ತುಮಕೂರು: ಆರ್.ಆರ್ ನಗರದ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಯತ್ನಿಸುತ್ತಿರುವ ಐಎಎಸ್ ಅಧಿಕಾರಿ ದಿ. ಡಿ.ಕೆ.ರವಿ ಪತ್ನಿ ಕುಸುಮ ನಡೆಗೆ ಡಿ.ಕೆ.ರವಿ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕುಣಿಗಲ್ ತಾಲೂಕಿನ ದೊಡ್ಡಕೊಪ್ಪಲಿನಲ್ಲಿ ಡಿ.ಕೆ.ರವಿ ತಾಯಿ ಗೌರಮ್ಮ ಮಾತನಾಡಿ, ನನ್ನ ಮಗನ ಹೇಸರೇಳಿಕೊಂಡು ಯಾಕೆ ಚುನಾವಣೆಗೆ ನಿಂತ್ಕೋಬೇಕು. ಚುನಾವಣೆ ನಿಂತ್ಕೊಂಡ್ರೂ ನನ್ನ ಮಗನ ಹೆಸ್ರು, ಫೋಟೋ ಹಾಕಬಾರದು. ಹಾಕಿಕೊಂಡರೆ ನಾನೇ ಹುಡುಗ್ರನ್ನ ಕರೆದುಕೊಂಡು ಹೋಗಿ ಬೆಂಕಿ ಹಚ್ಚಿಸ್ತೀನಿ. ನನ್ನ ಮಗನ ಜೊತೆ ಅವಳೂ ಹೋಗಿಬಿಟ್ಲು ಅಂತಾ ತಿಳಿಕೊಂಡಿದ್ದೇನೆ. ನನ್ನ ಮಗನ ದುಡ್ಡಲ್ಲಿ ಒಂದು ರೂಪಾಯಿ ನಮ್ಮ ಕಷ್ಟಕ್ಕೆ ಕೊಡಲಿಲ್ಲ.
ಅವತ್ತು ನನ್ನ ಮಗನನ್ನು ಮಣ್ಣಲ್ಲಿ ಬಿಸಾಕಿ ಹೋದೋಳು ಇವತ್ತಿನವರೆಗೂ ಬಂದಿಲ್ಲ. ಡಿ.ಕೆ.ರವಿ ಹೆಂಡ್ತಿ ಅನ್ನೋ ಯೋಗ್ಯತೆ 6 ವರ್ಷದಲ್ಲಿಯೇ ಕಳೆದುಕೊಂಡಳು. ನಿಯತ್ತಿದ್ರೆ ನನ್ನ ಕಣ್ಣೆದುರೇ ಅವ್ರ ಅಪ್ಪ-ಅಮ್ಮನೂ ನನ್ ಹಾಗೆ ಯಾವಾಗ್ ಆಗ್ತಾರೆ ಕಾಯ್ತಾ ಇದ್ದೀನಿ. ನಾನು ಕಷ್ಟಪಟ್ಟು ಓದ್ಸಿದ್ರೆ ನನ್ನ ಮಗನ ದುಡ್ಡೆಲ್ಲಾ ನುಂಗಿ ನೀರು ಕುಡಿದಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.