ETV Bharat / state

ತುಮಕೂರು ರಸ್ತೆ ಅಪಘಾತ : ಮೃತಪಟ್ಟ ಆರು ಮಂದಿಯ ನೇತ್ರದಾನ ಮಾಡಿದ ಕುಟುಂಬಸ್ಥರು - ಶಿರಾ ತಾಲೂಕಿನ ಬಾಲೆನಹಳ್ಳಿ ಗೇಟ್

ತುಮಕೂರು ಅಪಘಾತ ಪ್ರಕರಣದಲ್ಲಿ 9 ಮಂದಿ ಸಾವಿಗೀಡಾಗಿದ್ದು, ಇದರಲ್ಲಿ ಆರು ಮಂದಿಯ ನೇತ್ರದಾನ ಮಾಡಲಾಗಿದೆ. ಇದಕ್ಕೆ ಮೃತರ ಕುಟುಂಬಸ್ಥರು ಸಹ ಒಪ್ಪಿಗೆ ಸೂಚಿಸಿದ್ದಾರೆ.

ತುಮಕೂರಿನಲ್ಲಿ  ಅಪಘಾತ
ತುಮಕೂರಿನಲ್ಲಿ ಅಪಘಾತ
author img

By

Published : Aug 25, 2022, 5:42 PM IST

Updated : Aug 25, 2022, 5:54 PM IST

ತುಮಕೂರು: ಇಂದು ಬೆಳಗ್ಗೆ ಶಿರಾ ತಾಲೂಕಿನ ಬಾಲೆನಹಳ್ಳಿ ಗೇಟ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ 9 ಜನರ ಪೈಕಿ, 6 ಮಂದಿಯ ಕಣ್ಣುದಾನ ಮಾಡಲಾಗಿದೆ. ಮೃತಪಟ್ಟವರ ಕುಟುಂಬದವರು 6 ಜನರ ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಿರಾ ತಹಶೀಲ್ದಾರ್ ಮಮತಾ ಹೇಳಿದ್ದಾರೆ.

ಕ್ರೂಸರ್‌ ಚಾಲಕ ಕೃಷ್ಣ, ಉಳಿದಂತೆ ಸುಜಾತಾ, ಪ್ರಭುಸ್ವಾಮಿ, ಸಿದ್ದಯ್ಯ ಸ್ವಾಮಿ, ನಿಂಗಣ್ಣ, ಮೀನಾಕ್ಷಿ ಎಂಬುವರ ನೇತ್ರದಾನ ಮಾಡಲಾಗಿದೆ. ಈ ಮೂಲಕ ಮೃತಪಟ್ಟವರ ಕುಟುಂಬದವರು ಸಾಮಾಜಿಕ ಕಳಕಳಿ ತೋರಿಸಿದ್ದಾರೆ.

ಮೃತಪಟ್ಟ ಆರು ಮಂದಿಯ ನೇತ್ರದಾನ ಮಾಡಿದ ಕುಟುಂಬಸ್ಥರು

ಚಾಲಕ ಕೃಷ್ಣಪ್ಪನ ಸಹೋದರಿ ಕೂಡ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರು ಹಾಗೂ ತುಮಕೂರಿನಲ್ಲಿ ವಿವಿಧಡೆ ಕೂಲಿ ಕೆಲಸ ಮಾಡುತ್ತಿದ್ದ ಇವರುಗಳು ಕೊನೆ ಶ್ರಾವಣ ಶನಿವಾರದ ಪೂಜೆಗಾಗಿ ತಮ್ಮ ಗ್ರಾಮಗಳಿಗೆ ಬಂದು ಇಂದು ವಾಪಸ್ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಆದರೆ, ಅಪಘಾತದಿಂದ 9 ಮಂದಿ ಧಾರಣವಾಗಿ ಮೃತಪಟ್ಟಿರುವುದು ಚಿಂತಾಜನಕವಾಗಿದೆ. ಅಲ್ಲದೆ, ಕುಟುಂಬಸ್ಥರ ರೋಧನೆ ಮುಗಿಲುಮುಟ್ಟಿದೆ.

ಇದನ್ನೂ ಓದಿ: ತುಮಕೂರಿನ ಶಿರಾ ಬಳಿ ಅಪಘಾತ : ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ

Last Updated : Aug 25, 2022, 5:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.