ತುಮಕೂರು : ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಸಂಸದ ಜಿ. ಎಸ್. ಬಸವರಾಜು ಅವರ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ಸಭೆ ನಡೆಸಲಾಯಿತು.
ಕಳೆದ ಬಾರಿ ನಡೆದ ದಿಶಾ ಸಮಿತಿ ಸಭೆಯ ಅನುಪಾಲನಾ ವರದಿ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್, ಸಭೆಗೆ ಬಂದೆವು ಹೋದೆವು ಎಂಬ ರೀತಿ ನಡೆಯಬಾರದು. ಸಭೆಗೆ ಹಾಜರಾಗುವ ಒಂದೆರಡು ದಿನಗಳ ಮುಂಚಿತವಾಗಿ ಜಿಲ್ಲಾ ಪಂಚಾಯಿತಿಯ ಸಿಇಓ ಅವರಿಗೆ ಯಾವ ಯೋಜನೆಗಳು ಎಷ್ಟರಮಟ್ಟಿಗೆ ಪೂರ್ಣಗೊಂಡಿವೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಮುಂದಿನ ಸಭೆಯಲ್ಲಿ ಈ ರೀತಿ ಆಗದಂತೆ ಎಚ್ಚರಿಕೆವಹಿಸಿ, ಅಲ್ಲದೇ ಯೋಜನೆಗಳ ಬಗ್ಗೆ ರೈತರು, ಸಾರ್ವಜನಿಕರು ತಿಳಿದುಕೊಳ್ಳುವಂತೆ ಎಲ್ಲಾ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಿ ಎಂದರು ಸೂಚಿಸಿದರು.