ತುಮಕೂರು : ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಮನುಷ್ಯನನ್ನು ಹೋಲುವ ವಿಚಿತ್ರ ಮೇಕೆ ಮರಿ ಜನಿಸಿದ್ದು ಅಚ್ಚರಿಕೆ ಕಾರಣವಾಗಿದೆ.
ಗ್ರಾಮದ ಜಾನಕಿರಾಮಯ್ಯ ಎನ್ನುವವರಿಗೆ ಸೇರಿದ ಮೇಕೆಯೊಂದು ಶನಿವಾರ ಬೆಳಗ್ಗೆ ಎರಡು ಮರಿಗಳಿಗೆ ಜನ್ಮ ನೀಡಿದೆ. ಒಂದು ಮೇಕೆ ಮರಿ ಆರೋಗ್ಯವಾಗಿದ್ದರೆ ಮತ್ತೊಂದು ಮೇಕೆ ಮನುಷ್ಯ ರೂಪವನ್ನು ಹೋಲುತ್ತಿದೆ. ಮನುಷ್ಯನಂತಯೇ ಕೈ ಕಾಲುಗಳನ್ನು ಹೊಂದಿದ ಮೇಕೆಯನ್ನು ಕೆಲ ಜನರು ದೇವರಿಗೆ ಹೋಲಿಕೆ ಮಾಡಿದ್ದಾರೆ. ಜನಿಸಿದ ಕೆಲ ಹೊತ್ತಿನಲ್ಲಿಯೇ ಮೇಕೆ ಮರಿ ಸಾವನ್ನಪ್ಪಿದ್ದು ಜನ ತಂಡೋಪ ತಂಡವಾಗಿ ಗ್ರಾಮಕ್ಕೆ ಬಂದು ನೋಡಿದ್ದಾರೆ. ಸದ್ಯ ಮೃತ ಮೇಕೆ ಮರಿಯನ್ನು ಹೂಳಲಾಗಿದೆ.