ಶಿವಮೊಗ್ಗ: ಕೌಟಂಬಿಕ ಕಲಹದಿಂದ ಬೇಸತ್ತ ಗೃಹಿಣಿಯೊಬ್ಬಳು ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೋರಡಿ ಗ್ರಾಮದಲ್ಲಿ ನಡೆದಿದೆ. ಚೋರಡಿ ಗ್ರಾಮದ ನಿವಾಸಿ ಜ್ಯೋತಿ(25) , ಮಕ್ಕಳಾದ ಸಾನ್ವಿ (2) ಹಾಗೂ 11 ತಿಂಗಳ ಕುಶಾಲ್ ಸಾವಿಗೀಡಾದವರು.
ಕೌಟುಂಬಿಕ ಕಲಹದಿಂದ ಘಟನೆ ನಡೆದಿರುವ ಕಾರಣ ಜ್ಯೋತಿ ಪತಿ ಶಿವಕುಮಾರ್ ಹಾಗೂ ಕುಟುಂಬಸ್ಥರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಥಾಮಸ್ ಕಪ್ ಚಾಂಪಿಯನ್ಸ್ಗೆ ಪ್ರಧಾನಿ ಫೋನ್ ಕಾಲ್.. ಕ್ರೀಡಾ ಸಚಿವಾಲಯದಿಂದ ₹ 1 ಕೋಟಿ ಬಹುಮಾನ ಘೋಷಣೆ