ETV Bharat / state

ಗದಗ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟ ಕೊರೊನಾ: ಇಂದು ಮತ್ತೆ 9 ಜನರಿಗೆ ಸೋಂಕು - Corona updates

ಇಷ್ಟು ದಿನ ಶಾಂತವಾಗಿದ್ದ ಗದಗ ಜಿಲ್ಲೆಯಲ್ಲಿ ಕೊರೊನಾ ಬಿರುಗಾಳಿ ಬೀಸಿದ್ದು ಇಂದು 9 ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಾಗಿ ಸೋಂಕಿತರು ಕಂಡುಬಂದಿರುವುದು ಆತಂಕ ಸೃಷ್ಟಿಸಿದೆ.

Nine corona cases found gadag district
Nine corona cases found gadag district
author img

By

Published : Jun 23, 2020, 8:54 PM IST

ಗದಗ: ಜಿಲ್ಲೆಯಲ್ಲಿಂದು ಮತ್ತೆ 9 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದ್ದು, ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ.

4 ಜನ ಪುರುಷರು, 5 ಜನ ಮಹಿಳೆಯರು ಸೇರಿದಂತೆ ಒಟ್ಟು 9 ಜನರಲ್ಲಿ ಕೊರೊನಾ ಪತ್ತೆಯಾಗಿದ್ದು,
ಸೋಂಕಿತರ ಪೈಕಿ ಓರ್ವ ವೈದ್ಯೆ ಮತ್ತು ಒಬ್ಬ ನರ್ಸ್ ಕೂಡ ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಖಾಸಗಿ ಆಸ್ಪತ್ರೆಯ ವೈದ್ಯೆರೊಬ್ಬರ ವರದಿ ಪಾಸಿಟಿವ್ ಬಂದಿದೆ. ರೋಣ ತಾಲೂಕಿನ ಕುರಡಗಿಯ ಸೋಂಕಿತ ವೃದ್ದೆಯನ್ನು ತಪಾಸಣೆ ಮಾಡಿದ್ದರಿಂದ ಸೋಂಕು ತಗುಲಿದೆ. ಜಿಮ್ಸ್ ನ ಕೊವಿಡ್ ವಾರ್ಡ್ ನಲ್ಲಿ ಸತತವಾಗಿ ಕರ್ತವ್ಯ ನಿರ್ವಹಿಸಿದ ಮಲ್ಲಸಮುದ್ರ ಗ್ರಾಮದ ನರ್ಸ್ (ಪುರುಷ) ಒಬ್ಬರಿಗೆ ಪಾಸಿಟಿವ್ ಕಂಡು ಬಂದಿದೆ.

ಇನ್ನು ತಾಲೂಕಿನ ಹೊಂಬಳದ ಇಬ್ಬರಿಗೆ ಸೋಂಕು ತಗುಲಿದೆ.‌ ಜೂನ್ 15 ರಂದು ಅಲ್ಲಿ ನಡೆದ ಮದುವೆಯಲ್ಲಿ ಪಾಲ್ಗೊಂಡಿದ್ದ ನವಲಗುಂದ ತಾಲೂಕಿನ ಮೊರಬದ ಮೂವರು ಸೋಂಕಿತರ ಸಂಪರ್ಕದಿಂದ, ಈ ಇಬ್ಬರಿಗೆ ಸೋಂಕು ತಗುಲಿದೆ ಎನ್ನಲಾಗಿದೆ.

ಗದಗ ತಾಲೂಕಿನ ಕಣವಿ-ಹೊಸೂರಿನ ಒಬ್ಬರಿಗೆ ಪಾಸಿಟಿವ್ ಸೋಂಕು ಪತ್ತೆ ಯಾಗಿದ್ದು, ಜೂನ್ 18 ರಂದು ಪಾಸಿಟಿವ್ ಆಗಿದ್ದ ಹರ್ತಿಯ ಆರ್‌ಎಂಪಿ ವೈದ್ಯರ ಸಂಪರ್ಕದಿಂದ ಇವರಿಗೆ ಸೋಂಕು ತಗುಲಿದೆ ಎನ್ನಲಾಗಿದೆ.

ಇನ್ನು ರೋಣ ಪಟ್ಟಣದಲ್ಲಿ ಒಬ್ಬರಿಗೆ ಪಾಸಿಟಿವ್ ಬಂದಿದ್ದು, ತಾಲೂಕಿನ ಇಟಗಿಯಲ್ಲಿ ಒಂದೇ ಕುಟುಂಬದ ಮೂವರಿಗೆ ಪಾಸಿಟಿವ್ ದೃಢಪಟ್ಟಿದೆ. ಆದರೆ ಈ ನಾಲ್ವರಿಗೆ ಯಾರ ಸಂಪರ್ಕದಿಂದ ಸೋಂಕು ತಗುಲಿದೆ ಎಂಬುದು ಇನ್ನೂ ಗೊತ್ತಾಗಿಲ್ಲ.

ಇನ್ನು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 88ಕ್ಕೆ ಏರಿದ್ದು, ಇಬ್ಬರು ಮೃತರಾಗಿದ್ದಾರೆ. 44 ಜನ ಗುಣಮುಖರಾಗಿದ್ದಾರೆ. 42 ಸಕ್ರಿಯ ಕೇಸ್‌ಗಳಿದ್ದು ಇವರಿಗೆ ಜಿಮ್ಸ್ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.