ತುಮಕೂರು: ಪಾವಗಡ ತಾಲೂಕಿನ ಬೂದಿಬೆಟ್ಟ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಕಚೇರಿ ಕಟ್ಟಡ ಸ್ಫೋಟಕ್ಕೆ ಯತ್ನಿರುವ ಘಟನೆ ನಡೆದಿದೆ. ದುಷ್ಕರ್ಮಿಗಳು ಜಿಲೆಟಿನ್ ಕಡ್ಡಿ ಬಳಸಿ ಗ್ರಾಪಂ ಕಟ್ಟಡ ಧ್ವಂಸ ಯತ್ನಿಸಿದ್ದಾರೆ.
ಗ್ರಾಪಂ ಕಟ್ಟಡ ಸ್ಫೋಟ: ಸ್ಫೋಟದಿಂದ ಪಂಚಾಯತ್ ಕಟ್ಟಡದ ಎರಡು ಗೋಡಿಗಳಿಗೆ ಹಾನಿಯಾಗಿದ್ದು, ಎರಡು ಕುರ್ಚಿಗಳು ಭಸ್ಮವಾಗಿವೆ. ಗುರುವಾರ ರಾತ್ರಿ 9 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಸ್ಫೋಟದ ಶಬ್ದ ಜೋರಾಗಿ ಕೇಳಿ ಬಂದಾಗ ಗ್ರಾಮಸ್ಥರು ಓಡಿಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಫೋಟದ ಶಬ್ದದಿಂದ ಗ್ರಾಮಸ್ಥರು ಭಯಗೊಂಡಿದ್ದರು.
ಬಳಿಕ ಕೂಡಲೇ ವೈ.ಎಸ್ ಹೊಸಕೋಟೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾವಗಡ ತಾಲೂಕಿನ ವೈಎಸ್ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಇದನ್ನೂ ಓದಿ: ಬೆಂಗಳೂರು: ಮನೆಯೊಳಗೆ ನಿಗೂಢ ಸ್ಫೋಟ, ಮೂವರಿಗೆ ಗಂಭೀರ ಗಾಯ)