಲರೂ ಬೋಗಿಗಳು ಎಂದರು.
ಅಲ್ಲದೆ, ಮುಖ್ಯಮಂತ್ರಿಗಳು ಇರುವಾಗ ನಾವೆಲ್ಲ ಮಾತನಾಡಬಾರದು. ಅವರಿಲ್ಲದಿದ್ದರೆ ಮಾತ್ರ ನಾವೆಲ್ಲ ಸಚಿವರಿದ್ದಂತೆ. ಅತೃಪ್ತನಲ್ಲ, ನಾನು ತೃಪ್ತ ಎನ್ನುತ್ತ ರೇಣುಕಾಚಾರ್ಯ ಕೈಮುಗಿದರು.
ಇದನ್ನೂ ಓದಿ: ಜಮೀರ್ ಮೇಲೆ ಯಾರು ದೂರು ನೀಡಿದ್ದರೋ ಗೊತ್ತಿಲ್ಲ, ಕೊಟ್ಟೋರು ಉತ್ತರ ಕೊಡ್ತಾರೆ: ಹೆಚ್ಡಿಕೆ