ETV Bharat / state

ಬೇಡಿಕೆ ಈಡೇರಿಕೆಗಾಗಿ ಸಿಎಂ ಜೊತೆ ಚರ್ಚಿಸುವಂತೆ ಶಾಸಕ ಮುನವಳ್ಳಿಗೆ ಆಶಾ ಕಾರ್ಯಕರ್ತೆಯರ ಒತ್ತಾಯ - Gangavati asha workers protest

ಶಾಸಕ ಪರಣ್ಣ ಮುನವಳ್ಳಿ ಅವರ ಗೃಹ ಕಚೇರಿಗೆ ತೆರಳಿದ ಆಶಾ ಕಾರ್ಯಕರ್ತೆಯರು ಸೇವಾ ಭದ್ರತೆ ಮತ್ತು ಗೌರವಧನ ಹೆಚ್ಚಿಸುವ ಕುರಿತು ಸರ್ಕಾರದ ಜೊತೆ ಚರ್ಚಿಸುವಂತೆ ಶಾಸಕರಿಗೆ ಒತ್ತಾಯಿಸಿದರು.

Asha workers protest in gangavati to fullfill various demands

author img

By

Published : Jun 30, 2020, 7:05 PM IST

ಗಂಗಾವತಿ: ಸೇವಾ ಭದ್ರತೆ ಮತ್ತು ಗೌರವಧನ ಹೆಚ್ಚಳಕ್ಕೆ ನಮ್ಮ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿ ಸಿಎಂ ಜೊತೆ ಚರ್ಚಿಸಿ ಎಂದು ಶಾಸಕ ಪರಣ್ಣ ಮುನವಳ್ಳಿ ಅವರನ್ನು ಆಶಾ ಕಾರ್ಯಕರ್ತೆಯರು ಒತ್ತಾಯಿಸಿದರು.

ನಗರದ ಶಾಸಕರ ಗೃಹ ಕಚೇರಿಗೆ ತೆರಳಿದ ಆಶಾ ಕಾರ್ಯಕರ್ತೆಯರು, ಗೌರವಧನ ಸರಿಯಾಗಿ ಪ್ರತಿ ತಿಂಗಳೂ ಬರುತ್ತಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆ ಸವಾಲಾಗಿದೆ. ಕೊರೊನಾದಂತ ಸಂದರ್ಭದಲ್ಲಿ ಪ್ರತಿ ವಾರ್ಡ್​ನ ಗಲ್ಲಿ ಗಲ್ಲಿಗಳಲ್ಲಿ ಅಲೆದು ನಮ್ಮ ಜೀವದ ಹಂಗು ತೊರೆದು ಜನರ ಸೇವೆ ಮಾಡಿದ್ದೇವೆ. ಆದರೆ ಸರ್ಕಾರ ನಮ್ಮ ಸೇವೆ ಗುರುತಿಸಿಲ್ಲ ಎಂದು ಅಳಲು ತೋಡಿಕೊಂಡರು. ಅಲ್ಲದೆ ಮಾಸಿಕ 12 ಸಾವಿರ ರೂ. ಗೌರವಧನ ಏರಿಸಬೇಕು. ಅಗತ್ಯ ಆರೋಗ್ಯ ಪರಿಕರಗಳನ್ನು ವಿತರಿಸಬೇಕು ಎಂದು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಶಾಸಕ ಪರಣ್ಣ ಮುನವಳ್ಳಿ, ಈ ಬಗ್ಗೆ ಪ್ರಮಾಣಿಕ ಯತ್ನ ಮಾಡುವುದಾಗಿ ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.