ETV Bharat / state

ಬೆಂಗಳೂರಿನಲ್ಲಿ ಲೂಟಿ ಮಾಡಿದ ಹಣವನ್ನು ಶಿರಾ ಚುನಾವಣೆಯಲ್ಲಿ ಸುರಿಯುತ್ತಿದ್ದಾರೆ: ಎಚ್​ಡಿಕೆ ಆರೋಪ - ಶಿರಾದಲ್ಲಿ ಎಚ್​​ಡಿ ಕುಮಾರಸ್ವಾಮಿ

ಬೆಂಗಳೂರು ನಗರದಲ್ಲಿ ಲೂಟಿ ಮಾಡಿರುವ ಹಣದಿಂದ ಜನರನ್ನು ಕೊಂಡುಕೊಳ್ಳುತ್ತೇವೆ ಎಂಬ ದುರಾಹಂಕಾರದಿಂದ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಂದು ಕೆಲವರು ಚುನಾವಣೆಯ ನಡೆಸುತ್ತಿದ್ದಾರೆ. ಅವರದು ಕಷ್ಟಪಟ್ಟು ದುಡಿದ ಹಣವಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದರು.

jds election campaign in sira
ಶಿರಾದಲ್ಲಿ ಜೆಡಿಎಸ್​ ಚುನಾವಣೆ ಪ್ರಚಾರ
author img

By

Published : Oct 22, 2020, 3:59 AM IST

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಚಂಗಾವರ ಗ್ರಾಮದಿಂದ ಚುನಾವಣಾ ಪ್ರಚಾರ ಆರಂಭಿಸಿದರು.

ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಇತರರು ಭಾಗಹಿಸಿದ್ದರು.

'ನಾನು ಪತಿಯನ್ನು ಕಳೆದುಕೊಂಡು ತುಂಬಾ ನೋವಿನಲ್ಲಿ ಇದ್ದೇನೆ. ದಯವಿಟ್ಟು ನಿಮ್ಮ ಮನೆ ಮಗಳು ಎಂದು ಪರಿಗಣಿಸಿ ನನಗೆ ಮತ ನೀಡಿ' ಎಂದು ಮತಯಾಚಿಸಿದರು.

ಶಿರಾದಲ್ಲಿ ಎಚ್​​ಡಿ ಕುಮಾರಸ್ವಾಮಿ ಚುನಾವಣಾ ಪ್ರಚಾರ

ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಾತನಾಡಿ, ಬೆಂಗಳೂರು ನಗರದಲ್ಲಿ ಲೂಟಿ ಮಾಡಿರುವ ಹಣದಿಂದ ಜನರನ್ನು ಕೊಂಡುಕೊಳ್ಳುತ್ತೇವೆ ಎಂಬ ದುರಾಹಂಕಾರದಿಂದ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಂದು ಕೆಲವರು ಚುನಾವಣೆಯ ನಡೆಸುತ್ತಿದ್ದಾರೆ. ಅವರದು ಕಷ್ಟಪಟ್ಟು ದುಡಿದ ಹಣವಲ್ಲ. ಆದರೆ, ಈ ಕ್ಷೇತ್ರದಲ್ಲಿ ಸತ್ಯನಾರಾಯಣ ಅವರನ್ನು ನೀವು ಕಷ್ಟಪಟ್ಟು ದುಡಿದ ಹಣವನ್ನು ಖರ್ಚು ಮಾಡಿ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿದ್ದೀರಿ ಎಂದರು.

ಬೇರೆಯವರು ಕೊಡುವ ಹಣಕ್ಕೆ ನೀವು ಮಾರು ಹೋಗಬಾರದು. ಅವರು ಕೊಡುವ ಹಣದಿಂದ ನಿಮ್ಮ ಕುಟುಂಬವನ್ನು ಒಂದೆರಡು ದಿನ ಮಾತ್ರ ನಿರ್ವಹಣೆ ಮಾಡಲು ಸಾಧ್ಯ. ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಅವರದ್ದು ಉನ್ನತ ದರ್ಜೆಯ ಬದುಕು. ಆದರೆ, ಹಿಂದೆ ಸತ್ಯನಾರಾಯಣ ಅವರು 17 ಸಾವಿರ ರೈತ ಕುಟುಂಬಗಳಿಗೆ ಸಾಗುವಳಿ ಚೀಟಿ ನೀಡಿದ ಕೀರ್ತಿ ಅವರದ್ದಾಗಿತ್ತು ಎಂದು ಹೇಳಿದರು.

ಅಮ್ಮಜಮ್ಮ ಅವರನ್ನು ಬಹಳ ಒತ್ತಾಯ ಮಾಡಿ ಜೆಡಿಎಸ್ ಅಭ್ಯರ್ಥಿಯನ್ನಾಗಿ ಕಣದಲ್ಲಿ ನಿಲ್ಲಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ಓರ್ವ ಸಾಮಾನ್ಯ ರೈತ ಕುಟುಂಬದ ಮಹಿಳೆಯಾಗಿದ್ದಾರೆ. ನಿಮ್ಮ ಮನೆಯ ಮಗಳೆಂದು ಅವರನ್ನು ಪರಿಗಣಿಸಿ ವಿಧಾನಸಭೆಗೆ ಆರಿಸಿ ಕಳುಹಿಸುವಂತೆ ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.