ಶಿವಮೊಗ್ಗ: ಚಲಿಸುತ್ತಿದ್ದ ರೈಲು ಹತ್ತಲು ಹೋದ ಯುವಕ ರೈಲಿಗೆ ಸಿಲುಕಿ ಕೈ-ಕಾಲು ಕಳೆದುಕೊಂಡ ಘಟನೆ ಜಿಲ್ಲೆಯ ತಾಳಗುಪ್ಪ ರೈಲು ನಿಲ್ದಾಣದಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನವೀನ್(18) ಗಂಭೀರವಾಗಿ ಗಾಯಗೊಂಡ ಯುವಕ.
ನವೀನ್ ರೈಲು ಹತ್ತಲು ಹೋಗಿ ಆಯತಪ್ಪಿ ಪ್ಲಾಟ್‌ಫಾರ್ಮ್‌ನಲ್ಲಿ ರೈಲಿಗೆ ಸಿಲುಕಿದ್ದಾನೆ. ತಕ್ಷಣ ರೈಲು ನಿಲ್ದಾಣದಲ್ಲಿದ್ದ ಪ್ರಯಾಣಿಕರು ಮೇಲೆತ್ತುವ ಪ್ರಯತ್ನ ನಡೆಸಿದರು. ಈ ವೇಳೆ ಆತ ತನ್ನ ಒಂದು ಕಾಲು ಒಂದು ಕೈ ಕಳೆದುಕೊಂಡಿದ್ದ. ಸದ್ಯ ಗಂಭೀರವಾಗಿ ಗಾಯಗೊಂಡ ನವೀನ್ನನ್ನು ಸಾಗರದ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರಯಾಣಿಕನ ಪ್ರಾಣ ಕಾಪಾಡಿದ RPF ಮಹಿಳಾ ಕಾನ್ಸ್ಟೇಬಲ್: CCTV Video