ETV Bharat / state

ಶಿವಮೊಗ್ಗ ನಗರಕ್ಕೆ ನೀರು ಪೂರೈಕೆ ಜವಾಬ್ದಾರಿ ಈಗ ಯಾರದ್ದು ಗೊತ್ತಾ? - Water supply from Gajanur Tunga Dam

ಗಾಜನೂರಿನಿಂದ ಶಿವಮೊಗ್ಗದ ಮಂಡ್ಲಿಯ ಕೃಷ್ಣರಾಜೇಂದ್ರ ಸಾಗರ ನೀರು‌ ಶುದ್ಧೀಕರಣ ಘಟಕಕ್ಕೆ ನೀರು‌ ತಂದು ಶುದ್ಧೀಕರಣ‌ ಮಾಡಿ ಪೈಪ್​ಗಳ ಮೂಲಕ ನೀರನ್ನು ಜನರಿಗೆ ತಲುಪಿಸಲಾಗುತ್ತದೆ.

water supply from gajanur tunga dam
ಶಿವಮೊಗ್ಗ ನಗರಕ್ಕೆ ಗಾಜನೂರಿನ ತುಂಗಾ ಅಣೆಕಟ್ಟೆಯಿಂದ ನೀರು ಸರಬರಾಜು..
author img

By

Published : Sep 26, 2020, 2:50 PM IST

ಶಿವಮೊಗ್ಗ: ನಗರ ನೀರು ಸರಬರಾಜು‌ ಹಾಗೂ ಒಳಚರಂಡಿ ಮಂಡಳಿಗೆ ಶಿವಮೊಗ್ಗದ ನಗರ ವ್ಯಾಪ್ತಿಯ‌ ನೀರು‌ ಪೂರೈಕೆ ಜವಾಬ್ದಾರಿ ನೀಡಲಾಯಿತು.

ನೀರು ಪೂರೈಕೆ ಜವಾಬ್ದಾರಿ ವಹಿಸಿಕೊಂಡ ನಗರ ನೀರು ಸರಬರಾಜು-ಒಳಚರಂಡಿ ಮಂಡಳಿ

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ‌ 750 ಕಿ.ಮೀ. ದೂರದ ವ್ಯಾಪ್ತಿಯಷ್ಟು ನೀರಿನ ಪೂರೈಕೆ ಮಾಡಲಾಗುತ್ತಿದೆ. ಶಿವಮೊಗ್ಗ ನಗರದಲ್ಲೇ‌ 47 ಸಾವಿರ ನೀರಿನ ಸಂಪರ್ಕಗಳಿವೆ. ಶಿವಮೊಗ್ಗ ನಗರಕ್ಕೆ ಗಾಜನೂರಿನ ತುಂಗಾ ಅಣೆಕಟ್ಟೆಯಿಂದ ನೀರು ಸರಬರಾಜು ಆಗುತ್ತದೆ. ಗಾಜನೂರಿನಿಂದ ಶಿವಮೊಗ್ಗದ ಮಂಡ್ಲಿಯ ಕೃಷ್ಣರಾಜೇಂದ್ರ ಸಾಗರ ನೀರು‌ ಶುದ್ಧೀಕರಣ ಘಟಕಕ್ಕೆ ನೀರು‌ ತಂದು ಶುದ್ಧೀಕರಣ‌ ಮಾಡಿ ಪೈಪ್​ಗಳ ಮೂಲಕ ನೀರನ್ನು ಜನರಿಗೆ ತಲುಪಿಸಲಾಗುತ್ತದೆ. ಪ್ರತೀ ದಿನ ಗಾಜನೂರಿನಿಂದ 84 ಎಂಎಲ್‌ಡಿಯಷ್ಟು ನೀರನ್ನು ತರಲಾಗುತ್ತಿದೆ. ಶುದ್ಧೀಕರಣ, ಪ್ರಸರಣ‌ ಈ ಪ್ರಕ್ರಿಯೆಯಲ್ಲಿ ಶೇ. 30ರಷ್ಟು ನೀರು ನಷ್ಟ ಉಂಟಾಗುತ್ತದೆ. ಇದರಿಂದ ನಗರಕ್ಕೆ ಪ್ರತೀ ದಿನ 65 ಎಂಎಲ್‌ಡಿಯಷ್ಟು ನೀರು‌ ಜನರಿಗೆ ತಲುಪುತ್ತದೆ. ಇದರಲ್ಲಿ 10 ಎಂಎಲ್‌ಡಿ ನೀರು ದೊಡ್ಡ ಸಂಸ್ಥೆಗಳಿಗೆ ಬೇಕಾಗುತ್ತದೆ.

ಶಿವಮೊಗ್ಗ ನೀರ ಸರಬರಾಜು ಮಂಡಳಿಗೆ ಪ್ರತೀ ತಿಂಗಳು 50 ಲಕ್ಷ ರೂ. ಹಣ ಬೇಕಿದೆ. 30 ಲಕ್ಷ ಹೊರ ಗುತ್ತಿಗೆ ಕಾರ್ಮಿಕರಿಗೆ ಹಣ ನೀಡಬೇಕಿದೆ. 5 ಲಕ್ಷ ರೂ. ಕಾಯಂ ಸಿಬ್ಬಂದಿಗೆ ಬೇಕಾಗುತ್ತದೆ.‌ ನೀರು ಶುದ್ಧೀಕರಣ ಘಟಕದಲ್ಲಿ ಕ್ಲೋರಿನ್, ಬ್ಲೀಚಿಂಗ್ ಸೇರಿ‌ ಇತರೆ ಖರ್ಚುಗಳೆಂದು‌ 6 ಲಕ್ಷ ರೂ. ಬೇಕಾಗುತ್ತದೆ. ತಿಂಗಳಿಗೆ ಕನಿಷ್ಠ 15 ಲಕ್ಷ ರೂ. ಬೇಕಾಗುತ್ತದೆ. ನೀರು ಎತ್ತುವ ಯಂತ್ರಗಳು‌ 16 ಇವೆ. 160 ಹ್ಯಾಂಡ್ ಪಂಪ್ ಹಾಗೂ 200 ಬೋರ್​ವೆಲ್ ಹಾಗೂ‌ 200 ಹ್ಯಾಂಡ್ ಪಂಪ್​ಗಳಿವೆ.

ಸದ್ಯ ಶಿವಮೊಗ್ಗದಲ್ಲಿ ಹೆಚ್​ಡಿಪಿ‌ಎಲ್ ಪೈಪ್ ಲೈನ್ ಹಾಕಲಾಗಿದೆ. ಇನ್ನು ಪ್ರತೀ‌ ತಿಂಗಳು ಕರ್ನಾಟಕ ನೀರು‌ ಸರಬರಾಜು ಮಂಡಳಿಗೆ 35 ಲಕ್ಷ ರೂ.‌ ಬೇಕಾಗುತ್ತದೆ. ವಾರ್ಷಿಕ ವಸೂಲಿಯಲ್ಲಿ ಕಡಿಮೆಯಾದ ಹಣವನ್ನು ಸರಿಪಡಿಸಿ‌ಕೊಳ್ಳಲಾಗುತ್ರದೆ ಎನ್ನುತ್ತಾರೆ ನೀರು ಸರಬರಾಜು ಹಾಗೂ ಒಳಚರಂಡಿಯ ಎಇ ರಮೇಶ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.