ಶಿವಮೊಗ್ಗ: ಮಕರ ಸಂಕ್ರಮಣದ ನಂತರ ಬಿಜೆಪಿಯ ಚಾಣಕ್ಯ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಜಿಲ್ಲೆಯ ಕೈಗಾರಿಕಾ ನಗರಿ ಎಂದು ಖ್ಯಾತಿ ಪಡೆದ ಭದ್ರಾವತಿಯಲ್ಲಿ ಕ್ಷೀಪ್ರ ಕಾರ್ಯಾಚರಣೆ ಪಡೆ( RAF) ಕೇಂದ್ರದ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಭದ್ರಾವತಿಯಲ್ಲಿ ಅಮಿತ್ ಶಾ ಕಾರ್ಯಕ್ರಮದ ಮಾಹಿತಿ ನೀಡಿದ ಅವರು, ಭದ್ರಾವತಿಯ ಡಿಎಆರ್ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಆರ್ಎಎಫ್ ಕೇಂದ್ರದ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಸುಮಾರು 10 ಸಾವಿರ ಜನರನ್ನು ಸೇರಿಸುವ ಉದ್ದೇಶವಿದೆ. ಇದಕ್ಕಾಗಿ ಬೃಹತ್ ಪೆಂಡಾಲ್ ನಿರ್ಮಾಣ ಮಾಡಲಾಗುತ್ತಿದೆ. ಜನವರಿ 16ರಂದು ಮಧ್ಯಾಹ್ನ 12:30ಕ್ಕೆ ಭದ್ರಾವತಿಗೆ ಚಾಪರ್ ಮೂಲಕ ಆಗಮಿಸಲಿದ್ದಾರೆ. ನಂತರ ಗುದ್ದಲಿ ಪೂಜೆ ನಡೆಸಲಿದ್ದಾರೆ ಎಂದರು.
ಗುದ್ದಲಿ ಪೂಜೆಯ ನಂತರ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ವೇದಿಕೆ ಕಾರ್ಯಕ್ರಮ ಮುಗಿದ ನಂತರ ಭದ್ರಾವತಿಯ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಊಟ ಮುಗಿಸಿ ವಾಪಸ್ ಬೆಂಗಳೂರಿಗೆ ತೆರಳಿದ್ದಾರೆ.
ಇದನ್ನೂ ಓದಿ...ಶಿವಮೊಗ್ಗ: ವಿಡಿಯೋ ಕಾನ್ಫರೆನ್ಸ್ ಮೂಲಕ ಕೈದಿಗಳೊಡನೆ ಮಾತನಾಡಲು ಅವಕಾಶ
RAF ಕೇಂದ್ರದ ವಿಶೇಷ: ಈ ಕೇಂದ್ರವು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳು, ಕೇರಳದ 4, ಗೋವಾದ 2, ಲಕ್ಷದ್ವೀಪದ 1 ಹಾಗೂ ಪುದುಚೇರಿಯ 1 ಜಿಲ್ಲೆಯನ್ನು ಇದು ಒಳಗೊಂಡಿದೆ. ಈ ತಂಡವನ್ನು ಗಲಭೆ ಉಂಟಾದ ಪ್ರದೇಶದಲ್ಲಿ ನಿಯೋಜನೆ ಮಾಡಲಾಗುತ್ತದೆ. ಗಲಭೆ ನಿಯಂತ್ರಣದ ಜೊತೆಗೆ ಆಂತರಿಕ ಭದ್ರತೆಗೂ ಸಹ ಒತ್ತು ನೀಡಲಾಗುತ್ತದೆ. ಆರ್ಎಎಫ್ ಕೇಂದ್ರ ಮೀಸಲು ಪೊಲೀಸ್ ಪಡೆಯ ಅಂಗ ಸಂಸ್ಥೆಯಾಗಿದೆ. ಇದು ಭದ್ರತೆ ನೀಡುವ ಜೊತೆಗೆ ಸಾಮಾಜಿಕ ಸೇವೆಯನ್ನು ಸಹ ನಡೆಸಿಕೊಂಡು ಬಂದಿದೆ.
ಪೊಲೀಸ್ ಇಲಾಖೆಯಿಂದ ಆರ್ಎಎಫ್ಗೆ 50 ಎಕರೆ ಭೂಮಿ: ಆರ್ಎಎಫ್ ಸ್ಥಾಪನೆಗೆ ರಾಜ್ಯ ಪೊಲೀಸ್ ಇಲಾಖೆಯು ತನ್ನ 95 ಎಕರೆಯಲ್ಲಿ ಆರ್ಎಫ್ಗೆ 50.29 ಎಕರೆ ಜಾಗವನ್ನು ನೀಡಿದೆ. ಇದಕ್ಕಾಗಿ ಒಂದು ವರ್ಷದ ನಿರಂತರ ಪ್ರಕ್ರಿಯೆಯಿಂದ ಈಗ ಇದು ಕಾರ್ಯರೂಪಕ್ಕೆ ಬರುತ್ತಿದೆ. ಇನ್ನೂ ಒಂದು ವರ್ಷದಲ್ಲಿ ಇದು ಪೂರ್ಣವಾಗಲಿದೆ. ಇದರಿಂದ ಭದ್ರಾವತಿಗೂ ಆರ್ಥಿಕ ಚಟುವಟಿಕೆಗೂ ಸಹ ಅನುಕೂಲವಾಗಲಿದೆ ಎಂದರು.
ಆರ್ಎಎಫ್ನ ಸಿಬ್ಬಂದಿ ವಿವರ: ಇಲ್ಲಿ ಒಟ್ಟು 449 ಜನ ಸಿಬ್ಬಂದಿ ಇರಲಿದ್ದಾರೆ. ಸದ್ಯ ಒಂದು ಬೆಟಾಲಿಯನ್ ಇಲ್ಲಿ ಇರಲಿದೆ.
ಕಂಮಾಂಡೆಂಟ್ -01
ಡೆಪ್ಯೂಟಿ ಕಂಮಾಂಡೆಂಟ್ -02
ಅಸಿಸ್ಟೆಂಟ್ ಕಮಾಂಡೆಂಟ್ -06
ಇನ್ಸ್‌ಪೆಕ್ಟರ್ -16
ಸಬ್ ಇನ್ಸ್‌ಪೆಕ್ಟರ್ -32
ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ -34
ಹೆಡ್ ಕಾನ್ಸ್‌ಟೇಬಲ್ಸ್ -264
ಕಾನ್ಸ್‌ಟೇಬಲ್ಸ್ -34
ಹೀಗೆ ಒಟ್ಟು 445 ಜನ ಸಿಬ್ಬಂದಿ ಇರಲಿದ್ದಾರೆ. ಇದರಲ್ಲಿ 399 ಪುರುಷರು, 46 ಪುರುಷರು ಇರಲಿದ್ದಾರೆ ಎಂದರು. ಇದೇ ವೇಳೆ ಕಾರ್ಯಕ್ರಮದ ಪೆಂಡಾಲ್ ಕಾಮಗಾರಿ ವೀಕ್ಷಣೆ ಮಾಡಿದರು.