ಹುಬ್ಬಳ್ಳಿ: ನಗರದ ಬಸವ ಕೇಂದ್ರದ ಆವರಣದಲ್ಲಿ ವಿ. ಬಿ. ಡಂಗನವರ ಪ್ರತಿಷ್ಠಾನದಿಂದ ವಿಶ್ವ ಪರಿಸರ ದಿನಾಚರಣೆ ನಡೆಯಿತು.
ಪಟ್ಟಣದ ಗೋಕುಲ ರಸ್ತೆಯಲ್ಲಿರುವ ಡಾ. ಆರ್. ಎಂ. ಲೋಯಾ ನಗರದ ಬಸವ ಕೇಂದ್ರದ ಆವರಣದಲ್ಲಿ ವಿ.ಬಿ ಡಂಗನವರ ಪ್ರತಿಷ್ಠಾನದ ವತಿಯಿಂದ ಗಿಡಗಳನ್ನು ನೆಡಲಾಯಿತು.
ಈ ವೇಳೆ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ವಿ.ಡಂಗನವರ, ಬಸವಕೇಂದ್ರದ ಗೌರವ ಅಧ್ಯಕ್ಷ ಡಾ. ಬಿ.ವಿ ಶಿರೂರ್ ಇದ್ದರು.